ಭಾನುವಾರ, ಏಪ್ರಿಲ್ 11, 2021
30 °C

ಬಿರುಕು ಬಿಟ್ಟ ವಿಟ್ಲ-ಮೆಸ್ಕಾಂ ರಸ್ತೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿರುಕು ಬಿಟ್ಟ ವಿಟ್ಲ-ಮೆಸ್ಕಾಂ ರಸ್ತೆ!

ವಿಟ್ಲ: ವಿಟ್ಲ ಸಂತೆ ಮಾರುಕಟ್ಟೆ ಹಾಗೂ ಮೆಸ್ಕಾಂ ಸಂಪರ್ಕ ರಸ್ತೆ ಮಧ್ಯದಲ್ಲಿದ್ದ ಕಾಂಕ್ರಿಟ್ ಒಳಚರಂಡಿ ಬಿರುಕುಬಿಟ್ಟ ಪರಿಣಾಮ ಅಲ್ಲಿ ಅಪಾಯಕಾರಿ ಹೊಂಡ ನಿರ್ಮಾಣವಾಗಿದ್ದು, ಆತಂಕಕ್ಕೆ ಕಾರಣವಾಗಿದೆ.ಈ ರಸ್ತೆಯು ವಿಟ್ಲ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರ, ಮೆಸ್ಕಾಂ ಕಚೇರಿ, ಸಂತೆ ಮಾರುಕಟ್ಟೆ, ದೇವಸ್ಯ, ಪೊನ್ನೋಟು ಮುಂತಾದ ಪ್ರದೇಶಗಳನ್ನು ಸಂಪರ್ಕಿಸುವ ಏಕೈಕ ರಸ್ತೆಯಾಗಿದೆ. ಇದೇ ರಸ್ತೆಯಲ್ಲಿ ಮಂಗಳವಾರ ವಾರದ ಸಂತೆ ನಡೆಯುತ್ತಿದ್ದು, ನೂರಾರು ಜನ ಸೇರುತ್ತಾರೆ. ಮೆಸ್ಕಾಂ ಹಾಗೂ ಐಟಿಐ ಮುಂತಾದ ಕಡೆ ಪ್ರತಿನಿತ್ಯ ನೂರಾರು ಮಂದಿ ಸಂಚರಿಸುತ್ತಿರುತ್ತಾರೆ.ರಸ್ತೆ ಮಧ್ಯೆ ಹೊಂಡ ನಿರ್ಮಾಣವಾಗಿರುವ ಪರಿಣಾಮ ಈ ರಸ್ತೆಯ ಪರಿಚಯ ಇಲ್ಲದ ವಾಹನಗಳ ಚಕ್ರಗಳು  ಹೊಂಡದಲ್ಲಿ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ. 3-4 ವರ್ಷ ಹಿಂದಷ್ಟೇ ಈ ರಸ್ತೆಗೆ ಡಾಂಬರೀಕರಣ ನಡೆದಿದ್ದು, ಈ ಸಂದರ್ಭ ಅಲ್ಲಿ ಒಂದು ಕಾಂಕ್ರಿಟ್ ಒಳಚರಂಡಿ ನಿರ್ಮಿಸಲಾಗಿತ್ತು. ಅದಾದ ಬಳಿಕ ಇಲ್ಲಿ ಯಾವುದೇ ಕಾಮಗಾರಿ ನಡೆದಿಲ್ಲ ಎಂದು ದೂರುತ್ತಾರೆ ಸ್ಥಳೀಯರು.ಅದಲ್ಲದೇ ವಿಟ್ಲದಿಂದ ಸಂತೆಮಾರ್ಗವಾಗಿ ಮೆಸ್ಕಾಂ, ಐ.ಟಿ.ಐ.ಗಳಿಗೆ ಸಂಚರಿಸುವ ರಸ್ತೆಗಳು ಕೆಸರುಮಯವಾಗಿದ್ದು, ಈ ರಸ್ತೆಯಲ್ಲಿ ನಡೆಯುವಾಗ ಹೊಳೆಯಲ್ಲಿ ನಡೆಯುವ ಅನುಭವವಾಗುತ್ತದೆ ಎಂದು ಸ್ಥಳೀಯರು ದೂರಿದ್ದಾರೆ.ಈ ರಸ್ತೆ ಮಧ್ಯದಲ್ಲಿರುವ ಹೊಂಡ ದಿನೇ ದಿನೇ ವಿಚಿತ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಇನ್ನೆರಡು ದಿನದಲ್ಲಿ ಆ ಕಾಂಕ್ರಿಟ್ ಒಳಚರಂಡಿ ಸಂಪೂರ್ಣವಾಗಿ ಕುಸಿಯಲಿದೆ ಎಂಬ ಅಭಿಪ್ರಾಯ ಸಾರ್ವಜನಿಕರದ್ದು. ಸಂಬಂಧಪಟ್ಟ ಇಲಾಖೆ ಈ ಅಪಾಯಕಾರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಸ್ಥಳೀಯರಾದ ಹರೀಶ್ ಒತ್ತಾಯಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.