ಸೋಮವಾರ, ಮೇ 17, 2021
21 °C

ಬಿರುಗಾಳಿ: ಕುಸಿದ ಮನೆ, ಪಾರಾದ ಬಾಲಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೋಮವಾರಪೇಟೆ: ಸುರಿಯು ತ್ತಿರುವ ಮಳೆಯಿಂದ ಮನೆಯೊಂದು ಕುಸಿದಿದ್ದು, ಮನೆಯೊಳಗಿದ್ದ ಬಾಲಕಿ ಪ್ರಾಣಾಪಾಯದಿಂದ ಪಾರಾದ ಘಟನೆ ಸ್ಥಳಿಯ ಎಂ.ಡಿ. ಬ್ಲಾಕ್‌ನಲ್ಲಿ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ.ಮಂಜುನಾಥ್ ಎಂಬುವವರ ವಾಸದ ಮನೆ ಭಾಗಶಃ ಕುಸಿದಿದ್ದು, ಪಕ್ಕದ ಕೊಠಡಿಯಲ್ಲಿ ಮಲಗಿದ್ದ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಂಜುನಾಥ್ ಹಾಗೂ ಪತ್ನಿ ಕೂಲಿ ಕೆಲಸಕ್ಕೆ ತೆರಳಿದ್ದು, ಇಬ್ಬರು ಹೆಣ್ಣು ಮಕ್ಕಳು ಶಾಲೆಗೆ ತೆರಳಿದ್ದ ಸಂದರ್ಭ ಘಟನೆ ಸಂಭವಿಸಿದೆ.22.6 ಮಿ.ಮೀ ಮಳೆ

ಕುಶಾಲನಗರ: ಕಳೆದ 15 ದಿನಗಳಿಂದ ಎಡೆಬಿಡದೇ ಸುರಿಯುತ್ತಿರುವ ಮಳೆ ಮಂಗಳವಾರವೂ ಕುಶಾಲನಗರ ಮತ್ತು ಸುಂಟಿಕೊಪ್ಪ ಹೋಬಳಿ ಯಾದ್ಯಂತ ಮುಂದುವರಿ ದಿದ್ದು, ಮಂಗಳವಾರವೂ ಧಾರಕಾರ ವಾಗಿ ಸುರಿಯಿತು.ಕಳೆದ ಮೂರು ದಿನಗಳಿಂದ ಎರಡೂ ಹೋಬಳಿ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ. ಕುಶಾಲನಗರದಲ್ಲಿ ಮಂಗಳವಾರ ಇಡೀ ದಿನ ಸುರಿದ ಮಳೆಯಿಂದಾಗಿ ಸಂತೆ ದಿನವಾದ್ದರಿಂದ ವ್ಯಾಪಾರಸ್ಥರು ಪರದಾಡುವಂತ ಸ್ಥಿತಿ ನಿರ್ಮಾಣವಾಯಿತು.ಶಾಲೆ ಹಾಗೂ ಕಾಲೇಜುಗಳ ವಿದ್ಯಾರ್ಥಿಗಳು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇದರ ನಡುವೆಯೇ ಕೊಡೆ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದ್ದು, ಕೊಡೆ ಕೊಳ್ಳಲು ಜನರು ಮುಗಿ ಬೀಳುತ್ತಿದ್ದ ದೃಶ್ಯ ಮಂಗಳವಾರ ಕಂಡುಬಂತು.ಭಾಗಮಂಡಲ ವ್ಯಾಪ್ತಿ ಸೇರಿದಂತೆ ಮಡಿಕೇರಿ ಸುಂಟಿಕೊಪ್ಪ, ಸಿದ್ದಾಪುರ ಗಳಲ್ಲಿ ಧಾರಾಕಾರವಾಗಿ ಸುರಿಯು ತ್ತಿರುವ ಮಳೆಯಿಂದಾಗಿ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗಿದೆ. ಅಲ್ಲದೆ ಕಾವೇರಿ ತುಂಬಿ ಹರಿಯುತ್ತಿದೆ.ಹೋಬಳಿಯಾದ್ಯಂತ ಕಳೆದ ವರ್ಷಕ್ಕೆ ಇದೇ ಸಮಯಕ್ಕೆ ಕೇವಲ 15.2 ಮಿ.ಮೀ ಮಳೆ ಸುರಿದಿತ್ತು. ಆದರೆ ಪ್ರಸ್ತುತ ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ 22.6 ಮಿ.ಮೀ ಮಳೆಯಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.