ಬಿರುಸಿನ ವಹಿವಾಟು ನಿರೀಕ್ಷೆ?

7

ಬಿರುಸಿನ ವಹಿವಾಟು ನಿರೀಕ್ಷೆ?

Published:
Updated:

ನವದೆಹಲಿ (ಪಿಟಿಐ): ವಿದೇಶಿ ವಿತ್ತೀಯ ಹೂಡಿಕೆದಾರರ (ಎಫ್‌ಐಐ) ಚಟುವಟಿಕೆಯಿಂದ ಕಳೆದ ವಾರ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಆರು ತಿಂಗಳಲ್ಲೇ ಗರಿಷ್ಠ ಮಟ್ಟ 18,289 ಅಂಶಗಳನ್ನು ತಲುಪಿದೆ. ಆದರೆ, ಈ ವಾರ ಬಿರುಸಿನ ಚಟುವಟಿಕೆ ದಾಖಲಾಗಲಿದ್ದು, ಖರೀದಿ ಮತ್ತು ಮಾರಾಟದ ಒತ್ತಡ ಹೆಚ್ಚುವುದರಿಂದ  ಸೂಚ್ಯಂಕ ಇಳಿಯುವ ಸಾಧ್ಯತೆಗಳು ಹೆಚ್ಚಿವೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

`ಇತ್ತೀಚಿನ ದಿನಗಳಲ್ಲಿ ಷೇರುಪೇಟೆಯು ಗರಿಷ್ಠ ವೇಗದ ಏರಿಕೆ ಕಾಣುತ್ತಿದೆ. ಚಿಲ್ಲರೆ ಹೂಡಿಕೆದಾರರು ವಹಿವಾಟಿನಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದು, `ಎಫ್‌ಐಐ~ ಒಳ ಹರಿವು ಕೂಡ ಹೆಚ್ಚಿದೆ~ ಎನ್ನುತ್ತಾರೆ ಇನ್ವೆಂಚರ್ ಗ್ರೋಥ್ ಅಂಡ್ ಸೆಕ್ಯುರಿಟೀಸ್‌ನ ಮುಖ್ಯಸ್ಥ ಮಿಲಾನ್ ಬವಿಶಿ.

ಕಳೆದ ಏಳು ವಾರಗಳಿಂದ ಸೂಚ್ಯಂಕ ಏರಿಕೆಯ ಹಾದಿಯಲ್ಲಿದ್ದು, ಈ ಅವಧಿಯಲ್ಲಿ ಸುಮಾರು 541 ಅಂಶಗಳಷ್ಟು ಏರಿಕೆ ಪಡೆದಿದೆ. ಅಲ್ಪ ಅವಧಿಯಲ್ಲಿ ಗಳಿಸಿರುವ ಗರಿಷ್ಠ ಏರಿಕೆಯೂ ಇದಾಗಿದೆ. ಒಟ್ಟಾರೆ ಹಣದುಬ್ಬರ ದರ ಇಳಿದಿರುವುದು ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅಲ್ಪಾವಧಿ ಬಡ್ಡಿ ದರಗಳನ್ನು ತಗ್ಗಿಸುವ ಸೂಚನೆ ನೀಡಿರುವುದು ಹೂಡಿಕೆದಾರರ ಪಾಲಿಗೆ ಶುಕ್ರದೆಸೆ ತಂದಿದೆ.

ಕಳೆದ ಒಂದು ವಾರದಲ್ಲಿ `ಎಫ್‌ಐಐ~ ಹೂಡಿಕೆದಾರರು ರೂ. 4,518 ಕೋಟಿ ಮೊತ್ತದ ಷೇರುಗಳನ್ನು ಖರೀದಿಸಿದ್ದಾರೆ. ಗ್ರೀಕ್ ಪರಿಹಾರ ಕೊಡುಗೆಗೆ ಸಂಬಂಧಿಸಿದಂತೆ ಯೂರೋಪ್ ಒಕ್ಕೂಟದ ನಾಯಕರು ಮತ್ತು ಯೂರೋಪಿಯನ್ ಸೆಂಟ್ರಲ್ ಬ್ಯಾಂಕ್ (ಇಸಿಬಿ)  ಒಪ್ಪಂದಕ್ಕೆ ಬಂದಿರುವುದರಿಂದ ವಾರಾಂತ್ಯದಲ್ಲಿ ಜಾಗತಿಕ ಷೇರು ಪೇಟೆಗಳು ಏರಿಕೆ ಕಂಡಿವೆ. ಈ ವಾರದ ವಹಿವಾಟಿನ ಮೇಲೆ ಈ ಸಂಗತಿಗಳು ಪ್ರಭಾವ ಬೀರಲಿವೆ ಎಂದು `ಸಿಎನ್‌ಐ~ ಸಂಶೋಧನಾ ಸಂಸ್ಥೆಯ ಅಧ್ಯಕ್ಷ ಕಿಶೋರ್ ಓಸ್ವಾಲ್ ಅಭಿಪ್ರಾಯಪಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry