ಬಿರುಸುಗೊಂಡ ಬುಲ್‌ಬುಲ್

7

ಬಿರುಸುಗೊಂಡ ಬುಲ್‌ಬುಲ್

Published:
Updated:

ದರ್ಶನ್ ಅಭಿನಯದ `ಬುಲ್‌ಬುಲ್~ ಚಿತ್ರಕ್ಕೆ ಬೆಂಗಳೂರಿನಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಮೀನಾ ತೂಗುದೀಪ ಶ್ರೀನಿವಾಸ್ ಚಿತ್ರದ ನಿರ್ಮಾಪಕರು.  ಈ ಹಿಂದೆ ಅವರು ತಮ್ಮ ಕಿರಿಯ ಮಗ ದಿನಕರ್ ತೂಗುದೀಪ ಅವರ ನಿರ್ದೇಶನದಲ್ಲಿ `ಜೊತೆಜೊತೆಯಲಿ~ ಹಾಗೂ `ನವಗ್ರಹ~ ಚಿತ್ರಗಳನ್ನು ನಿರ್ಮಿಸಿದ್ದರು.

 

`ಬುಲ್ ಬುಲ್~ ನಿರ್ದೇಶನದ ಹೊಣೆ ಎಂ.ಡಿ. ಶ್ರೀಧರ್ ಅವರದ್ದು. ಇದು ತೆಲುಗಿನ `ಡಾರ್ಲಿಂಗ್‌` ಚಿತ್ರದ ರೀಮೇಕ್.  ತೂಗುದೀಪ ಪ್ರೊಡಕ್ಷನ್ಸ್‌ನ ಮೊದಲ ಚಿತ್ರ `ಜೊತೆಜೊತೆಯಲಿ~ ಮೂಲಕ ಪ್ರಥಮ ಬಾರಿಗೆ ಸ್ವತಂತ್ರ ಸಂಗೀತ ನಿರ್ದೇಶಕರಾಗಿ ಹೊರಹೊಮ್ಮಿದ ವಿ.ಹರಿಕೃಷ್ಣ `ಬುಲ್‌ಬುಲ್~ ಚಿತ್ರಕ್ಕೂ ಸಂಗೀತ ನೀಡುತ್ತಿದ್ದಾರೆ.ಕವಿರಾಜ್ ಗೀತರಚನೆ ಮಾಡುವುದರೊಂದಿಗೆ ಸಂಭಾಷಣೆಯನ್ನೂ ಬರೆದಿದ್ದಾರೆ. ಖ್ಯಾತ ಛಾಯಾಗ್ರಾಹಕ ಕೃಷ್ಣಕುಮಾರ್(ಕೆ ಕೆ) ಅವರ ಛಾಯಾಗ್ರಹಣ, ಸೌಂದರರಾಜ್ ಸಂಕಲನ, ರವಿವರ್ಮ ಸಾಹಸ ನಿರ್ದೇಶನ, ಈಶ್ವರಿ ಕುಮಾರ್ ಕಲಾ ನಿರ್ದೇಶನವಿದೆ. ತಾರಾಬಳಗದಲ್ಲಿ ಅಂಬರೀಶ್, ದರ್ಶನ್, ರಚಿತಾ, ಅಶೋಕ್, ಚಿತ್ರಾಶೆಣೈ, ಶರಣ್, ರಮೇಶ್‌ಭಟ್, ಸಿಹಿಕಹಿ ಚಂದ್ರು, ಸಾಧುಕೋಕಿಲಾ, ಟೆನ್ನಿಸ್‌ಕೃಷ್ಣ ಮುಂತಾದವರಿದ್ದಾರೆ. ್ಢ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry