ಬಿರುಸು ಪಡೆದ ‘ಆರ್ಯನ್’

7

ಬಿರುಸು ಪಡೆದ ‘ಆರ್ಯನ್’

Published:
Updated:

ಶಿವರಾಜ್ ಕುಮಾರ್ ಅಭಿನಯದ ‘ಆರ್ಯನ್’ ಚಿತ್ರಕ್ಕೆ ಬೆಂಗಳೂರಿನಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಡಿ. ಕಮರ್ ಚಿತ್ರ ನಿರ್ಮಿಸುತ್ತಿದ್ದಾರೆ.  ಡಿ. ರಾಜೇಂದ್ರಬಾಬು ನಿರ್ದೇಶಕ.  ರಮ್ಯಾ ನಾಯಕಿಯಾಗಿರುವ ಈ ಚಿತ್ರದ ತಾರಾಬಳಗದಲ್ಲಿ ಶರತ್‌ಬಾಬು, ಬುಲ್ಲೆಟ್‌ಪ್ರಕಾಶ್, ವಿನಯಾ ಪ್ರಸಾದ್, ಅರ್ಚನಾಗುಪ್ತ ಇತರರು ಇದ್ದಾರೆ. ಚಂದ್ರಶೇಖರ್ ಛಾಯಾಗ್ರಹಣ, ಜನಾರ್ದನ್ ಮಹರ್ಷಿ ಸಂಭಾಷಣೆ, ಜೆಸ್ಸಿಗಿಫ಼್ಟ್ ಸಂಗೀತ ಚಿತ್ರಕ್ಕಿದೆ.  ಜಯಂತ ಕಾಯ್ಕಿಣಿ, ಕವಿರಾಜ್, ಯೋಗರಾಜ್ ಭಟ್, ನಾಗೇಂದ್ರಪ್ರಸಾದ್ ಸಾಹಿತ್ಯ ಬರೆದಿದ್ದಾರೆ.ಮಾತು ಮಗಿಸಿದ ‘ಬ್ರಹ್ಮ’ 

ಮಂಜುನಾಥ ಬಾಬು (ಅಮೃತಹಳ್ಳಿ) ನಿರ್ಮಿಸುತ್ತಿರುವ ‘ಬ್ರಹ್ಮ’ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಎರಡು ಹಾಡು ಹಾಗೂ ಸಾಹಸ ಸನ್ನಿವೇಶವೊಂದರ ಚಿತ್ರೀಕರಣ  ಬಾಕಿಯಿದೆ. ಉಪೇಂದ್ರ ಅಭಿನಯದ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಆರ್. ಚಂದ್ರು ನಿರ್ದೇಶಿಸುತ್ತಿದ್ದಾರೆ. ಪ್ರಣೀತಾ, ರಂಗಾಯಣರಘು, ಸಾಧುಕೋಕಿಲ, ಶಯ್ಯಾಜಿ ಶಿಂಧೆ, ನಾಜರ್, ರಾಹುಲ್‌ ದೇವ್, ಸೋನು ಸೂಧ್, ಸುಭಾಷ್ ಶೆಟ್ಟಿ, ಗಿರೀಶ್ ಕಾರ್ನಾಡ್, ಸುಚೇಂದ್ರ ಪ್ರಸಾದ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಶೇಖರ್ ಚಂದ್ರ ಛಾಯಾಗ್ರಹಣ, ಗುರುಕಿರಣ್ ಸಂಗೀತ, ಕೆ.ಎಂ. ಪ್ರಕಾಶ್ ಸಂಕಲನ, ಶಿವಕುಮಾರ್, ಇಸ್ಮಾಯಿಲ್

ಕಲಾ ನಿರ್ದೇಶನ, ಥ್ರಿಲ್ಲರ್ ಮಂಜು, ವಿಜಯ್ ಸಾಹಸ ನಿರ್ದೇಶನ ಹಾಗೂ ಪ್ರದೀಪ್ ಆಂಟೋನಿ ನೃತ್ಯ ನಿರ್ದೇಶನ ‘ಬ್ರಹ್ಮ’ ಚಿತ್ರಕ್ಕಿದೆ.

‘ಜಂಬೂಸವಾರಿ’...ಎ. ಹರಿಪ್ರಸಾದ್‌ರಾವ್ ನಿರ್ಮಿಸುತ್ತಿರುವ ‘ಜಂಬೂಸವಾರಿ’ ಚಿತ್ರದ ‘ತುಸುಮೆಲ್ಲನೆ ಕೊಂಚ ದೂರ ಜೊತೆಯಾಗಿ ಸಾಗುವ ಬಾರಾ‘

ಎಂಬ ಹಾಡಿನ ಚಿತ್ರೀಕರಣ ಬೆಂಗಳೂರಿನ ಅರಮನೆ ಆವರಣದಲ್ಲಿ ನಡೆಯಿತು. ಪ್ರಜ್ವಲ್, ನಿಕ್ಕಿ ಹೆಜ್ಜೆಹಾಕಿದರು. ಈ ಹಾಡಿಗೆ ಹರಿಕೃಷ್ಣ ನೃತ್ಯ ನಿರ್ದೇಶನ ಮಾಡಿದರು. ವೇಣುಗೋಪಾಲ್ ಕೆ.ಸಿ ಈ ಚಿತ್ರದ ನಿರ್ದೇಶಕರು.ಎಸ್. ಪ್ರೇಮಕುಮಾರ್ ಸಂಗೀತ ನಿರ್ದೇಶನ, ಪ್ರತಾಪ್ ಛಾಯಾಗ್ರಹಣ, ರಮೇಶ್‌ಬಾಬು ಸಂಕಲನ ಚಿತ್ರಕ್ಕಿದೆ.ಕೊಡಚಾದ್ರಿಯಲ್ಲಿ ‘ಅಜಿತ್’

‘ಅಜಿತ್’ ಚಿತ್ರದ ಎರಡು ಹಾಡುಗಳ ಚಿತ್ರೀಕರಣ ಕೊಡಚಾದ್ರಿ ಹಾಗೂ ಮಡಿಕೇರಿಯಲ್ಲಿ ನಡೆಯಲಿದೆ. ಚಿರಂಜೀವಿ ಸರ್ಜಾ ಹಾಗೂ ನಿಕ್ಕಿ ಅಭಿನಯಿಸುವ ಈ ಹಾಡುಗಳಿಗೆ ಹರ್ಷ ನೃತ್ಯ ನಿರ್ದೇಶನ ಮಾಡಲಿದ್ದಾರೆ. ಮಹೇಶ್‌ಬಾಬು ಚಿತ್ರದ ನಿರ್ದೇಶಕರು. ಯುವನ್‌ ಶಂಕರ್‌ ರಾಜಾರ ಸಂಗೀತ ನಿರ್ದೇಶನವಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry