ಬಿಲ್ಲಾ ಮೇಲೆ ನಿರೀಕ್ಷೆಯ ಭಾರ

7

ಬಿಲ್ಲಾ ಮೇಲೆ ನಿರೀಕ್ಷೆಯ ಭಾರ

Published:
Updated:

ಅಜಿತ್ ಅಭಿನಯದ ಬಿಲ್ಲಾ 2 ಚಿತ್ರ ಬಿಡುಗಡೆಗೂ ಮುನ್ನವೇ ಸದ್ದು ಮಾಡುತ್ತಿದೆ. ಇದು ಕಾಲಿವುಡ್‌ನಲ್ಲೇ ಹೊಸತೊಂದು ಇತಿಹಾಸ ಸೃಷ್ಟಿಸುತ್ತದೆ ಎಂಬುದು ಸಿನಿ ಪಂಡಿತರ ಲೆಕ್ಕಾಚಾರ.ಬಿಲ್ಲಾ ಈ ಪರಿ ಹವಾ ಮೂಡಿಸಲು ಕಾರಣ ಇದೆ. `ಬಿಲ್ಲಾ 2~ ಚಿತ್ರದ ಹಕ್ಕು ಬರೋಬ್ಬರಿ 40 ಕೋಟಿ ರೂಪಾಯಿಗೆ ಬಿಕರಿಯಾಗಿದೆ. ಅಜಿತ್ ನಟಿಸಿದ ಚಿತ್ರವೊಂದು ಇಷ್ಟೊಂದು ಹಣಕ್ಕೆ ಮಾರಾಟವಾಗಿರುವುದು ಇದೇ ಮೊದಲು. ಅಂದಹಾಗೆ, ತಮಿಳುನಾಡಿನಲ್ಲಿ ಚಿತ್ರ ವಿತರಣೆಯ ಹಕ್ಕನ್ನು ಆಸ್ಕರ್ ರವಿಚಂದ್ರನ್ 26 ಕೋಟಿಗೆ ಖರೀದಿಸಿದ್ದಾರೆ.`ಬಿಲ್ಲಾ 2 ಬಿಡುಗಡೆಗೂ ಮುನ್ನವೇ ಜನರಲ್ಲಿ ಸಾಕಷ್ಟು ಕುತೂಹಲ ಹುಟ್ಟುಹಾಕಿರುವ ಚಿತ್ರ. ಐಪಿಎಲ್ ನಡೆಯುತ್ತಿರುವ ಸಂದರ್ಭದಲ್ಲಿ ಕ್ರಿಕೆಟ್ ಪ್ರಿಯರನ್ನು ಥಿಯೇಟರ್‌ಗೆ ಎಳೆದು ತರುವುದು ಸುಲಭದ ಮಾತಲ್ಲ. ಆ ಶಕ್ತಿ ಈ ಚಿತ್ರಕ್ಕೆ ಇದೆ. ಐಎನ್‌ಇ ಸಹಯೋಗದಲ್ಲಿ ತಮಿಳುನಾಡಿನಲ್ಲಿ ಚಿತ್ರ ಬಿಡುಗಡೆ ಮಾಡುವುತ್ತಿರುವುದು ನನಗೆ ಖುಷಿಯ ವಿಚಾರ. ಬಿಲ್ಲಾನನ್ನು ಪ್ರಮೋಟ್ ಮಾಡುವ ಸಲುವಾಗಿ ಈಗಾಗಲೇ ಸಾಕಷ್ಟು ಪ್ರಚಾರ ತಂತ್ರ ಕೈಗೊಂಡಿದ್ದೇನೆ~ ಎಂದು ಖುಷಿಯಿಂದ ಬೀಗುತ್ತಿದ್ದಾರೆ ಆಸ್ಕರ್ ರವಿಚಂದ್ರನ್.ಅಂದಹಾಗೆ, `ಬಿಲ್ಲಾ 2~ ಗ್ಯಾಂಗ್‌ಸ್ಟರ್ ಸಿನಿಮಾ. ಬಿಲ್ಲಾ ಸಿನಿಮಾ ಹುಟ್ಟುಹಾಕಿದ್ದ ಕ್ರೇಜ್‌ನ್ನು ಬಿಲ್ಲಾ 2 ಹುಟ್ಟುಹಾಕಲಿದೆ ಎಂಬುದು ಎಲ್ಲರ ಲೆಕ್ಕಾಚಾರ. ಬಿಲ್ಲಾ 2ನಲ್ಲಿ ಮೈನವಿರೇಳಿಸುವ ಆ್ಯಕ್ಷನ್ ಇದೆ. ರೋಚಕ ಕಥೆ ಇದೆ. ಹಾಟ್‌ಬ್ಯೂಟಿ ಮೀನಾಕ್ಷಿಯ ಐಟಂ ನಂಬರ್ ಇದೆ. ಹಾಗಾಗಿ ಪ್ರೇಕ್ಷಕರ ಮನಸ್ಸನ್ನು ಬಿಲ್ಲಾ ಗೆದ್ದೇ ಗೆಲ್ಲುತ್ತಾನೆ ಎಂಬುದು ಚಿತ್ರ ತಂಡದ ನಂಬಿಕೆ.ಪಾರ್ವತಿ ಒಮನ್‌ಕುಟ್ಟನ್, ಬ್ರೆಜಿಲಿಯನ್ ಮಾಡೆಲ್ ಬ್ರೂನಾ ಅಬ್ದುಲ್ಲಾ, ವಿದ್ಯುತ್ ಜಾಮ್‌ವಾಲ್ ಹಾಗೂ ಸುಧಾಂಶು ಪಾಂಡೆ ಮತ್ತಿತರರು ತಾರಾಗಣದಲ್ಲಿರುವ `ಬಿಲ್ಲಾ 2~ ಚಿತ್ರವನ್ನು ಚಕ್ರಿ ನಿರ್ದೇಶಿಸ್ದ್ದಿದಾರೆ. ಜೂನ್ ಮೊದಲ ವಾರದಲ್ಲಿ ಬಿಲ್ಲಾ ತೆರೆಯ ಮೇಲೆ ಅಬ್ಬರಿಸಲಿದ್ದಾನೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry