ಗುರುವಾರ , ಫೆಬ್ರವರಿ 25, 2021
20 °C

ಬಿಲ್ವಪತ್ರೆಯಿಂದ ಲಿಂಗರತ್ನ ಪೂಜಿಸಿ..

ರವಿ ಸೂರಿ Updated:

ಅಕ್ಷರ ಗಾತ್ರ : | |

ಬಿಲ್ವಪತ್ರೆಯಿಂದ ಲಿಂಗರತ್ನ ಪೂಜಿಸಿ..

ಗೋಕರ್ಣ: ಶಿವರಾತ್ರಿ ಎನ್ನುವ ಶಬ್ದವೇ ಮಂಗಲವನ್ನು ನೀಡುವ ರಾತ್ರಿಯೆನಿಸಿದೆ. ಇದು ಮಾಘಮಾಸ ಕೃಷ್ಣಪಕ್ಷದ ಚತುರ್ದಶಿಯ ರಾತ್ರಿಯಾಗಿದೆ. ಆ ದಿನ ರಾತ್ರಿ ಶಿವನು ಲಿಂಗ ರೂಪದಲ್ಲಿ ಆವಿರ್ಭವಿಸಿದ ಶುಭ ಕಾಲವಾಗಿದ್ದು, ಅದನ್ನು ಶಿವನು ಆವಿರ್ಭವಿಸಿದ ದಿನವೆಂದು  ಶಿವರಾತ್ರಿಯನ್ನು ವ್ರತದಂತೆ ಆಚರಿಸಲಾಗುತ್ತದೆ.ಈ ದಿನವಿಡೀ ಉಪವಾಸವಿದ್ದು ರಾತ್ರಿಯ ಯಾಮಗಳಲ್ಲಿ ಜಾಗರಣೆ ಮಾಡುತ್ತಾ ಆಚರಿಸಲಾ ಗುತ್ತದೆ. ನಾಡಿನ ಪ್ರಸಿದ್ಧ ದೇವಾಲಯಗಳಲ್ಲಿ ಶಿವನಿಗೆ ರಾತ್ರಿ ಶಿವಯೋಗದ ವೇಳೆ (ಮಧ್ಯರಾತ್ರಿ) ವಿಶೇಷ ಪೂಜೆ ನಡೆಸಲಾಗುತ್ತದೆ.ವ್ರತವನ್ನಾಚರಿಸುವವರು ಮೊದಲು ಯಾಮದಲ್ಲಿ ‘ಶಿವ’ ಎಂಬ ಹೆಸರಿನಲ್್ಲೂ, ಎರಡನೇ ಯಾಮದಲ್ಲಿ ‘ಶಂಕರ’ ಎಂಬ ಹೆಸರಿನಿಂದಲೂ, ಮೂರನೇ ಯಾಮದಲ್ಲಿ ‘ಮಹೇಶ್ವರ’ ಎಂಬ ಹೆಸರಿನಿಂದ ಮತ್ತು ನಾಲ್ಕನೇ ಯಾಮದಲ್ಲಿ ‘ರುದ್ರ ಎಂಬ ಹೆಸರಿನಿಂದ ಶಿವನನ್ನು ಪೂಜಿಸಿ ಅರ್ಘ್ಯವನ್ನು ಬಿಡುತ್ತಾರೆ.ಶಿವನ ಪೂಜೆಯಲ್ಲಿ ತೈಲಾಭ್ಯಂಗ, ಪಂಚಾಮೃತ, ಉಷ್ಣೋದಕ, ಗಂಧೋದಕ  ಸ್ನಾನ ಮೊದಲಾದವು ಗಳಿಂದ ಶಿವನನ್ನು ಪೂಜಿಸಲಾಗುತ್ತದೆ. ಗೋರೋಚನ, ಕಸ್ತೂರಿ, ಕುಂಕುಮ ಕರ್ಪೂರ, ಅಗರು ಚಂದನಗಳನ್ನು ಶಿವಲಿಂಗಕ್ಕೆ ಲೇಪಿಸಲಾಗು ತ್ತದೆ. ದತ್ತೂರ, ಕರವೀರ ಪುಷ್ಪಗಳು ಹಾಗೂ ಬಿಲ್ವಪತ್ರೆ ಶಿವಯೋಗದ ವೇಳೆ ಅತಿಶ್ರೇಷ್ಠವಾದವು.ಮರುದಿನ ಬೆಳಿಗ್ಗೆ ವ್ರತದ ಸಮಾಪ್ತಿಯಾಗುವಾಗ, ಸಂಸಾರದ ದುಃಖದಲ್ಲಿ ಬಿದ್ದಿರುವ ನನ್ನನ್ನು ಈ ವ್ರತದಿಂದ ಉದ್ಧರಿಸಿ ಜ್ಞಾನವನ್ನು ಕೊಡು ಎಂದು ಶಿವನಲ್ಲಿ ಪ್ರಾರ್ಥಿಸಲಾಗುತ್ತದೆ.  ಏನೂ ಸಿಗದಿದ್ದರೂ ಶಿವನ ತಲೆಯ ಮೇಲೆ ಶಿವಯೋಗದ ದಿನ ಬಿಲ್ವಪತ್ರೆಯೊಂದನ್ನು ಅರ್ಚಿಸಿದರೂ ಅಶ್ವಮೇಧಾದಿ ಯಾದದಂತಹ ಪುಣ್ಯ ಪ್ರಾಪ್ತಿಯಾಗುವುದೆ ಎಂದು ಹೇಳಲಾಗಿದೆ.ಶ್ರೀಕ್ಷೇತ್ರ ಗೋಕರ್ಣದಲ್ಲೂ ಅತಿ ವಿಜೃಂಭಣೆ ಯಿಂದ ಶಿವರಾತ್ರಿ ಆಚರಿಸಲ್ಪಡುತ್ತದೆ. ಕ್ಷೇತ್ರದ ಶ್ರೀದೇವರಾದ ಸಾರ್ವಭೌಮ ಮಹಾಬಲೇಶ್ವರನನ್ನು ಈ ಸಂದರ್ಭದಲ್ಲಿ ಒಂಬತ್ತು ದಿನಗಳ ವಿಶೇಷ ಉತ್ಸವಗಳಿಂದ ಸುಪ್ರೀತಗೊಳಿಸಲಾಗುತ್ತದೆ.

ಶಿವಯೋಗದ ದಿನ ಅಂದರೆ ಚತುದರ್ಶಿಯ ರಾತ್ರಿಯ ಪೂಜೆ ಅದರಲ್ಲಿ ಗೋಕರ್ಣದಲ್ಲಿ ವಿಶೇಷತೆ ಇದೆ. ಸ್ಕಂದ ಪುರಾಣದಲ್ಲಿ ಹೇಳಿರುವಂತೆ –

ಗೋಕರ್ಣಂ ಬಿಲ್ವಪತ್ರಂ ಚ ಲಿಂಗರತ್ನಂ ಮಹಾಬಲ ||

ಶಿವರಾತ್ರಿಸ್ತಥಾ ದೇವಾ ದುರ್ಲಭಂ ಹಿ ಚತುಷ್ಮಯಂ ||

ಶ್ರೀ ಕ್ಷೇತ್ರ ಗೋಕರ್ಣ, ಬಿಲ್ವಪತ್ರೆ , ಲಿಂಗ ರತ್ನವಾದ ಮಹಾಬಲ, ಶಿವರಾತ್ರಿ, ಈ ನಾಲ್ಕೂ ಸೇರುವುದು ಅತ್ಯಂತ ದುರ್ಲಭವಾದುದು. aಇದರರ್ಥ ಭಕ್ತರು ಶಿವರಾತ್ರಿ ದಿನ ಗೋಕರ್ಣದಲ್ಲಿ ಬಿಲ್ವಪತ್ರೆಯಿಂದ ಮಹಾಬಲೇಶ್ವರ ಲಿಂಗರತ್ನವನ್ನು ಪೂಜಿಸುವುದು ಅತ್ಯಂತ ಶ್ರೇಷ್ಠವಾದುದು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.