ಬಿಲ್ಗೇಟ್ಸ್ ತೆಕ್ಕೆಗೆ ಫೆಮ್ಸಾ ಪಾಲು
ಮೆಕ್ಸಿಕೊ (ಐಎಎನ್ಎಸ್): ಅಮೆರಿಕದ ಕೋಟ್ಯಧಿಪತಿ, ಮೈಕ್ರೊಸಾಫ್ಟ್ ಕಂಪೆನಿಯ ಅಧ್ಯಕ್ಷ ಬಿಲ್ಗೇಟ್ಸ್, ಲ್ಯಾಟಿನ್ ಅಮೆರಿಕದ ಪಾನೀಯ ಕಂಪೆನಿಯೊಂದರ ಶೇ 14.7ರಷ್ಟು ಷೇರುಗಳನ್ನು ಖರೀದಿಸಿದ್ದಾರೆ.
ಗ್ವಾಟೆಮಾಲಾದಲ್ಲಿರುವ ‘ಫೆಮ್ಸಾ’ ಪಾನೀಯ ಕಂಪೆನಿ ಈ ಸುದ್ದಿ ಖಚಿತಪಡಿಸಿದೆ. ಈ ಖರೀದಿಯ ಮೂಲಕ ‘ಫೆಮ್ಸಾ’ದಲ್ಲಿ ಬಿಲ್ಗೇಟ್ಸ್ ಅವರ ಪಾಲು ಶೇ 30ಕ್ಕೆ ಏರಿದೆ ಎಂದು ಅಲ್ಲಿನ ಪತ್ರಿಕೆಯೊಂದು ವರದಿ ಮಾಡಿದೆ.
ಮೆಕ್ಸಿಕೊದ ಅತಿ ದೊಡ್ಡ ಪಾನೀಯ ಕಂಪೆನಿ ‘ಫೆಮ್ಸಾ’ ಆಗಿದ್ದು, ವಾರ್ಷಿಕ 2 ದಶಲಕ್ಷ ಪೆಟ್ಟಿಗೆಗಳಷ್ಟು ಪಾನೀಯಮಾರಾಟ ಮಾಡುತ್ತದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.