ಬಿಲ್ ಕಲೆಕ್ಟರ್ ವಜಾಗೆ ಆಗ್ರಹ: ಪ್ರತಿಭಟನೆ

7

ಬಿಲ್ ಕಲೆಕ್ಟರ್ ವಜಾಗೆ ಆಗ್ರಹ: ಪ್ರತಿಭಟನೆ

Published:
Updated:

ಮಾಲೂರು: ಅಬ್ಬೇನಹಳ್ಳಿ ಗ್ರಾಮ ಪಂಚಾಯಿತಿ ಬಿಲ್‌ ಕಲೆಕ್ಟರ್‌ ಚಂದ್ರಪ್ಪ ನಕಲಿ ದಾಖಲಾತಿ ನೀಡಿ, ಗ್ರಾಮಸ್ಥ­ರಲ್ಲಿ ಶಾಂತಿ ಸೌಹಾರ್ದ ಹಾಳು ಮಾಡುತ್ತಿದ್ದಾರೆ ಎಂದು ಆರೋ­ಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಘಟಕದ ಸದಸ್ಯರು ಪಂಚಾಯಿತಿ ಕಚೇರಿಗೆ ಬುಧ­ವಾರ ಬೀಗ ಹಾಕಿ, ಪ್ರತಿಭಟನೆ ನಡೆಸಿದರು.ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಎಸ್‌.ಎಂ.ವೆಂಕಟೇಶ್‌ ಮಾತನಾಡಿ, ತಾಲ್ಲೂಕಿನ ಕಸಬಾ ಹೋಬಳಿಯ ಅಬ್ಬೇನಹಳ್ಳಿ ಗ್ರಾಮ ಪಂಚಾಯಿತಿ ಬಿಲ್‌ ಕಲೆಕ್ಟರ್‌ ಚಂದ್ರಪ್ಪ ಭಾವನಹಳ್ಳಿ ಗ್ರಾಮದ ಹನುಮಕ್ಕ ಎಂಬುವರಿಗೆ ಡಿ.ಆರ್‌.ನಂ 48/113ರಲ್ಲಿನ ಖಾಲಿ ನಿವೇಶನವನ್ನು 2003–04ರಲ್ಲಿ ಖಾತೆ ಮಾಡಿಕೊಟ್ಟಿದ್ದಾರೆ.ನಂತರ ಅದೇ ನಿವೇಶನಕ್ಕೆ ನಕಲಿ ದಾಖಲೆ ಸೃಷ್ಟಿಸಿ ಕಮಲಾ ಬಾಯಿ, ವೆಂಕಟ­ಸ್ವಾಮಿ ಎಂಬುವರಿಗೂ ಖಾತೆ ಮಾಡಿ­ಕೊಟ್ಟಿದ್ದಾರೆ ಎಂದು ಆರೋಪಿ­ಸಿದರು.ಇದರಿಂದ ಗ್ರಾಮಸ್ಥರಲ್ಲಿ ವೈಮನಸ್ಯ ಉಂಟಾಗಿ ಸೌಹಾರ್ದ ವಾತಾವರಣ ಕದಡು­ವಂತಾಗಿದೆ. ಆದ್ದರಿಂದ ನಕಲಿ ದಾಖಲೆ ಸೃಷ್ಟಿ ಮಾಡುತ್ತಿರುವ ಬಿಲ್‌ ಕಲೆಕ್ಟರ್‌ ಚಂದ್ರಪ್ಪನನ್ನು ಕರ್ತವ್ಯದಿಂದ ವಜಾಗೊಳಿಸಬೇಕು. ಅವರಿಗೆ ಸಹಕರಿ­ಸುತ್ತಿರುವ ಜನಪ್ರತಿನಿಧಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ  ಚವ್ವೇನಹಳ್ಳಿ ಕೆ.ವಿಜಿ, ಸಂಘಟನಾ ಸಂಚಾಲಕ ಮೈಲಾಂಡಹಳ್ಳಿ ಮುನಿ­ಯಪ್ಪ, ವರದಾಪುರ ವೆಂಕಟೇಶ್‌, ದೊಡ್ಡಕಲ್ಲಹಳ್ಳಿ ನಾರಾಯಣಸ್ವಾಮಿ, ಕೋಡೂರು ನಾಗರಾಜು, ರಾಮ­ಚಂದ್ರಪ್ಪ, ರಾಘವೇಂದ್ರ ಇತರರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry