ಸೋಮವಾರ, ಮೇ 23, 2022
30 °C

ಬಿಲ್ ನೀಡದ ಗೊಬ್ಬರದ ಅಂಗಡಿ: ಕ್ರಮಕ್ಕೆ ರೈತ ಸೇನೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ರಸಗೊಬ್ಬರ ಕೊಳ್ಳುವ ರೈತರಿಗೆ ಸಮರ್ಪಕ ಬಿಲ್ ನೀಡದೆ ವಂಚಿಸುತ್ತಿರುವ ಅಂಗಡಿ ಮಾಲೀಕರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಕೋರಿ ರೈತ ಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಸಮಿತಿ ಕಾರ್ಯಕರ್ತರು ನಗರದಲ್ಲಿ ಬುಧವಾರ ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಗಾಯತ್ರಿ ಅವರಿಗೆ ಮನವಿ ಸಲ್ಲಿಸಿದರು.ಖಾಸಗಿ ರಸಗೊಬ್ಬರದ ಅಂಗಡಿಗಳಲ್ಲಿ ರೈತರು ಖರೀದಿಸುವ ಗೊಬ್ಬರ, ಬಿತ್ತನೆ ಬೀಜ, ಕ್ರಿಮಿನಾಶಕಗಳಿಗೆ ಯಾವುದೇ ರಸೀದಿ ನೀಡುತ್ತಿಲ್ಲ. ಅಂಗಡಿ ಮುಂದೆ ರಸಗೊಬ್ಬರ ಧಾರಣೆ ಫಲಕವನ್ನೂ ಪ್ರದರ್ಶಿಸುತ್ತಿಲ್ಲ. ಈ ಬಗ್ಗೆ ದೂರು ಸಲ್ಲಿಸಿದರೂ ಕ್ರಮ ಕೈಗೊಳ್ಳುವಲ್ಲಿ ಕೃಷಿ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿದರು.ಸರ್ಕಾರಿ ಆದೇಶದಂತೆ ಎಲ್ಲ ಸಹಕಾರ ಸಂಘಗಳಲ್ಲಿ ಬಿತ್ತನೆ ಬೀಜ, ರಸಗೊಬ್ಬರ, ಕ್ರಿಮಿನಾಶಕವನ್ನು ಕೃಷಿ ಇಲಾಖೆಯೇ ನೇರವಾಗಿ ಮಾರಾಟ ಮಾಡಬಹುದು. ಆದರೆ ಆ ಬಗ್ಗೆ ಇಲಾಖೆ ಕ್ರಮ ಕೈಗೊಂಡಿಲ್ಲ.1983ರ ಬೀಜ ಕಾಯ್ದೆಯಂತೆ ಪ್ರತಿ ಖರೀದಿದಾರನಿಗೂ ಕಡ್ಡಾಯವಾಗಿ ಬೀಜದ ರಸೀದಿ ನೀಡಬೇಕು. ಬೀಜ ಕಳಪೆಯಾದರೆ ಅಂಗಡಿ ಮತ್ತು ಕಂಪನಿಯೇ ನೇರ ಹೊಣೆ ಹೊರಬೇಕು. ರಸಗೊಬ್ಬರ ನಿಯಂತ್ರಣ ಕಾಯ್ದೆ 1985ರ ಕಾಯ್ದೆಯ ಅನ್ವಯ ಎಲ್ಲ ರಸಗೊಬ್ಬರ ಅಂಗಡಿಗಳಲ್ಲೂ ಗರಿಷ್ಠ ಮಾರಾಟ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಸೇನೆ ಪ್ರಮುಖರಾದ ಕೆ.ನಾರಾಯಣಗೌಡ, ಮುನೇಗೌಡ, ಜಗದೀಶ್, ಶಶಿಕುಮಾರ್, ವಿಶ್ವನಾಥ, ಮುಕುಂದಗೌಡ, ಕೃಷ್ಣೇಗೌಡ, ಗೋಪಾಲ್, ಮಂಜುನಾಥ, ನಾಗರಾಜ್, ಹರಿನಾಥ್, ಮುನಿರಾಜ್, ನಾಗರಾಜ್, ಕೆ.ಶ್ರೀನಿವಾಸಗೌಡ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.