ಗುರುವಾರ , ಮೇ 26, 2022
31 °C

ಬಿಲ್ ಪಾವತಿಗೆ ಒತ್ತಾಯಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಿಂಗಸುಗೂರ(ಮುದಗಲ್ಲ): ತಾಲ್ಲೂಕಿನ ಮುದಗಲ್ಲ ಪಟ್ಟಣ ಪಂಚಾಯಿತಿ ಸೂಚನೆ ಮೇರೆಗೆ ಕೆಲ ಸಂಘ ಸಂಸ್ಥೆಗಳಿಗೆ ದಿನಪತ್ರಿಕೆ ಹಾಕುತ್ತ ಬರಲಾಗಿದೆ. ಆದರೆ, ಈಗಿರುವ ಮುಖ್ಯಾಧಿಕಾರಿ ವಿಜಯಲಕ್ಷ್ಮಿ ಕಳೆದ ಒಂದು ವರ್ಷದಿಂದ ಬಿಲ್ ಪಾವತಿಸದಿರುವುದನ್ನು ವಿರೋಧಿಸಿ ದಿನಪತ್ರಿಕೆಗಳ ಏಜೆಂಟರು ಪಟ್ಟಣ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು.ಈಚೆಗೆ ಪಟ್ಟಣ ಪಂಚಾಯಿತಿ ಮುಂದೆ ಧರಣಿ ನಡೆಸಿದ ಏಜೆಂಟರು, ಹಲವಾರು ವರ್ಷಗಳಿಂದ ದಿನಪತ್ರಿಕೆ ಹಾಕುತ್ತ ಬಂದಿದ್ದೇವೆ. 2-3ತಿಂಗಳಿಗೊಮ್ಮೆ ಬಿಲ್ ಪಾವತಿಸುತ್ತ ಬಂದಿದ್ದರು. ಆದರೆ, ಒಂದು ವರ್ಷದಿಂದ ಅನಗತ್ಯ ಕಾರಣ ಹೇಳಿಕೊಂಡು ಬಿಲ್ ಪಾವತಿಸದೆ ಮುಖ್ಯಾಧಿಕಾರಿಗಳು ವಿಳಂಬ ಮಾಡುತ್ತಿರುವುದು ಏಜೆಂಟರ್‌ಗೆ ಭಾರಿ ತೊಂದರೆಯಾಗಿದೆ ಎಂದು ಆರೋಪಿಸಿದರು.ಕೆಲ ತಾಂತ್ರಿಕ ಕಾರಣಗಳಿಂದ ಕೆಲ ತಿಂಗಳುಗಳಿಂದ ದಿನಪತ್ರಿಕೆಗಳ ಬಿಲ್ ಪಾವತಿಸಲು ವಿಳಂಬವಾಗಿದೆ. ಇತ್ತೀಚೆಗೆ ಆಡಳಿತಾಧಿಕಾರಿಗಳ ನೇಮಕವಾಗಿದ್ದು, ಸಿಬ್ಬಂದಿ ಸಕಾಲಕ್ಕೆ ಬಿಲ್ ಪಾವತಿಸುವ ಪ್ರಕ್ರಿಯೆ ಮಾಡದೆ ನಿರ್ಲಕ್ಷ್ಯ ವಹಿಸಿದ್ದರಿಂದ ವಿಳಂಬವಾಗಿತ್ತು. ಶೀಘ್ರದಲ್ಲಿಯೆ ಬಾಕಿ ಇರುವ ದಿನಪತ್ರಿಕೆಗಳ ಬಿಲ್ ಪಾವತಿಸಲು ಕ್ರಮ ಕೈಗೊಳ್ಳುವುದಾಗಿ ಮುಖ್ಯಾಧಿಕಾರಿ ವಿಜಯಲಕ್ಷ್ಮಿ ಪ್ರಜಾವಾಣಿಗೆ ತಿಳಿಸಿದ್ದಾರೆ.ಪ್ರತಿಭಟನೆ ನೇತೃತ್ವವವನ್ನು ಚಿನ್ನಪ್ಪ ಪತ್ತಾರ, ಚಂದ್ರಣ್ಣ ಗಂಗಾವತಿ, ಗಫೂರ, ಮಹಿಬೂಬ ಗಾಡಿವಾನ, ವಿಲಾಸರಾವ್, ಹನುಮಂತ, ವಿರೇಶ ಕುಂಬಾರ, ಸಂಗಮೇಶ ಕೊಡೆಕಲ್ ಮತ್ತಿತರರು ವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.