ಗುರುವಾರ , ಜೂನ್ 24, 2021
29 °C

ಬಿಲ್ ವಸೂಲಾತಿ ಕೇಂದ್ರ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹದೇವಪುರ: ಇಲ್ಲಿನ ವರ್ತೂರು ಗ್ರಾಮದಲ್ಲಿ ಇತ್ತೀಚೆಗೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ (ಬೆಸ್ಕಾಂ) ನೂತನ ಬಿಲ್ ವಸೂಲಾತಿ ಕೇಂದ್ರವನ್ನು ಪ್ರಾರಂಭಿಸಲಾಯಿತು.ಇದು ಕ್ಷೇತ್ರದಲ್ಲಿ ವರ್ತೂರು ಹೋಬಳಿಯ ಎರಡನೇ ವಿದ್ಯುತ್ ಬಿಲ್ ಪಾವತಿ ಕೇಂದ್ರವಾಗಿದ್ದು, ಸ್ಥಳೀಯ ಶಾಸಕ ಅರವಿಂದ ಲಿಂಬಾವಳಿ ಮತ್ತು ಬಿಬಿಎಂಪಿ ಸದಸ್ಯ ಎಸ್.ಉದಯಕುಮಾರ್ ಬಿಲ್ ಪಾವತಿ ಕೇಂದ್ರವನ್ನು ಉದ್ಘಾಟಿಸಿದರು.ನಂತರ ಮಾತನಾಡಿದ ಎಸ್.ಉದಯಕುಮಾರ್, `ಈ ಹಿಂದೆ ವರ್ತೂರು ಹೋಬಳಿಯ ಜನತೆ ವೈಟ್‌ಫೀಲ್ಡ್‌ನಲ್ಲಿರುವ ವಿದ್ಯುತ್ ಕೇಂದ್ರದಲ್ಲಿಯೇ ವಿದ್ಯುತ್ ಬಿಲ್ ಪಾವತಿಸಬೇಕಾಗಿತ್ತು. ವರ್ತೂರು ಗ್ರಾಮದಲ್ಲಿ ಹೊಸದಾಗಿ ಬಿಲ್ ಪಾವತಿ ಕೇಂದ್ರ ತೆರೆದಿರುವುದು ವರ್ತೂರು ಸುತ್ತಮುತ್ತಲಿನ ಸಾರ್ವಜನಿಕರಿಗೆ ಅನುಕೂಲವಾಗಿದೆ~ ಎಂದರು.ಈ ಸಂದರ್ಭದಲ್ಲಿ ಬಿಜೆಪಿ ಘಟಕದ ಅಧ್ಯಕ್ಷ ಜಯಚಂದ್ರ ರೆಡ್ಡಿ, ವರ್ತೂರು ಬ್ಲಾಕ್ ಕಾಂಗ್ರೆಸ್ ಘಟಕದ ಅಧ್ಯಕ್ಷ ವಿ.ಸತೀಶಕುಮಾರ್, ಎಸ್.ವಿ.ಲಕ್ಷ್ಮಣ ರೆಡ್ಡಿ, ಕಾನೆ ಪಟೇಲ ವೆಂಕಟೇಶ ರೆಡ್ಡಿ, ಮುನ್ನೆಕೊಳ್ಳಾಲ ಎಲೆಕ್ಟ್ರಿಕಲ್ ಶ್ರೀನಿವಾಸ್, ವೆಂಕಟಸ್ವಾಮಿ, ನಾಗಪ್ಪ, ಸುಬ್ಬಣ್ಣ, ಮುತ್ಸಂದ್ರ ಕೃಷ್ಣಾ ರೆಡ್ಡಿ, ಸೋರಹುಣಸೆ ಬಾಬು ರೆಡ್ಡಿ ಇತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.