ಬಿಳಿ ಹೆಣ್ಣು ಹುಲಿ ರೀಟಾ ಸಾವು

ಶನಿವಾರ, ಜೂಲೈ 20, 2019
22 °C

ಬಿಳಿ ಹೆಣ್ಣು ಹುಲಿ ರೀಟಾ ಸಾವು

Published:
Updated:

ಮೈಸೂರು: ಶ್ರೀ ಜಯಚಾಮರಾಜೇಂದ್ರ ಮೃಗಾಲಯದಲ್ಲಿ ಪ್ರಾಣಿಗಳ ಸಾವಿನ ಸರಣಿ ಮುಂದುವರಿದಿದ್ದು, ಬಿಳಿ ಹೆಣ್ಣು ಹುಲಿ `ರೀಟಾ~ ಭಾನುವಾರ ರಾತ್ರಿ ಮೃತಪಟ್ಟಿದೆ.20 ವರ್ಷದ `ರೀಟಾ~ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿತ್ತು. ಪ್ರತಿ ದಿನ ಅಗತ್ಯ ಚಿಕಿತ್ಸೆ ನೀಡುತ್ತಿದ್ದರೂ ತೀವ್ರವಾಗಿ ನಿತ್ರಾಣಗೊಂಡಿದ್ದರಿಂದ  ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದೆ.`ರೀಟಾ~ ಬಹುತೇಕ ಹಲ್ಲುಗಳನ್ನು ಕಳೆದುಕೊಂಡಿದ್ದರಿಂದ ಅದಕ್ಕೆ ಎಲುಬು ರಹಿತ ಮಾಂಸ ಮತ್ತು ಸತ್ವಭರಿತ ಆಹಾರ ನೀಡಲಾಗುತ್ತಿತ್ತು. ಇದರ ಕಾಲುಗಳಲ್ಲಿರುವ  ಉಗುರುಗಳು ಉದ್ದವಾಗಿ ಬೆಳೆದು ಅದರಲ್ಲಿ ಉಂಟಾಗುವ ತೀವ್ರ ಸ್ವರೂಪದ ನೋವು ಮತ್ತು ಹುಳುಗಳ ಉಪದ್ರವದಿಂದ ಆಗಾಗ ಬಳಲುತ್ತಿತ್ತು.ಈ ಸಮಸ್ಯೆ ಹೋಗಲಾಡಿಸಲು ಇದರ ಬಲ ಮುಂಗಾಲಿನ ಒಂದು ಉಗುರನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಯಲಾಗಿತ್ತು.`ರೀಟಾ ಇಳಿ ವಯಸ್ಸಿನದಾಗಿರುವುದರಿಂದ ಶಸ್ತ್ರಚಿಕಿತ್ಸೆ ಮಾಡಿದರೂ ಅಥವಾ ಮಾಡದಿದ್ದರೂ ಅದರ ನಿರೀಕ್ಷಿತ ಜೀವಿತ ಅವಧಿ ಬಹಳ ಕಡಿಮೆ ಇತ್ತು. ಒಂದು ವೇಳೆ ಇದನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಿದ್ದರೆ ನಂತರ ಚೇತರಿಸಿಕೊಳ್ಳಲು ಹೆಚ್ಚು ದಿನಗಳನ್ನು ತೆಗೆದುಕೊಳ್ಳುತ್ತಿತ್ತು. ಹೀಗಾಗಿ ಶಸ್ತ್ರಚಿಕಿತ್ಸೆ ಮಾಡಿಸಿರಲಿಲ್ಲ~ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ.ರವಿ ತಿಳಿಸಿದ್ದಾರೆ.`ರೀಟಾ~ ಹುಲಿಯು 1993ರಲ್ಲಿ `ದರ್ಶನ~ ಮತ್ತು `ಪ್ರಿಯದರ್ಶಿನಿ~ ಎಂಬ ಹುಲಿಗಳಿಗೆ ಮೃಗಾಲಯದಲ್ಲೇ ಜನಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry