ಶನಿವಾರ, ಫೆಬ್ರವರಿ 27, 2021
19 °C
ಕನ್ನಡ ಪುಸ್ತಕ ಪ್ರಾಧಿಕಾರದ 2015ನೇ ಸಾಲಿನ ಪ್ರಶಸ್ತಿ ಪ್ರಕಟ

ಬಿ.ಶೇಷಾದ್ರಿಗೆ ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿ.ಶೇಷಾದ್ರಿಗೆ ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ

ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರದ 2015ರ ಸಾಲಿನ ಪ್ರಶಸ್ತಿ ಪ್ರಕಟಿಸಲಾಗಿದ್ದು, ‘ಡಾ. ಎಂ.ಎಂ.ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ’ಗೆ ಬಳ್ಳಾ ರಿಯ ಡಾ.ಬಿ.ಶೇಷಾದ್ರಿ ಮತ್ತು  ‘ಡಾ. ಜಿ.ಪಿ . ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ’ಗೆ ಶಶಿಕಲಾ ಬೆಳಗಲಿ ಆಯ್ಕೆಯಾಗಿದ್ದಾರೆ.ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್‌ ಪತ್ರಿಕಾಗೋಷ್ಠಿ ಯಲ್ಲಿ ಈ ವಿಷಯ ತಿಳಿಸಿದರು. ಕಲಬುರ್ಗಿ ಪ್ರಶಸ್ತಿ  ₹75 ಸಾವಿರ ಮತ್ತು ರಾಜರತ್ನಂ ಪ್ರಶಸ್ತಿ ₹ 50 ಸಾವಿರ ನಗದು ಒಳಗೊಂಡಿದೆ.

2015 ನೇ ಸಾಲಿನ ಅತ್ಯುತ್ತಮ ಪ್ರಕಾಶನ ಪ್ರಶಸ್ತಿಗೆ ಬೆಂಗಳೂರಿನ ‘ಅನ್ವೇಷಣೆ ಪ್ರಕಾಶನ’ ಆಯ್ಕೆಯಾಗಿದೆ. ಪ್ರಶಸ್ತಿಯು ₹ 1 ಲಕ್ಷ ನಗದು ಒಳಗೊಂಡಿದೆ. ‘ಡಾ. ಅನುಪಮಾ ನಿರಂಜನ ವೈದ್ಯಕೀಯ ಮತ್ತು ವಿಜ್ಞಾನ ಸಾಹಿತ್ಯ ಪ್ರಶಸ್ತಿಗೆ ಮೈಸೂರಿನ ಡಾ.ಎಸ್‌.ಪಿ.ಯೋಗಣ್ಣ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ₹ 25 ಸಾವಿರ  ಒಳಗೊಂಡಿದೆ.ಪುಸ್ತಕ ಸೊಗಸು ಬಹುಮಾನಕ್ಕೆ ಆರು ಪುಸ್ತಕಗಳ ಆಯ್ಕೆ: ಪ್ರಥಮ: ಎಂ.ಎಂ.ಪಬ್ಲಿಕೇಷನ್‌ , ಬೆಂಗಳೂರು ಪ್ರಕಟಿಸಿರುವ ಕೃತಿ ‘ಅನುರಕ್ತಿ’.  ₹25 ಸಾವಿರ ನಗದು.

ದ್ವಿತೀಯ: ಪಲ್ಲವ ಪ್ರಕಾಶನ, ಬಳ್ಳಾರಿ ಪ್ರಕಟಿಸಿರುವ ಕೃತಿ ‘ಪ್ರೀತಿಯೆಂಬುದು ಚಂದ್ರನ ದಯೆ’. ₹20 ಸಾವಿರ ನಗದು.ತೃತೀಯ: ಅನಿಕೇತನ, ಬೆಂಗಳೂರು ಪ್ರಕಟಿಸಿರುವ ಕೃತಿ ‘ಅಸ್ಮಿತಾ’ , ₹15 ಸಾವಿರ ನಗದು.ಮಕ್ಕಳ ಸೊಗಸು ಬಹುಮಾನ: ಅನನ್ಯ ಪ್ರಕಾಶ,ಕೋಲಾರ ಪ್ರಕಟಿಸಿರುವ ‘ಮತ್ತೊಂದುಮಹಾಭಾರತ’,₹8ಸಾವಿರ.ಮುಖಪುಟ ವಿನ್ಯಾಸ ಬಹುಮಾನ: ಪ್ರಥಮ: ‘ಬಿಡಿ ಮುತ್ತು’ ಕೃತಿ, ಕಲಾವಿದ ಯು.ಟಿ.ಸುರೇಶ್‌, ₹ 10 ಸಾವಿರ ನಗದು.ದ್ವಿತೀಯ: ‘ಪೇಶಂಟ್‌ ಪಾರ್ಕಿಂಗ್‌’ ಕೃತಿ, ಕಲಾವಿದ ಸುಧಾಕರ್‌ ದರ್ಬೆ, ₹ 8 ಸಾವಿರ ನಗದು.

ಯುವ ಬರಹಗಾರರ ಕೃತಿಗೆ ಪ್ರೋತ್ಸಾಹ ಧನ

ಪ್ರೀತಿ ಲಕ್ಷ್ಮೀಕಾಂತ– ಕೋಲಾರ,  ಅನಿತಾ ಎಂ.ಎಸ್‌– ಮಂಡ್ಯ, ಕ.ಶಿ.ಮೋಹನ್‌ಕುಮಾರ್‌–ಬೆಂಗಳೂರು, ಕುಮಾರ–ತುಮಕೂರು, ಗೋಳೂರು ಎಂ.ನಾರಾಯಣ– ಮೈಸೂರು, ಸೌಮ್ಯಾ ಕೆ.ಆರ್‌, ಅಮರೇಶ– ರಾಯಚೂರು, ಪ್ರವೀಣ ಎನ್‌– ಕೋಲಾರ, ಶ್ರೀಧರ ಪತ್ತಾರ– ವಿಜಯಪುರ, ಗುತ್ತಪ್ಪ ಬಸಪ್ಪ ಯಾದಗಿರಿ, ಬಿ.ಹರೀಶ್‌, ನಾಗಲಿಂಗ– ಹೊಸಕೋಟೆ, ಅನ್ನಪೂರ್ಣ– ಕೊಪ್ಪಳ, ಪ್ರಸನ್ನ – ರಾಮನಗರ, ಅನೀಲ ಕುಮಾರ  ಗುನ್ನಾಪೂರ– ವಿಜಯಪುರ, ಮಧು

ರಾಣಿ  ಎಚ್‌.ಎಸ್‌– ಮೈಸೂರು, ಕವಿತ ಡಿ.ಎಲ್‌ –ಕೊಳ್ಳೆಗಾಲ, ಈರಪ್ಪ ಹ. ತಾಳದವರ –ಗದಗ, ನಾಗರಾಜ ವಲ್ಕಂದಿನ್ನಿ– ಕೊಪ್ಪಳ, ಮಡ್ಡಿ ಶೃತಿ ರಾಜಶೇಖರ–ಸೊಲ್ಲಾಪುರ, ಶರಣಬಸವ ಬಿ– ಕೊಪ್ಪಳ, ವೆಂಕಟೇಶ್ ಗುಡ್ಡೆಪ್ಪನವರ– ಬಾಗಲಕೋಟೆ, ಅಶ್ವಿನಿ ಮಹಾಜನಶೆಟ್ಟಿ– ಬೆಂಗಳೂರು, ಮುಸ್ತಾಫ ಕೆ.ಎಚ್‌– ಮೂಡುಬಿದರೆ, ಎಚ್‌.ಮಲ್ಲಯ್ಯ– ಸಂಡೂರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.