ಬಿಷಪ್‌ ಕಾಟನ್‌ಗೆ ಗೆಲುವು

6

ಬಿಷಪ್‌ ಕಾಟನ್‌ಗೆ ಗೆಲುವು

Published:
Updated:

ಬೆಂಗಳೂರು: ಉತ್ತಮ ಪ್ರದರ್ಶನ ತೋರಿದ ಬಿಷಪ್‌ಕಾಟನ್‌ ಬಾಲಕಿಯರ ತಂಡ ಶನಿವಾರ ಆರಂಭವಾದ ಎನ್‌ಬಿಎ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನ 18 ವರ್ಷದೊಳಗಿನವರ ವಿಭಾಗದ ಬೆಂಗಳೂರು ಲೆಗ್‌ನ ಮೊದಲ ಪಂದ್ಯದಲ್ಲಿ ಗೆಲುವು ಪಡೆಯಿತು.ಕಂಠೀರವ ಕ್ರೀಡಾಂಗಣದ ಕೋರ್ಟ್‌ನಲ್ಲಿ ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಬಿಷಪ್‌ಕಾಟನ್‌ 8–3. ಪಾಯಿಂಟ್‌ಗಳಿಂದ ಮೌಂಟ್‌ ಕಾರ್ಮೆಲ್‌ ಕಾಲೇಜು ತಂಡವನ್ನು ಮಣಿಸಿತು. ಮೊದಲ ದಿನ 100ಕ್ಕೂ ಅಧಿಕ ತಂಡಗಳ 450 ಸ್ಪರ್ಧಿಗಳು ಪೈಪೋಟಿ ನಡೆಸಿದರು. 16ರಿಂದ 18 ಮತ್ತು 19ರಿಂದ 23 ವರ್ಷದೊಳಗಿನವರ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪೈಪೋಟಿ ನಡೆಸಿದರು.ಶನಿವಾರ ನಡೆದ ಈ ವಿಭಾಗದ ಇತರ ಪ್ರಮುಖ ಸ್ಪರ್ಧೆಗಳಲ್ಲಿ ಜೈನ್‌ ಬಾಲಕಿಯರ ತಂಡ 11–4ರಲ್ಲಿ ಎಂಎಸ್‌ವಿಐಟಿ ಬಾಲಕಿಯರ ಎ ತಂಡದ ಮೇಲೂ, ಕ್ರೈಸ್ಟ್‌ ಯುನಿವರ್ಸಿಟಿ 20–0ರಲ್ಲಿ  ಆರ್.ವಿ. ಬಾಲಕಿಯರ ಕಾಲೇಜು ವಿರುದ್ಧವೂ, ಎಂಎಸ್‌ಆರ್‌ಐಟಿಇ 6–2ರಲ್ಲಿ ಜೆಎನ್‌ಸಿ–1ರ ಮೇಲೂ ಗೆಲುವು ಪಡೆದವು.

ಸುರಾನ ಕಾಲೇಜು 9–6ರಲ್ಲಿ ಪ್ರೆಸಿಡೆನ್ಸಿ ವಿರುದ್ಧವೂ, ಎಸ್‌ಜೆಸಿ ಅಲ್‌ ಸ್ಟಾರ್‌ ತಂಡ 8–6ರಲ್ಲಿ ಎಸ್‌ಜೆಸಿಐಟಿ ಮೇಲೂ, ಬಿಎಂಎಸ್‌ಸಿಇ 5–4ರಲ್ಲಿ ಮೌಂಟ್‌ ಕಾರ್ಮೆಲ್‌ ವಿರುದ್ಧವೂ ಜಯ ಪಡೆದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry