ಬಿಷಪ್ ಕಾಟನ್‌ಗೆ ಪ್ರಶಸ್ತಿ

7

ಬಿಷಪ್ ಕಾಟನ್‌ಗೆ ಪ್ರಶಸ್ತಿ

Published:
Updated:

ಬೆಂಗಳೂರು: ಬಿಷಪ್ ಕಾಟನ್ ಬಾಲಕರ ಶಾಲಾ ತಂಡದವರು ಡೆಲ್- ಕೆಎಸ್‌ಸಿಎ `ಬಿಟಿ ರಾಮಯ್ಯ ಶೀಲ್ಡ್~ 14 ವರ್ಷ ವಯಸ್ಸಿನೊಳಗಿನವರ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆದರು.ಆರ್‌ಎಸ್‌ಐ ಮೈದಾನದಲ್ಲಿ ನಡೆದ ಎರಡು ದಿನಗಳ ಫೈನಲ್ ಪಂದ್ಯದಲ್ಲಿ ಬಿಷಪ್ ಕಾಟನ್ ತಂಡ ಸೇಂಟ್ ಜೋಸೆಫ್ಸ್ ಇಂಡಿಯನ್ ಹೈಸ್ಕೂಲ್ ಜೊತೆ ಡ್ರಾ ಸಾಧಿಸಿತು. ಮಾತ್ರವಲ್ಲ ಮೊದಲ ಇನಿಂಗ್ಸ್ ಮುನ್ನಡೆ ಆಧಾರದಲ್ಲಿ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.ಬಿಷಪ್ ಕಾಟನ್ ಗುರುವಾರ 173 ರನ್‌ಗಳಿಗೆ ಆಲೌಟಾಗಿತ್ತು. ಎರಡು ವಿಕೆಟ್‌ಗೆ 72 ರನ್‌ಗಳಿಂದ ಶುಕ್ರವಾರ ಆಟ ಆರಂಭಿಸಿದ ಸೇಂಟ್ ಜೋಸೆಫ್ಸ್ ಕೇವಲ 135 ರನ್‌ಗಳಿಗೆ ಕುಸಿತ ಕಂಡಿತು. ಪಂದ್ಯ ಡ್ರಾದಲ್ಲಿ ಕೊನೆಗೊಂಡಾಗ ಬಿಷಪ್ ಕಾಟನ್ ತನ್ನ ಎರಡನೇ ಇನಿಂಗ್ಸ್‌ನಲ್ಲಿ  6 ವಿಕೆಟ್‌ಗೆ 101 ರನ್ ಗಳಿಸಿತ್ತು.

 

ಸಂಕ್ಷಿಪ್ತ ಸ್ಕೋರ್: ಬಿಷಪ್ ಕಾಟನ್ ಬಾಯ್ಸ ಹೈಸ್ಕೂಲ್: ಮೊದಲ ಇನಿಂಗ್ಸ್ 75.2 ಓವರ್‌ಗಳಲ್ಲಿ 173 ಮತ್ತು ಎರಡನೇ ಇನಿಂಗ್ಸ್ 61 ಓವರ್‌ಗಳಲ್ಲಿ 6 ವಿಕೆಟ್‌ಗೆ 101 (ಪಿ. ಕೌಶಲ್ 25, ಕಾನಿಷ್ಕ 20, ಸನತ್ ನಾಯ್ಕ 30ಕ್ಕೆ 2, ವಿನಯ್ ಸಾಗರ್ 20ಕ್ಕೆ 2). ಸೇಂಟ್ ಜೋಸೆಫ್ಸ್ ಇಂಡಿಯನ್ ಹೈಸ್ಕೂಲ್: 58.3 ಓವರ್‌ಗಳಲ್ಲಿ 135 (ಸಿ.ಎಚ್. ಕರಣ್ 25, ಮೋಹಿತ್ 21, ವಿನಯ್ ಸಾಗರ್ 34, ಪಿ. ಕೌಶಲ್ 28ಕ್ಕೆ 3, ಜೆರಿನ್ ಜಾಯ್ 31ಕ್ಕೆ 2, ಸಿ.ಆರ್. ಅಯ್ಯಪ್ಪ 25ಕ್ಕೆ 2, ಕೆ.ಆರ್. ಡೇವಿಡ್ 30ಕ್ಕೆ 3). ಫಲಿತಾಂಶ: ಪಂದ್ಯ ಡ್ರಾ; ಇನಿಂಗ್ಸ್ ಮುನ್ನಡೆ ಆಧಾರದಲ್ಲಿ ಬಿಷಪ್ ಕಾಟನ್ಸ್ ಚಾಂಪಿಯನ್.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry