ಭಾನುವಾರ, ಅಕ್ಟೋಬರ್ 20, 2019
24 °C

ಬಿಸಿಗಾಳಿ ಬಲೂನು ಅಪಘಾತ: 11 ಜನರ ಸಾವು

Published:
Updated:

ವೆಲ್ಲಿಂಗ್ಟನ್ (ಐಎಎನ್‌ಎಸ್): ಬಿಸಿ ಗಾಳಿ ಬಲೂನ್‌ಗೆ ಬೆಂಕಿ ತಗುಲಿ ಅಪಘಾತಕ್ಕೀಡಾದ ಕಾರಣ ಅದರಲ್ಲಿದ್ದ 11 ಮಂದಿ ಸಾವನ್ನಪ್ಪಿದ ದುರ್ಘಟನೆ ನ್ಯೂಜಿಲೆಂಡ್‌ನಲ್ಲಿ ಸಂಭವಿಸಿದೆ.ವೆಲ್ಲಿಂಗ್ಟನ್ ಉತ್ತರ ಭಾಗದಲ್ಲಿರುವ ಸಣ್ಣ ಪಟ್ಟಣವಾದ ಕ್ಲೆರ್‌ವಿಲ್ಲೆ ಬಳಿ ಆಗಸದಿಂದ ಇಳಿಯುತ್ತಿದ್ದ ಬಲೂನ್‌ಗೆ ಬೆಂಕಿ ಹೊತ್ತಿಕೊಂಡು ನಂತರ ಅಪಘಾತಕ್ಕೀಡಾಯಿತು ಎನ್ನಲಾಗಿದೆ.ಬಲೂನಿನಲ್ಲಿ 10 ಪ್ರಯಾಣಿಕರು ಮತ್ತು ಒಬ್ಬರು ಪೈಲಟ್ ಇದ್ದರು. ಬೆಂಕಿ ಹೊತ್ತಿಕೊಂಡು ಉರಿಯುತ್ತಿದ್ದ ಬಲೂನು ಪತನವಾಗಿದ್ದನ್ನು ಕಣ್ಣಾರೆ ಕಂಡಿದ್ದಾಗಿ ಸೈಕಲ್ ಸವಾರರೊಬ್ಬರು ತಿಳಿಸಿದ್ದಾರೆ. ನ್ಯೂಜಿಲೆಂಡ್‌ನ ಈ ಸ್ಥಳ ಬಿಸಿ ಗಾಳಿ ಬಲೂನು ಹಾರಾಟಕ್ಕೆ ಹೆಸರುವಾಸಿ.

Post Comments (+)