ಬಿಸಿಯೂಟಕ್ಕೆ ಅನ್ವರ್ ಸಂಗೀತ

7

ಬಿಸಿಯೂಟಕ್ಕೆ ಅನ್ವರ್ ಸಂಗೀತ

Published:
Updated:

ಮೊಹ್ಸಿನ್ ಷರೀಫ್ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಪ್ರತಿ ನಿತ್ಯ ಹತ್ತು ಸಾವಿರ ವೃದ್ಧರಿಗೆ ಬಿಸಿಯೂಟ ಒದಗಿಸುವ ಯೋಜನೆಗೆ ಚಾಲನೆ ನೀಡುತ್ತಿದೆ. ಇದರ ಅಂಗವಾಗಿ ಬುಧವಾರ ಹಿನ್ನೆಲೆ ಗಾಯಕ ಅನ್ವರ್ ಅವರಿಂದ ರಸಸಂಜೆ.ಇಂದಿರಾನಗರದ ಮೊಹ್ಸಿನ್ ಷರೀಫ್ ದತ್ತಿ ಸಂಸ್ಥೆ ಬೆಂಗಳೂರಿನ 184 ಶಾಲೆಗಳ ಐವತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಒದಗಿಸುತ್ತಿದೆ. ಇವುಗಳಲ್ಲಿ 120 ಕನ್ನಡ ಶಾಲೆಗಳು, 48 ಉರ್ದು ಶಾಲೆಗಳು, 7 ಇಂಗ್ಲಿಷ್, 7 ತಮಿಳು ಹಾಗೂ 4 ತೆಲುಗು ಶಾಲೆಗಳು ಸೇರಿವೆ. ಈಗ ಟ್ರಸ್ಟ್ ತನ್ನ ಕಾರ್ಯವ್ಯಾಪ್ತಿ ವಿಸ್ತರಿಸಲು ಹೊರಟಿದೆ. ಹತ್ತು ಸಾವಿರಕ್ಕೂ ಹೆಚ್ಚು ವೃದ್ಧರಿಗೆ ಮಧ್ಯಾಹ್ನದ ಬಿಸಿಯೂಟ ನೀಡುವ ಯೋಜನೆಗೆ ಚಾಲನೆ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಐವತ್ತು ಸಾವಿರ ವೃದ್ಧರಿಗೆ ಈ ಯೋಜನೆ ವಿಸ್ತರಿಸುವ ಆಶಯವನ್ನು ಸಂಸ್ಥೆಯ ಮುಖ್ಯಸ್ಥ ಮೊಹ್ಸಿನ್ ಷರೀಫ್ ಹೊಂದಿದ್ದಾರೆ.ದಂತಕಥೆಯಾಗಿರುವ ಹಿನ್ನೆಲೆ ಗಾಯಕ ಮೊಹಮ್ಮದ್ ರಫಿ ಅವರದ್ದೇ ಕಂಠ ಹೊಂದಿರುವ ಅನ್ವರ್ ಈ ಕಾರ್ಯಕ್ರಮದಲ್ಲಿ ಕೆಲ ಮರೆಯಲಾಗದ ಗೀತೆಗಳನ್ನು ಹಾಡಲಿದ್ದಾರೆ. ರಸಸಂಜೆಯಲ್ಲಿ ಸಂಗ್ರಹವಾದ ಹಣವನ್ನು ಬಿಸಿಯೂಟಕ್ಕೆ ಬಳಸಲಾಗುವುದು. ಸ್ಥಳ: ಅಂಬೇಡ್ಕರ್ ಭವನ, ವಸಂತ ನಗರ. ಸಂಜೆ. 6  ಟಿಕೆಟ್ ಮತ್ತಿತರ ವಿವರಕ್ಕೆ 3221 0422

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry