ಬಿಸಿಯೂಟಕ್ಕೆ ಆದೇಶ

7

ಬಿಸಿಯೂಟಕ್ಕೆ ಆದೇಶ

Published:
Updated:

ದಾವಣಗೆರೆ: ರಾಜ್ಯದ ಬರಗಾಲ ಪೀಡಿತ ತಾಲ್ಲೂಕುಗಳ ವ್ಯಾಪ್ತಿಯ ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ 1ರಿಂದ 8ನೇ ತರಗತಿಯ ಮಕ್ಕಳಿಗೆ ಬೇಸಿಗೆ ರಜೆಯಲ್ಲಿಯೂ `ಬಿಸಿಯೂಟ' ಮುಂದುವರಿಸುವ ಕುರಿತು ಸರ್ಕಾರ ಸೋಮವಾರ ಅಧಿಕೃತ ಆದೇಶ ಹೊರಡಿಸಿದೆ.ರಾಜ್ಯದ 157 ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳು ಎಂದು ಘೋಷಿಸಲಾಗಿದೆ. ಈ ತಾಲ್ಲೂಕುಗಳ ವ್ಯಾಪ್ತಿಯ ಶಾಲೆಗಳಲ್ಲಿ ಏ. 10ರಿಂದ ಮೇ 31ರವರೆಗೆ (ಭಾನುವಾರ ಹಾಗೂ ಇತರ ರಜಾ ಅವಧಿ ಒಳಗೊಂಡಂತೆ) ಪ್ರತಿ ದಿನ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಸೌಲಭ್ಯ ನೀಡಬೇಕು ಎಂದು ಶಿಕ್ಷಣ ಇಲಾಖೆ (ಯೋಜನೆ) ಸರ್ಕಾರದ ಅಧೀನ ಕಾರ್ಯದರ್ಶಿ ಐ.ಎಫ್. ಮಾಗಿ ಆದೇಶದಲ್ಲಿ ತಿಳಿಸಿದ್ದಾರೆ.ಬೇಸಿಗೆ ರಜೆಯಲ್ಲಿಯೂ ಬಿಸಿಯೂಟ ಮುಂದುವರಿಸುವ ಬಗ್ಗೆ ಮಾರ್ಚ್ 19ರಂದು `ಪ್ರಜಾವಾಣಿ' ವರದಿ ಮಾಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry