ಬಿಸಿಲೆ ಅರಣ್ಯ: ಹಲವೆಡೆ ನಕ್ಸಲರ ಸಂಚಾರ?

7

ಬಿಸಿಲೆ ಅರಣ್ಯ: ಹಲವೆಡೆ ನಕ್ಸಲರ ಸಂಚಾರ?

Published:
Updated:

ಸಕಲೇಶಪುರ: ಬಿಸಿಲೆ ರಕ್ಷಿತ ಅರಣ್ಯಕ್ಕೆ ಹೊಂದಿಕೊಂಡಿರುವ ತಾಲ್ಲೂಕಿನ ವಣಗೂರು ಹಾಗೂ ಹೊಂಗಡಹಳ್ಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಕ್ಸಲರು 6 ತಿಂಗಳಿಂದ ಬಂದು ಹೋಗುತ್ತಿದ್ದರು ಎಂಬ ಸುದ್ದಿ ಆ ಭಾಗದ ಜನರಲ್ಲಿ ಚರ್ಚೆಯಾಗುತ್ತಿದೆ.



ವಣಗೂರು, ಬಿಸಿಲೆ, ಹಡ್ಲುಗದ್ದೆ, ಆನೆಗುಂಡಿ, ಹುದಿನೂರು, ಮಂಕನ ಹಳ್ಳಿ, ಮಾವಿನೂರು, ಎತ್ತಳ್ಳ, ಬೋರ್‌ಮನೆ, ಸಿಂಕೇರಿ, ಕಾಗಿನಹರೆ, ಬಾಳೇಹಳ್ಳ, ಮಕ್ಕೀರ್‌ಮನೆ, ಹೊನ್ನಾಟ್ಲು, ಜಾಗಾಟ, ಮ್ಯಾಗಡ ಹಳ್ಳಿ, ಅರಣಿ ಮುಂತಾದ ಗ್ರಾಮ ಗಳಲ್ಲಿ ಚಾರಣಕ್ಕೆ ಹೋಗುವ ಪ್ರವಾಸಿ ಗರಂತೆ ನಕ್ಸಲರು ಬಂದು ಹೋಗುತ್ತಿ ದ್ದರು ಎನ್ನಲಾಗಿದೆ. ಮಾವಿನೂರು ಗ್ರಾಮಕ್ಕೆ ಕಳೆದ ಆರು ತಿಂಗಳಲ್ಲಿ ಎರಡು ಬಾರಿ ಟ್ರಕಿಂಗ್ ಬಂದು ಊರ ಹೊರಗಿರುವ ಮಿಲ್ ಮನೆಯಲ್ಲಿ ಎರಡು ಮೂರು ದಿನ ಉಳಿದು ಹೋದವರು ನಕ್ಸಲರೇ ಇರಬೇಕು ಎಂಬ ಅನುಮಾನ ಈಗ ಬಲವಾಗುತ್ತಿದೆ.



ನಕ್ಸಲ್ ಅಧಿಕೃತ ಭೇಟಿ: ಸುಬ್ರಹ್ಮಣ್ಯ ಸಮೀಪದ ಬಾಗಿನಮಲೆ ಮೀಸಲು ಅರಣ್ಯದಲ್ಲಿ ನಕ್ಸಲ್ ಯಲ್ಲಪ್ಪ ಮೃತಪಟ್ಟ ನಂತರ, ನಕ್ಸಲರು ಹೊಂಗಡಹಳ್ಳ ಸಮೀಪದ ಸಿಂಕೆರೆ ಗ್ರಾಮದಲ್ಲಿ ಕಳೆದ ತಿಂಗಳ 13ರಂದು ಕಾಣಿಸಿಕೊಂಡಿದ್ದರು. ಸೆಪ್ಟಂಬರ್ 15ರ ಸಂಜೆಯಿಂದ 16ರ ಬೆಳಿಗ್ಗೆ ಯೊಳಗೆ ನಕ್ಸಲ್ ನಿಗ್ರಹ ಪಡೆ ದಾಳಿಗೆ ನಡೆಸುವ ಖಚಿತ ಮಾಹಿತಿ ಅವರಿಗೆ ದೊರೆತಿತ್ತು. `ಕೂಡಲೇ ಶರಣಾಗಬೇಕು ಇಲ್ಲವಾದರೆ ಎನ್‌ಕೌಂಟರ್ ನಡೆಸಿ ರಾಜ್ಯದಲ್ಲಿ ನಕ್ಸಲ್ ಚಟುವಟಿಕೆಗೆ ತಾತ್ವಿಕ ಅಂತ್ಯ ಹಾಡು ವುದು~ ಎಂಬ ಸಂದೇಶವನ್ನು ಮಾಧ್ಯ ಮಗಳ ಮೂಲಕ ನಕ್ಸಲ್ ನಿಗ್ರಹ ಪಡೆಯ ಐಜಿಪಿ ಅಲೋಕಕುಮಾರ್ ರವಾನಿಸಿದ್ದರು. 



ಈ ಹೇಳಿಕೆ ಹೊರಬಿದ್ದ ಮೂರು ಗಂಟೆಯೊಳಗೆ ಕೂಬಿಂಗ್ ನಿಲ್ಲಿಸುವಂತೆ ಮುಖ್ಯಮಂತ್ರಿಗಳು ಆದೇಶ ನೀಡಿದ್ದರು. ಸೆ.15ರ ರಾತ್ರಿ ಎಂಟು ಗಂಟೆಗೆ ನಕ್ಸಲ್ ನಿಗ್ರಹ ಪಡೆ ಹಾಗೂ ಜಿಲ್ಲಾ ಸಿವಿಲ್ ಪೊಲೀಸರು ಕಾರ್ಯಾ ಚರಣೆ ನಿಲ್ಲಿಸಿ ತಿಂಗಳು ಕಳೆಯುತ್ತಾ ಬಂದಿದೆ.



ವಣಗೂರು ಹಾಗೂ ಹೊಂಗಡ ಹಳ್ಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ನಕ್ಸಲರನ್ನು ಬೆಂಬಲಿ ಸುವ ಕುಟುಂಬಗಳಾಗಲಿ, ಜನಾಂಗ ವಾಗಲಿ ಇಲ್ಲ. ಆದ್ದರಿಂದ ಭಯದ ನೆರಳಿನಲ್ಲಿದ್ದ ನಕ್ಸಲರು ಕಾರ್ಯಾ ಚರಣೆ ಸ್ಥಗಿತವಾದ ಎರಡು ಮೂರು ದಿನಗಳಲ್ಲಿ ಜಿಲ್ಲೆಯಿಂದ ಹೊರ ಹೋಗಿರಬಹುದು ಎಂದು ನಂಬಲಾ ಗಿತ್ತು. ಆ ನಂಬಿಕೆ ಹುಸಿಯಾಗಿದೆ.



ಭಾನುವಾರ ಸಂಜೆ ಹೊನ್ನಾಟ್ಲು ಗ್ರಾಮದ ಪ್ರಕಾಶ್ ಮನೆಗೆ ಭೇಟಿ ನೀಡಿದ್ದ ನಕ್ಸಲರು 6.30ರಿಂದ ರಾತ್ರಿ 8.30ರ ವರೆಗೆ ಅವರ ಮನೆಯ ಲ್ಲಿದ್ದಾರೆ. `ಬಿಸಿಲೆ, ಹಡ್ಲುಗದ್ದೆ, ಆನೆಗುಂಡಿ, ಹುದಿನೂರು, ಮಂಕನ ಹಳ್ಳಿ, ಮಾವಿನೂರು, ಎತ್ತಳ್ಳ, ಬೋರ್‌ಮನೆ, ಸಿಂಕೇರಿ, ಕಾಗಿನಹರೆ, ಬಾಳೇಹಳ್ಳ, ಮಕ್ಕೀರ್‌ಮನೆ, ಹೊನ್ನಾಟ್ಲು, ಜಾಗಾಟ, ಮ್ಯಾಗಡ ಹಳ್ಳಿ, ಅರಣಿ ಗ್ರಾಮಸ್ಥರನ್ನು ಒಕ್ಕಲೆ ಬ್ಬಿಸಿ, ಆನೆ ಕಾರಿಡಾರ್ ಮಾಡಿದರೆ ಎಲ್ಲಿ ಹೋಗುತೀರಿ. ಸರ್ಕಾರ ಸೂಕ್ತ ಪರಿಹಾರ, ಬೇರೆಡೆ ಭೂಮಿ, ಮೂಲ ಸೌಕರ್ಯ ನೀಡಲಿದೆಯಾ~ ಎಂಬ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗಿದೆ.



ಕಾಡಾನೆಗಳ ದಾಳಿ, ಹದಗೆಟ್ಟ ರಸ್ತೆ, ಸಾರಿಗೆ ವ್ಯವಸ್ಥೆ, ಗುಂಡ್ಯ ಜಲ ವಿದ್ಯುತ್ ಯೋಜನೆಯಿಂದ ಆಗುವ ಸ್ಥಳಾಂತರ ಮುಂತಾದ ವಿಷಯಗಳ ಬಗ್ಗೆಯೂ ನಕ್ಸಲರು ಮಾತನಾಡಿರು ವುದು ತಿಳಿದು ಬಂದಿದೆ.

ನಕ್ಸಲರು ಹಾಸನ, ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗದಲ್ಲಿ ನೆಲೆಯೂರುವ ಬೆಳವಣಿಗೆ ಗಳು ಕಳೆದ ಎರಡು ತಿಂಗಳ ಅವರ ನಿರಂತರ ಚಟುವಟಿಕೆ ಪುಷ್ಠಿ ನೀಡಿವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry