ಬಿಸಿಸಿಐಯದ್ದು ಏಕಪಕ್ಷೀಯ ನಿರ್ಧಾರ

7

ಬಿಸಿಸಿಐಯದ್ದು ಏಕಪಕ್ಷೀಯ ನಿರ್ಧಾರ

Published:
Updated:

ಮುಂಬೈ (ಪಿಟಿಐ): `ಬಿಸಿಸಿಐ ಯಾರ ಮಾತನ್ನೂ ಕೇಳುವುದಿಲ್ಲ. ತಾನು ತೆಗೆದುಕೊಂಡಿದ್ದೇ ನಿರ್ಧಾರ. ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಏಕಪಕ್ಷೀಯ ತೀರ್ಮಾನ ತೆಗೆದುಕೊಳ್ಳುತ್ತಾರೆ. ಇದನ್ನು ನಾವು ಹೇಗೆ ಸಹಿಸಿಕೊಳ್ಳಲು ಸಾಧ್ಯ. ಹಾಗಾಗಿ ನಾವು ಈ ನಿರ್ಧಾರ ತೆಗೆದುಕೊಳ್ಳಬೇಕಾಯಿತು~ ಎಂದು `ಸಹಾರಾ ಇಂಡಿಯಾ ಪರಿವಾರ~ ಅಧ್ಯಕ್ಷ ಸುಬ್ರತೊ ರಾಯ್ ತಿಳಿಸಿದ್ದಾರೆ.ಈ ಮೂಲಕ ಭಾರತ ತಂಡದ ಪ್ರಾಯೋಜಕತ್ವ ಹಾಗೂ ಐಪಿಎಲ್‌ನಿಂದ ಹಿಂದೆ ಸರಿಯಲು ತೆಗೆದುಕೊಂಡಿರುವ ನಿರ್ಧಾರವನ್ನು ಅವರು ಸಮರ್ಥಿಸಿಕೊಂಡಿದ್ದಾರೆ.ಆದರೆ ಈ ನಮ್ಮ ನಿರ್ಧಾರದಿಂದ ಸಹಾರಾ ಪುಣೆ ವಾರಿಯರ್ಸ್ ತಂಡದ ಆಟಗಾರರಿಗೆ ಅನ್ಯಾಯವಾಗಬಾರದು. ಹಾಗಾಗಿ ಈ ಸಂಬಂಧ ಬಿಸಿಸಿಐನೊಂದಿಗೆ ಸಮಾಲೋಚನೆ ನಡೆಸಲು ಸಿದ್ಧರಿರುವುದಾಗಿ ಹೇಳಿದ್ದಾರೆ.`ಐಪಿಎಲ್‌ನಲ್ಲಿಆಡಲು ಅವಕಾಶ ಸಿಗದೇ ಆಟಗಾರರು ಸಮಸ್ಯೆ ಎದುರಿಸಬಾರದು ಹಾಗಾಗಿ ಪುಣೆ ತಂಡವನ್ನು ಯಾರಾದರೂ ಖರೀದಿಸಲು ಬಿಸಿಸಿಐ ಆದಷ್ಟು ಬೇಗ ಕ್ರಮಕೈಗೊಳ್ಳಬೇಕು~ ಎಂದು ರಾಯ್ ವಿವರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry