ಬಿಸಿಸಿಐ ಮಾಜಿ ಕಾರ್ಯದರ್ಶಿ ಜಯವಂತ್‌ ಲೇಲೆ ನಿಧನ

7

ಬಿಸಿಸಿಐ ಮಾಜಿ ಕಾರ್ಯದರ್ಶಿ ಜಯವಂತ್‌ ಲೇಲೆ ನಿಧನ

Published:
Updated:

ವಡೋದರ (ಪಿಟಿಐ): ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾಜಿ ಕಾರ್ಯದರ್ಶಿ ಜಯವಂತ್‌ ಲೇಲೆ (75 ವರ್ಷ) ಗುರುವಾರ ರಾತ್ರಿ ನಿಧನರಾದರು.ತೀವ್ರ ಹೃದಯಾಘಾತಕ್ಕೆ ಒಳಗಾದ ಲೇಲೆ ತಮ್ಮ ನಿವಾಸದಲ್ಲೇ ಕೊನೆಯುಸಿರೆಳೆದರು. ಅವರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ.ಲೇಲೆ ಸೆಪ್ಟೆಂಬರ್‌ 13 ರಂದು ತಮ್ಮ 75ನೇ ಹುಟ್ಟುಹಬ್ಬ ಆಚರಿಸಿದ್ದರು. ‘ರಾತ್ರಿ ಮಲಗುವ ಮುನ್ನ ಸ್ನಾನದ ಕೊಠಡಿಗೆ ತೆರಳುವಾಗ ಹೃದಯಾಘಾತಕ್ಕೆ ಒಳಗಾದರು. ಅಲ್ಪ ಸಮಯದಲ್ಲೇ ಕೊನೆಯುಸಿರೆಳೆದರು’ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಶುಕ್ರವಾರ ಬೆಳಿಗ್ಗೆ 11.00 ಗಂಟೆಗೆ ಅಂತ್ಯಕ್ರಿಯೆ ನಡೆಯಿತು.ಲೇಲೆ 1996 ರಿಂದ 2001 ರ ವರೆಗೆ ಮಂಡಳಿಯ ಕಾರ್ಯದರ್ಶಿ ಯಾಗಿ ಸೇವೆ ಸಲ್ಲಿಸಿದ್ದರು. ಕ್ಲಬ್‌ ಹಂತದಲ್ಲಿ ಕ್ರಿಕೆಟ್‌ ಆಡಿದ್ದ ಅವರು ಅಂಪೈರ್‌ ಆಗಿಯೂ ಕಾರ್ಯ­ ನಿರ್ವ ಹಿಸಿದ್ದರು. ಬಿಸಿಸಿಐ ಅಂಪೈರ್‌ಗಳ ಸಮಿತಿ ಯಲ್ಲೂ ಇದ್ದರು. ಜಗ ಮೋಹನ್‌ ದಾಲ್ಮಿಯ 1996 ರಲ್ಲಿ ಐಸಿಸಿ ಅಧ್ಯಕ್ಷ ರಾದಾಗ ಲೇಲೆ ಬಿಸಿಸಿಐ ಕಾರ್ಯ ದರ್ಶಿಯಾಗಿ ಆಯ್ಕೆ ಯಾಗಿದ್ದರು.ಇವರು ಅಧಿಕಾರದಲ್ಲಿದ್ದ ಸಂದರ್ಭದಲ್ಲೇ ಕ್ರಿಕೆಟ್‌ ಜಗತ್ತನ್ನು ತಲ್ಲಣಗೊಳಿಸಿದ್ದ ಮ್ಯಾಚ್‌ ಫಿಕ್ಸಿಂಗ್‌ (2000ದಲ್ಲಿ) ಪ್ರಕರಣ ನಡೆದಿತ್ತು.ಬಿಸಿಸಿಐ ಸಂತಾಪ: ಲೇಲೆ ನಿಧನಕ್ಕೆ ಬಿಸಿಸಿಐ ಸಂತಾಪ ಸೂಚಿಸಿದೆ. ‘ಅವರ ನಿಧನದ ಸುದ್ದಿ ತಿಳಿದು ಆಘಾತವಾ ಯಿತು. ಬರೋಡ ಕ್ರಿಕೆಟ್‌ ಸಂಸ್ಥೆಯ ಪ್ರತಿನಿಧಿಯಾಗಿ ಅವರು ಮೂರು ದಶಕ ಗಳಿಗೂ ಅಧಿಕ ಕಾಲ ಬಿಸಿಸಿಐ ಜೊತೆ ಸಂಪರ್ಕದಲ್ಲಿದ್ದರು’ ಎಂದು ಎನ್‌. ಶ್ರೀನಿವಾಸನ್‌ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry