ಭಾನುವಾರ, ಆಗಸ್ಟ್ 25, 2019
28 °C
ಜಿಂಬಾಬ್ವೆ ಸರಣಿ : ಬೆಂಚ್ ಕಾದ ಪವ್ರೇಜ್ ರಸೂಲ್

ಬಿಸಿಸಿಐ ಮೇಲೆ ಕಿಡಿಕಾರಿದ ಒಮರ್

Published:
Updated:

ಶ್ರೀನಗರ (ಪಿಟಿಐ) : ಜಿಂಬಾಬ್ವೆ ಎದುರಿನ ಏಕದಿನ ಕ್ರಿಕೆಟ್ ಸರಣಿಯಲ್ಲಿ ಜಮ್ಮು-ಕಾಶ್ಮೀರದ ಆಲ್‌ರೌಂಡರ್ ಪವ್ರೇಜ್ ರಸೂಲ್ ಅವರಿಗೆ ಅವಕಾಶ ನೀಡದಿರುವುದಕ್ಕೆ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಬಿಸಿಸಿಐ ವಿರುದ್ಧ ಶನಿವಾರ ಕಿಡಿಕಾರಿದರು.ನಿಜವಾಗಿಯೂ ರಸೂಲ್‌ಗೆ ಅವಮಾನ ಮಾಡುವ ಉದ್ದೇಶವೇ ಇದ್ದಿದ್ದರೆ ಸ್ವದೇಶದಲ್ಲೇ ಅಂತಹ ಹೀನ ಕೆಲಸ ಮಾಡಬಹುದಿತ್ತು. ಅದಕ್ಕೆಂದು ಜಿಂಬಾಬ್ವೆ ಸರಣಿಗೆ ಕರೆದುಕೊಂಡು ಹೋಗುವ ಅವಶ್ಯಕತೆಯಾದರೂ ಏನಿತ್ತು ಎಂದು ಜಿಂಬಾಬ್ವೆ ಎದುರಿನ ಕೊನೆಯ ಪಂದ್ಯದಲ್ಲೂ ರಸೂಲ್ ಅವರಿಗೆ ಆಡಲು ಅವಕಾಶ ಕಲ್ಪಿಸದೇ ಇರುವುದನ್ನು ಖಂಡಿಸಿ ಕ್ರಿಕೆಟ್ ಅಭಿಮಾನಿಯೂ ಆಗಿರುವ ಒಮರ್ ತಮ್ಮ ಟ್ವಿಟರ್‌ನಲ್ಲಿ ಬರೆದಿದ್ದಾರೆ.ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಭಾರತ ತಂಡದ 11 ಆಟಗಾರರಲ್ಲಿ ರಸೂಲ್ ಅವರಿಗೆ ಸ್ಥಾನ ನೀಡದ್ದಕ್ಕೆ ಅಸಮಾಧಾನಗೊಂಡ ಒಮರ್, ರಸೂಲ್ ಅವರಿಗೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಒಂದು ಅವಕಾಶ ನೀಡುವಂತೆ ಶುಕ್ರವಾರ ಬಿಸಿಸಿಐಗೆ ಮನವಿ ಮಾಡುವಂತಹ ರೀತಿಯಲ್ಲಿ ತಮ್ಮ ಟ್ವಿಟರ್‌ನಲ್ಲಿ ಬರೆದಿದ್ದರು. ಆದರೆ ಶನಿವಾರ ನಡೆಯುತ್ತಿರುವ ಅಂತಿಮ ಪಂದ್ಯದಲ್ಲೂ ರಸೂಲ್ ಅವರಿಗೆ ಅವಕಾಶ ನೀಡದಿರುವುದು ತೀವ್ರ ಅಸಮಾಧಾನ ತಂದಿದೆ ಎಂದು ಅವರು ಹೇಳಿದ್ದಾರೆ.

Post Comments (+)