ಬಿಸಿಸಿಐ ಸಮಿತಿಯಲ್ಲಿ ಕರ್ನಾಟಕದ ಒಂಬತ್ತು ಮಂದಿ

7

ಬಿಸಿಸಿಐ ಸಮಿತಿಯಲ್ಲಿ ಕರ್ನಾಟಕದ ಒಂಬತ್ತು ಮಂದಿ

Published:
Updated:

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ಅಧ್ಯಕ್ಷ ಅನಿಲ್ ಕುಂಬ್ಳೆ ಸೇರಿದಂತೆ ಒಟ್ಟು ಒಂಬತ್ತು ಮಂದಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ವಿವಿಧ ಸಮಿತಿಯ ಸದಸ್ಯರಾಗಿ ನೇಮಕಗೊಂಡಿದ್ದಾರೆ.ಈ ಬಾರಿ ರಾಜ್ಯದವರಿಗೆ ಹೆಚ್ಚಿನ ಪ್ರಾತಿನಿಧ್ಯ ಲಭಿಸಿರುವುದಕ್ಕೆ ಇದು ಸಾಕ್ಷಿ. ಮಾಜಿ ನಾಯಕ ಕುಂಬ್ಳೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಕ್ರಿಕೆಟ್ ಸಮಿತಿ  ಹಾಗೂ ಬಿಸಿಸಿಐ ತಾಂತ್ರಿಕ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಮುಖ್ಯ ಸಲಹೆಗಾರ, ಟೆನ್ವಿಕ್ ಕಂಪೆನಿಯ ಮುಖ್ಯಸ್ಥ ಹಾಗೂ ರಾಜ್ಯ ವನ್ಯಜೀವಿ ಮಂಡಳಿ ಉಪಾಧ್ಯಕ್ಷರೂ ಆಗಿರುವ ಮಾಜಿ ಲೆಗ್ ಸ್ಪಿನ್ನರ್‌ಗೆ ಮತ್ತಷ್ಟು ಜವಾಬ್ದಾರಿಗಳು ಹೆಗಲೇರಿವೆ.ಬಿಸಿಸಿಐ ವಿವಿಧ ಸಮಿತಿಗಳ ಸದಸ್ಯರು:
ಅನಿಲ್ ಕುಂಬ್ಳೆ: ತಾಂತ್ರಿಕ ಸಮಿತಿ ಅಧ್ಯಕ್ಷ, ಸುಧಾಕರ್ ರಾವ್: ಅಂಪೈರ್ ಸಮಿತಿ ಸದಸ್ಯ. ಜೆ.ಅಭಿರಾಮ್: ಜೂನಿಯರ್ ಕ್ರಿಕೆಟ್ ಸಮಿತಿ ಸದಸ್ಯ. ಡಾ.ಸದಾನಂದ ಮಯ್ಯ: ಐಟಿ ಸಮಿತಿ ಸದಸ್ಯ. ತಲ್ಲಮ್ ವೆಂಕಟೇಶ್: ಮಾರುಕಟ್ಟೆ ಸಮಿತಿ ಸದಸ್ಯ. ರೋಜರ್ ಬಿನ್ನಿ: ಆಯ್ಕೆ ಸಮಿತಿ ಸದಸ್ಯ. ನಾರಾಯಣ ರಾಜು: ಕ್ರೀಡಾಂಗಣ ಹಾಗೂ ಪಿಚ್ ಸಮಿತಿ ಸದಸ್ಯ. ಎ.ವಿ.ಜಯಪ್ರಕಾಶ್: ಅಂಪೈರ್ ಸಮಿತಿ ಸದಸ್ಯ. ಎಂ.ಆರ್. ಕೃಷ್ಣ (ಮ್ಯೂಜಿಯಂ ಸಮಿತಿ ಸದಸ್ಯ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry