ಮಂಗಳವಾರ, ಏಪ್ರಿಲ್ 13, 2021
28 °C

ಬಿಹಾರದಲ್ಲಿ ಸೌರ ವಿದ್ಯುದ್ದೀಪ ಖರೀದಿಯಲ್ಲಿ ಅವ್ಯವಹಾರ.227 ಗ್ರಾ.ಪಂ. ಅಧ್ಯಕ್ಷರ ಬಂಧನಕ್ಕೆ ವಾರೆಂಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಟ್ನಾ (ಐಎಎನ್‌ಎಸ್): ಬಿಹಾರದಲ್ಲಿ ಸೌರ ವಿದ್ಯುದ್ದೀಪ ಖರೀದಿಯಲ್ಲಿ ಅವ್ಯವಹಾರ ನಡೆದಿದ್ದು, ಈ ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಇನ್ನೇನು ಅವಧಿ ಪೂರ್ಣಗೊಳಲಿರುವ 227 ಗ್ರಾಮ ಪಂಚಾಯಿತಿ ಅಧ್ಯಕ್ಷರ (ಮುಖ್ಯಸ್ಥರು) ಬಂಧನಕ್ಕೆ ಸಿಜೆಎಂ ನ್ಯಾಯಾಲಯ ವಾರೆಂಟ್ ಜಾರಿ ಮಾಡಿದೆ.ಅನಧಿಕೃತ ಮಳಿಗೆಗಳಿಂದ ಸೌರ ವಿದ್ಯುದ್ದೀಪಗಳನ್ನು ಖರೀದಿಸಿ ಅವ್ಯವಹಾರ ನಡೆಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸೀತಾಮಾರ್ಹಿ ಜಿಲ್ಲೆಯ 227 ಗ್ರಾಮ ಪಂಚಾಯಿತಿಗಳ ಮುಖ್ಯಸ್ಥರ ಬಂಧನಕ್ಕೆ ಈ ವಾರೆಂಟ್ ಜಾರಿ ಮಾಡಲಾಗಿದೆ.ಈ ಮಧ್ಯೆ ರಾಜ್ಯದ 2.62 ಲಕ್ಷ ಗ್ರಾಮ ಪಂಚಾಯಿತಿ ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿರುವುದರಿಂದ ನಾಮಪತ್ರ ಸಲ್ಲಿಸುವುದಕ್ಕೂ ಮುಂಚೆ ಬಂಧನಕ್ಕೊಳಗಾಗುವುದನ್ನು ಹೇಗಾದರೂ ಮಾಡಿ ತಪ್ಪಿಸಬೇಕು ಸೀತಾಮಾರ್ಹಿ ಜಿಲ್ಲೆಯ ಬಹುತೇಕ ಗ್ರಾ.ಪಂ. ಮುಖ್ಯಸ್ಥರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ.ಸೌರ ವಿದ್ಯುದ್ದೀಪ ಖರೀದಿಯಲ್ಲಿ 40 ಕೋಟಿ ರೂಪಾಯಿಗಳ ಅವ್ಯವಹಾರ ನಡೆದಿದ್ದು, ಇದೇ ಆರೋಪದ ಮೇಲೆ ಕ್ಷೇತ್ರಾಭಿವೃದ್ಧಿ ಅಧಿಕಾರಿಗಳು (ಬಿಡಿಒ) ಸೇರಿದಂತೆ ಇನ್ನೂರಕ್ಕೂ ಹೆಚ್ಚು ಸರ್ಕಾರಿ ನೌಕರರು ವಿಚಾರಣೆಗೆ ಗುರಿಯಾಗಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.