ಬಿಹಾರದ ಯುವಕ ಕರೋಡ್‌ಪತಿ

7

ಬಿಹಾರದ ಯುವಕ ಕರೋಡ್‌ಪತಿ

Published:
Updated:

ನವದೆಹಲಿ (ಪಿಟಿಐ): `ಕೌನ್ ಬನೇಗಾ ಕರೋಡ್‌ಪತಿ~ ಕಾರ್ಯಕ್ರಮದಲ್ಲಿ 5 ಕೋಟಿ ರೂಪಾಯಿಗಳ ಜಾಕ್‌ಪಾಟ್ ಮೊತ್ತವನ್ನು ಗಳಿಸಿರುವ ಬಿಹಾರದ ಸುಶಿಲ್ ಕುಮಾರ್ ಸಾಧನೆ ಒಂದು ಅದ್ಭುತ ಚಮತ್ಕಾರವೇ ಸರಿ ಎಂದು ಕಾರ್ಯಕ್ರಮ ನಿರ್ವಾಹಕ ಮತ್ತು ನಟ ಅಮಿತಾಭ್ ಬಚ್ಚನ್ ಬಣ್ಣಿಸಿದ್ದಾರೆ.ಶ್ರೀಸಾಮಾನ್ಯನ ಪಾಲಿಗೆ ಕೆಬಿಸಿ ಎಂತಹ ಸದವಕಾಶ ಸೃಷ್ಟಿಸಿದೆ ಎಂಬುದಕ್ಕೆ ಅವರ ಈ ಸಾಧನೆ ನಿಜಕ್ಕೂ ಅತ್ಯುತ್ತಮ ಸಾಕ್ಷಿಯಾಗಿದೆ ಎಂದು ಅವರು ತಮ್ಮ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. ಈ ಕಾರ್ಯಕ್ರಮ ನವೆಂಬರ್ 2ರಂದು ಸೋನಿ ಟಿ.ವಿ.ಯಲ್ಲಿ ಪ್ರಸಾರವಾಗಲಿದೆ.ಕಂಪ್ಯೂಟರ್ ನಿರ್ವಾಹಕ ಮತ್ತು ಬೋಧಕನಾಗಿರುವ 27 ವರ್ಷದ ಸುಶಿಲ್ ಕುಮಾರ್ ಇತ್ತೀಚೆಗಷ್ಟೇ ಮದುವೆಯಾಗಿದ್ದಾರೆ.ಅವರ ತಿಂಗಳ ಆದಾಯ ಕೇವಲ 6,500 ರೂಪಾಯಿ. ಈ ಮಹತ್ವಾಕಾಂಕ್ಷಿಯು ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದ ಹಾಟ್‌ಸೀಟ್‌ನಲ್ಲಿ ಆಸೀನರಾಗಿ ಎಲ್ಲ ಪ್ರಶ್ನೆಗಳಿಗೂ ಸರಿ ಉತ್ತರ ನೀಡುವ ಮೂಲಕ ಪಂದ್ಯದ 5 ಕೋಟಿ ರೂಪಾಯಿಗಳ ಜಾಕ್‌ಪಾಟ್ ಮೊತ್ತವನ್ನು ಗಳಿಸಿರುವ ಮೊದಲಿಗ ಎನಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry