ಬಿಹಾರದ ವಿದ್ಯಾರ್ಥಿ ಮೇಲೆ ರ‍್ಯಾಗಿಂಗ್

7

ಬಿಹಾರದ ವಿದ್ಯಾರ್ಥಿ ಮೇಲೆ ರ‍್ಯಾಗಿಂಗ್

Published:
Updated:

ಬೆಂಗಳೂರು: ಬಿಹಾರ ಮೂಲದ ವಿದ್ಯಾರ್ಥಿ ಮೇಲೆ ಹಿರಿಯ ವಿದ್ಯಾರ್ಥಿ ಗಳು ಹಲ್ಲೆ ನಡೆಸಿ ಮತ್ತು ಆತನ ತಲೆಗೂ ದಲು ಕತ್ತರಿಸಿ ರ‍್ಯಾಗಿಂಗ್  ಮಾಡಿರುವ ಘಟನೆ ದಯಾನಂದ ಸಾಗರ್‌ ಕಾಲೇಜಿನಲ್ಲಿ ನಡೆದಿದೆ.ಈ ಸಂಬಂಧ ಕಾಲೇಜಿನ ಬಿ.ಕಾಂ ಪ್ರಥಮ ವರ್ಷದ ವಿದ್ಯಾರ್ಥಿ ಸಿದ್ದಾರ್ಥ್‌ ಕುಮಾರ್‌ ಎಂಬಾತ  ದ್ವಿತೀಯ ಮತ್ತು ತೃತೀಯ ವರ್ಷದ ಬಿ.ಕಾಂ ವಿದ್ಯಾರ್ಥಿ ಗಳಾದ ಧರ್ಮೇಂದ್ರ, ದಿವೇಶ್‌, ನಿಶಿತ್‌, ರಿಶು ಎಂಬುವರ ವಿರುದ್ಧ ಕುಮಾರ ಸ್ವಾಮಿ ಲೇಔಟ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.ಸಿದ್ದಾರ್ಥ್‌ ತನ್ನ ಅಣ್ಣನ ಜತೆ ಕುಮಾರ ಸ್ವಾಮಿಲೇಔಟ್‌ 44ನೇ ಅಡ್ಡರಸ್ತೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾನೆ. ಆತನ ಪೋಷಕರು ಬಿಹಾರದಲ್ಲಿ ನೆಲೆಸಿ ದ್ದಾರೆ. ಜಾರ್ಖಂಡ್‌ ಮೂಲದ ಧರ್ಮೇಂದ್ರ, ದಿವೇಶ್‌, ನಿಶಿತ್‌, ರಿಶು ತಲೆಮರೆಸಿ ಕೊಂಡಿದ್ದಾರೆ.‘ಆ ನಾಲ್ಕು ಮಂದಿ ಒಂದೂವರೆ ತಿಂಗಳಿನಿಂದ ರ‍್ಯಾಗಿಂಗ್ ಮಾಡುತ್ತಿದ್ದರು. ತಮ್ಮ ಮನೆಗೆ ಎಳೆದೊಯ್ದು ವಿವಸ್ತ್ರ ಗೊಳಿಸಿ ನೃತ್ಯ ಮಾಡಿಸಿದ್ದರು.  ಈ ಸಂಗತಿ ಯನ್ನು ಯಾರಿಗೂ ತಿಳಿಸಬಾರದೆಂದು  ಕೊಲೆ ಬೆದರಿಕೆ ಹಾಕಿದ್ದರು’ ಎಂದು ಸಿದ್ದಾರ್ಥ್‌ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾನೆ.‘ಕೇಶಮುಂಡನ ಮಾಡಿಸಿಕೊಂಡು ಕಾಲೇಜಿಗೆ ಬರುವಂತೆ ಅವರು ತಾಕೀತು ಮಾಡಿದ್ದರು. ಆದರೆ, ನಾನು ಕೇಶ ಮುಂಡನ ಮಾಡಿಸಿಕೊಳ್ಳದೆ ಸೆ.17 ರಂದು ಕಾಲೇಜಿಗೆ ಹೋಗಿದ್ದೆ. ಈ ವಿಷ ಯವಾಗಿ ಅವರು ನನ್ನೊಂದಿಗೆ ಜಗಳ ವಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು’ ಎಂದು ಆತ ಹೇಳಿದ್ದಾನೆ.‘ಸೆ.18ರಂದು ತರಗತಿ ಮುಗಿಸಿ ಕೊಂಡು ಮನೆಗೆ ಹೋಗುತ್ತಿದ್ದಾಗ ಆ ನಾಲ್ಕೂ ಮಂದಿ ನನ್ನನ್ನು ಹಿಂಬಾಲಿಸಿ ಬಂದು ಕಾಲೇಜಿನಿಂದ ಸ್ವಲ್ಪ ದೂರದಲ್ಲಿ ಅಡ್ಡಗಟ್ಟಿ ಕಬ್ಬಿಣದ ಸಲಾಕೆಯಿಂದ ಹಲ್ಲೆ ನಡೆಸಿದರು. ಕೂದಲು ಕತ್ತರಿಸಿ ಹೀಯಾ ಳಿಸಿದರು’ ಎಂದು ಸಿದ್ದಾರ್ಥ್‌ ತಿಳಿಸಿದ್ದಾನೆ.‘ವೈಯಕ್ತಿಕ ವಿಷಯಕ್ಕೆ ಸಿದ್ದಾರ್ಥ್‌ ಕುಮಾರ್‌ ಮತ್ತು ಧರ್ಮೇಂದ್ರನ ನಡುವೆ ಕಾಲೇಜಿನಲ್ಲಿ ಸೆ.16ರಂದು ಜಗಳವಾ ಗಿತ್ತು. ಈ ಕಾರಣಕ್ಕಾಗಿ ಅವರಿಬ್ಬರನ್ನೂ ತಾತ್ಕಾಲಿಕವಾಗಿ ಕಾಲೇಜಿನಿಂದ ಹೊರ ಹಾಕಿದ್ದೆವು’ ಎಂದು ಶ್ರೀಧರ್‌ ತಿಳಿಸಿದ್ದಾರೆ.‘ಸಿದ್ದಾರ್ಥ್‌ಕುಮಾರ್‌ ಕಾಲೇಜಿನ ಆಡಳಿತ ಮಂಡಳಿಗೆ ಈವರೆಗೆ ಯಾವುದೇ ದೂರು ಕೊಟ್ಟಿಲ್ಲ. ಘಟನೆ ಸಂಬಂಧ ಪೊಲೀಸರು ವಿಚಾರಣೆ ನಡೆಸಲು ಕಾಲೇಜಿಗೆ ಬಂದಾಗಲೇ ಆತ ಪೊಲೀಸರಿಗೆ ದೂರು ನೀಡಿರುವ ಸಂಗತಿ ಗೊತ್ತಾಯಿತು’ ಎಂದು ಅವರು ಹೇಳಿದ್ದಾರೆ.ಪ್ರಕರಣ ನಡೆದಿಲ್ಲ

‘ಕಾಲೇಜಿನಲ್ಲಿ ಯಾವುದೇ ರ್‌್ಯಾಗಿಂಗ್‌ ಪ್ರಕರಣ ನಡೆದಿಲ್ಲ. ಸಿದ್ದಾರ್ಥ್‌ ಪ್ರಕರಣದ ಬಗ್ಗೆ ಕಾಲೇ ಜಿನ ರ್‌್ಯಾಗಿಂಗ್ ನಿಗ್ರಹ ಘಟಕದಿಂದ ಪರಿಶೀಲನೆ ನಡೆಸಲಾ ಗುತ್ತದೆ’

ಡಾ.ಶ್ರೀಧರ್‌, ಕಾಲೇಜಿನ ನಿರ್ದೇಶಕದೂರು ದಾಖಲು

‘ಸಿದ್ದಾರ್ಥ್‌ಕುಮಾರ್‌ನ ದೂರು ಆಧರಿಸಿ ಆ ನಾಲ್ಕು ವಿದ್ಯಾರ್ಥಿಗಳ ವಿರುದ್ಧ ರಾಜ್ಯ ಶಿಕ್ಷಣ ಕಾಯ್ದೆ–19 95ರ ಸೆಕ್ಷನ್‌ 116 ಮತ್ತು 117ರ ಅಡಿ (ರ್‌್ಯಾಗಿಂಗ್‌ ತಡೆಗೆ ಸಂಬಂಧಿ ಸಿದ್ದು) ಪ್ರಕರಣ ದಾಖಲಿಸಿಕೊಳ್ಳ ಲಾಗಿದೆ. ಹಲ್ಲೆ, ಅಪರಾಧ ಸಂಚು, ಮಾರಕಾಸ್ತ್ರಗಳಿಂದ ಹಲ್ಲೆ ಮತ್ತು ಗೌರವಕ್ಕೆ ಧಕ್ಕೆ ತಂದ ಆರೋಪದ ಡಿಯೂ ದೂರು ದಾಖಲಿಸಲಾಗಿದೆ’

ಎಚ್‌.ಎಸ್‌.ರೇವಣ್ಣ, ದಕ್ಷಿಣ ವಿಭಾಗದ ಡಿಸಿಪಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry