ಭಾನುವಾರ, ಮೇ 9, 2021
19 °C

ಬಿಹಾರ: ಇಂದು ವಿಶ್ವಾಸಮತ ಯಾಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಟ್ನಾ (ಪಿಟಿಐ): ಬಿಜೆಪಿ ಜೊತೆಗಿನ ಮೈತ್ರಿ ಮುರಿದುಕೊಂಡು ಎನ್‌ಡಿಎಯಿಂದ ಹೊರಬಂದ ಮೇಲೆ ಅಲ್ಪಮತಕ್ಕೆ ಕುಸಿದಿರುವ ಜೆಡಿಯು ಸರ್ಕಾರ ಬುಧವಾರ (ಜೂನ್ 19) ವಿಶ್ವಾಸ   ಮತ ಯಾಚಿಸಲಿದೆ.ಈಗಾಗಲೇ ನಾಲ್ವರು ಪಕ್ಷೇತರರು, ಎಲ್‌ಜೆಪಿ ಒಬ್ಬ ಶಾಸಕರು ಬೆಂಬಲ ನೀಡುವುದಾಗಿ ಘೋಷಿಸಿರುವುದರಿಂದ ಮುಖ್ಯಮಂತ್ರಿ ನಿತೀಶ್ ಕುಮಾರ್ ಜಯಗಳಿಸುವ ಸಾಧ್ಯತೆ ಹೆಚ್ಚಿದೆ.ಬಿಹಾರದ ಇತಿಹಾಸದಲ್ಲೇ ಸರ್ಕಾರವೊಂದು ವಿಶ್ವಾಸಮತ ಕೋರಲು ವಿಶೇಷ ಅಧಿವೇಶನ ಕರೆದಿರುವುದು ಇದೇ ಮೊದಲು ಎಂದು    ವಿಧಾನ ಸಭೆಯ ಮೂಲಗಳು ತಿಳಿಸಿವೆ.ವಿಧಾನಸಭೆಯ ಸಭಾ ನಾಯಕರೂ ಆದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ವಿಶ್ವಾಸಮತ ಕೋರಲಿದ್ದಾರೆ. ಇದರ ಮೇಲೆ ಚರ್ಚೆ ನಡೆಯಲಿದ್ದು, ಅಗತ್ಯ ಬಿದ್ದರೆ ನಿರ್ಣಯವನ್ನು ಮತಕ್ಕೆ ಹಾಕಲಾಗುತ್ತದೆ ಎಂದು ಮೂಲಗಳು ಹೇಳಿವೆ.

243 ಸದಸ್ಯ ಬಲವಿರುವ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ 122 ಶಾಸಕರ ಬೆಂಬಲ ಅಗತ್ಯ. ಜೆಡಿಯು 118, ಬಿಜೆಪಿ 91, ಆರ್‌ಜೆಡಿ 22, ಕಾಂಗ್ರೆಸ್ 4, ಎಲ್‌ಜೆಪಿ ಮತ್ತು ಸಿಪಿಐ ತಲಾ 1 ಮತ್ತು ಆರು ಪಕ್ಷೇತರ ಶಾಸಕರು ಇದ್ದಾರೆ. ಸರಳ ಬಹುಮತಕ್ಕೆ ಜೆಡಿಯುಗೆ ನಾಲ್ವರು ಶಾಸಕರ ಬೆಂಬಲ ಅಗತ್ಯವಿದೆ.ಸೋಮವಾರ ನಡೆದ ಜೆಡಿಯು ಸಭೆಯಲ್ಲಿ ಹಾಜರಿದ್ದ ನಾಲ್ವರು ಪಕ್ಷೇತರರು ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಕಾಂಗ್ರೆಸ್ ಶಾಸಕರು ಗೈರು ಹಾಜರಾಗಲು ನಿರ್ಧರಿಸಿದ್ದು, ಹೈಕಮಾಂಡ್ ಸೂಚನೆಗಾಗಿ ಕಾಯುತ್ತಿದ್ದಾರೆ. ಸರ್ಕಾರದ ವಿರುದ್ಧ ಮತಹಾಕುವುದಾಗಿ  ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.