ಬಿಹಾರ: ಎಲ್ಲ ಸ್ಥಾನಗಳಲ್ಲಿ ಸ್ಪರ್ಧಿಸಲು ಬಿಜೆಪಿ ಸಿದ್ಧತೆ

7

ಬಿಹಾರ: ಎಲ್ಲ ಸ್ಥಾನಗಳಲ್ಲಿ ಸ್ಪರ್ಧಿಸಲು ಬಿಜೆಪಿ ಸಿದ್ಧತೆ

Published:
Updated:

ಪಟ್ನಾ (ಪಿಟಿಐ): ಕೊನೆಯ ಕ್ಷಣದಲ್ಲಿ ಜೆಡಿಯು ತನ್ನ ಮೈತ್ರಿ ತೊರೆಯಬಹುದೆಂಬ ಭೀತಿಯಲ್ಲಿರುವ ಬಿಹಾರ ಬಿಜೆಪಿ ರಾಜ್ಯ ಘಟಕವು ಎಲ್ಲ 40 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸಲು ಸಿದ್ಧತೆ ನಡೆಸಿದೆ.`ಒಂದು ವೇಳೆ ಜೆಡಿಯು ತನ್ನ ಮೈತ್ರಿ ತೊರೆದರೂ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲ ಸ್ಥಾನಗಳಲ್ಲೂ ಸ್ಪರ್ಧಿಸಲು ತೀರ್ಮಾನಿಸಲಾಗಿದೆ~ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸಿ.ಪಿ. ಠಾಕೂರ್ ಮಂಗಳವಾರ ಇಲ್ಲಿ ಸ್ಪಷ್ಟಪಡಿಸಿದ್ದಾರೆ. ರಾಜ್ಯ ಬಿಜೆಪಿಯ ಈ ತೀರ್ಮಾನವನ್ನು ಸಮರ್ಥಿಸಿಕೊಂಡಿರುವ ಠಾಕೂರ್, ಒಂದು ವೇಳೆ ಬಿಜೆಪಿ-ಜೆಡಿಯು ಮೈತ್ರಿ ಮುಂದುವರೆದರೆ ಕೊನೆಗಳಿಗೆಯಲ್ಲಿ ಸ್ಥಾನ ಹೊಂದಾಣಿಕೆ ಮಾಡಿಕೊಳ್ಳಲಾಗುವುದು. ಹಾಗಂತ ಚುನಾವಣಾ ಪೂರ್ವ ಸಿದ್ಧತೆ ಮಾಡದೆ ಕೈಕಟ್ಟಿ ಕುಳಿತುಕೊಳ್ಳಲು ಆಗದು ಎಂದು ಹೇಳಿದ್ದಾರೆ.ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಕೂಡಾ ಇದಕ್ಕೆ ಧ್ವನಿಗೂಡಿಸಿದ್ದಾರೆ.ಬಿಹಾರ ಬಿಜೆಪಿ ಮತ್ತು ಜೆಡಿಯು ಸಂಬಂಧ ಸಂಪೂರ್ಣ ಹದಗೆಟ್ಟಿದ್ದು ಯಾವುದೇ ಕ್ಷಣದಲ್ಲಾದರೂ ಮೈತ್ರಿ ಮುರಿದು ಬೀಳುವ ಸಾಧ್ಯತೆ ಎಂಬ ಸುದ್ದಿ ರಾಜಕೀಯ ವಲಯಗಳಲ್ಲಿ ಹರಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry