ಬಿಹಾರ, ಹೈದರಾಬಾದ್‌ಗೆ ಎನ್‌ಐಎ ತಂಡ

7
ಯಾಸೀನ್‌ ಭಟ್ಕಳ, ಅಖ್ತರ್‌ ವಿಚಾರಣೆ

ಬಿಹಾರ, ಹೈದರಾಬಾದ್‌ಗೆ ಎನ್‌ಐಎ ತಂಡ

Published:
Updated:

ಪಟ್ನಾ/ಹೈದರಾಬಾದ್‌ (ಪಿಟಿಐ, ಐಎ­ಎನ್‌ಎಸ್‌): ಇಂಡಿಯನ್‌ ಮುಜಾಹಿ­ದೀನ್ ಸಹ ಸಂಸ್ಥಾ­ಪಕ ಯಾಸೀನ್‌ ಭಟ್ಕಳ­ನನ್ನು ಬಿಹಾ­­ರದ ದರ್ಬಾಂಗ ಜಿಲ್ಲೆಗೆ ಮತ್ತು ಆಂಧ್ರ­ದಲ್ಲಿ ಫೆ.21ರಂದು ನಡೆದ ಸ್ಫೋಟ ಪ್ರಕರಣಗಳಿಗೆ ಸಂಬಂಧಿ­ಸಿ­ದಂತೆ ವಿಚಾರಣೆ ನಡೆಸಲು ಭಟ್ಕಳ್‌ನ ಸಹಾಯಕ ಅಸಾ­ದುಲ್ಲಾ ಅಖ್ತರ್‌ನನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಶನಿವಾರ ಹೈದರಾಬಾದ್‌ಗೆ ಕರೆ ತಂದಿತು.ಭಟ್ಕಳ ನೀಡಿದ ಮಾಹಿತಿಯ ಮೇಲೆ ದರ್ಬಾಂಗದ ವಿವಿಧೆಡೆ ಎನ್‌ಐಎ ತಂಡ ಕಾರ್ಯಾಚರಣೆ ನಡೆಸಿ ಇತರೆ ಶಂಕಿತ ಉಗ್ರರಿಗಾಗಿ ಶೋಧ ನಡೆಸಿತು ಎಂದು ಪೊಲೀಸರು ತಿಳಿಸಿದ್ದಾರೆ. ‘ಎನ್‌ಐಎ ಅಧಿಕಾರಿಗಳು ಭಟ್ಕಳ­ನನ್ನು ಬಿಹಾರಕ್ಕೆ ಕರೆತಂದು, ಆತ ಹಿಂದೆ ರಾಜ್ಯಕ್ಕೆ ಭೇಟಿ ನೀಡಿದ ಸಂದಭ­ರ್ದಲ್ಲಿ ವಾಸವಾಗಿದ್ದ ಎನ್ನಲಾದ ಒಟ್ಟು ಆರು ಸ್ಥಳಗಳಿಗೆ ಭೇಟಿ ನೀಡಿತು’ ಎಂದು ಅವರು ಹೇಳಿದ್ದಾರೆ.‘ಎನ್‌ಐಎ ಭಟ್ಕಳನನ್ನು ದರ್ಬಾಂಗ ಸಮೀಪದ ಸಮಷ್ಟಿ­ಪುರ ಮತ್ತು ಮಧು­ಬನಿ ಜಿಲ್ಲೆಗಳಿಗೂ ಕರೆದು­ಕೊಂಡು ಹೋಗಿ ಇಂಡಿಯನ್‌ ಮುಜಾಹಿದೀನ್‌ಗೆ ಸೇರಿದ ಉಗ್ರರ ತಾಣಗಳ ಬಗ್ಗೆ ಮಾಹಿತಿ ಕಲೆ ಹಾಕಿತು’ ಎಂದು ತಿಳಿಸಿದ್ದಾರೆ. ‘ದರ್ಬಾಂಗ, ಮಧುಬನಿ ಮತ್ತು ಸಮ­ಷ್ಟಿ­­ಪುರ ಜಿಲ್ಲೆಗ­ಳೊಂದಿಗೆ ತನಗಿರುವ ಸಂಬಂಧಗಳ ಬಗ್ಗೆ ಭಟ್ಕಳ ತನಿಖಾಧಿ­ಕಾ­ರಿ­ಗಳಿಗೆ ಮಾಹಿತಿ ನೀಡಿದ್ದಾನೆ’ ಎಂದು ಅವರು ನುಡಿದಿದ್ದಾರೆ.ತಪ್ಪೊಪ್ಪಿಗೆ: ಈ ಮಧ್ಯೆ ರಾಷ್ಟ್ರೀಯ ತನಿಖಾ ದಳ ಫೆ.21ರಂದು ನಡೆದ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಶಂಕಿತ ಉಗ್ರ, ಭಟ್ಕಳನ ಸಹಾ­ಯಕ ಅಸಾದುಲ್ಲಾ ಅಖ್ತರ್‌ನನ್ನ ‘ಸಂಚಾರಿ ವಾರಂಟ್‌’ ಮೇರೆಗೆ ಶನಿ­ವಾರ ಹೈದರಾಬಾದ್‌ಗೆ ಕರೆತಂ­ದಿತು.  ಕೆಲಕಾಲ ವಾಸವಿದ್ದು ಬಾಂಬ್‌ ತಯಾ­ರಿಸಿದ್ದ ಎನ್ನಲಾದ ಬಹಾದ್ದೂರ­ಪುರದ  ಅಖ್ತರ್‌ ಅಲಿಯಾಸ್‌ ಹದ್ದಿ­ಯನ್ನು ಕರೆದುಕೊಂಡು ಹೋಗಿತ್ತು ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry