ಬಿ.ಹೊಸಹಳ್ಳಿ ಸರ್ಕಾರಿ ಶಾಲೆ ಉದ್ಘಾಟನೆ
ಬೆಂಗಳೂರು: ಸೆಬಿಕ್ ಸಂಸ್ಥೆಯು ರೋಟರಿ ಕ್ಲಬ್ನ ಸಹಯೋಗದಲ್ಲಿ ಪುನರ್ ನಿರ್ಮಿಸಿರುವ ಬಿ.ಹೊಸಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ ಸೋಮವಾರ ಉದ್ಘಾಟನೆಗೊಂಡಿತು.ಬಿ.ಹೊಸಹಳ್ಳಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಸೋರುತ್ತಿದ್ದ ಮಾಳಿಗೆ, ಬಿರುಕು ಬಿಟ್ಟ ಗೋಡೆ, ಶೌಚಾಲಯಗಳ ದುರಸ್ತಿ ಸೇರಿದಂತೆ ಶಾಲೆಯನ್ನು ಸುಮಾರು 30 ಲಕ್ಷ ರೂಪಾಯಿ ವೆಚ್ಚದಲ್ಲಿ ಪುನರ್ ನಿರ್ಮಾಣ ಮಾಡಲಾಗಿದೆ.
ಸೆಬಿಕ್ ಸಂಸ್ಥೆ ದಕ್ಷಿಣ ಏಷ್ಯಾ ಮತ್ತು ಆಸ್ಟ್ರೇಲಿಯ ವಿಭಾಗದ ಉಪಾಧ್ಯಕ್ಷ ಜನಾರ್ದನ ರಾಮಾನುಜಲು ಮಾತನಾಡಿ, `ಸುಸಜ್ಜಿತ ಶಾಲೆ ನೀಡುವ ಸಲುವಾಗಿ ಸೆಬಿಕ್ ಸಂಸ್ಥೆಯು ರೋಟರಿ ಬೆಂಗಳೂರು ದಕ್ಷಿಣ ಘಟಕದ ಪಾಲುದಾರಿಕೆಯೊಂದಿಗೆ ಶಾಲೆಯ ಮರುನಿರ್ಮಾಣ ಕಾರ್ಯ ಪೂರ್ಣಗೊಳಿಸಿದೆ. ಮರು ನಿರ್ಮಾಣಕ್ಕೆ ಮೊದಲು ಶಾಲೆಯಲ್ಲಿ 45 ವಿದ್ಯಾರ್ಥಿಗಳಿದ್ದರು.
ಹೊಸ ಶಾಲೆಯ ನಿರ್ಮಾಣದೊಂದಿಗೆ ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಸುಧಾರಿಸಿ ಅವರ ಸಂಖ್ಯೆಯನ್ನು ಹೆಚ್ಚಿಸುವ ಗುರಿ ಹೊಂದಿದೆ~ ಎಂದು ತಿಳಿಸಿದರು.`ಮರುನಿರ್ಮಾಣಗೊಂಡ ಶಾಲೆಯಲ್ಲಿ ಎರಡು ತರಗತಿಗಳು, ಸಿಬ್ಬಂದಿ ಕೊಠಡಿ, ಸಭಾಭವನ, ಶೌಚಾಲಯ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ. ಮಕ್ಕಳಿಗಾಗಿ ಶಾಲಾ ಚೀಲಗಳು ಮತ್ತು ಕಂಪ್ಯೂಟರ್ ಒದಗಿಸಲಾಗಿದೆ~ ಎಂದು ಹೇಳಿದರು.
ರೋಟರಿ ಡಿಸ್ಟ್ರಿಕ್ಟ್ನ ಮಾಜಿ ಗವರ್ನರ್ ಮಾನಂದಿ ಎನ್. ಸುರೇಶ್, ಶಾಲೆಯ ಮುಖ್ಯೋಪಾಧ್ಯಾಯರಾದ ಟಿ. ನಾರಾಯಣಮ್ಮ, ಆನೇಕಲ್ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಚ್. ಶೇಖರಪ್ಪ ಸಮುದಾಯದ ಮುಖಂಡರು, ರೋಟರಿ ಸದಸ್ಯರು, ಸೆಬಿಕ್ ಉದ್ಯೋಗಿಗಳು ಉಪಸ್ಥಿತರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.