ಶುಕ್ರವಾರ, ನವೆಂಬರ್ 22, 2019
26 °C

`ಬಿ' ಫಾರಂ ಗೊಂದಲ

Published:
Updated:

ಯಲ್ಲಾಪುರ:  ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದಿಂದ ಇಬ್ಬರು ನಾಮಪತ್ರ ಸಲ್ಲಿಸಿದ್ದು ಗೊಂದಲಕ್ಕೆ ಕಾರಣವಾಯಿತು.ವೆಂಕಟ್ರಮಣ ಭಾಗ್ವತ್ ಹಾಗೂ ವಿಶ್ವನಾಥ ಭಾಗ್ವತ್ ಎರಡು ನಾಮಪತ್ರ ಸಲ್ಲಿಸಿ ಬಿ. ಫಾರಂ ನೀಡಿದ್ದರು. ಮೊದಲು ವೆಂಕಟ್ರಮಣ ಭಾಗ್ವತ್ ಅವರಿಗೆ ಬಿ ಫಾರಂ ನೀಡಿದ್ದು, ನಂತರ ವಿಶ್ವನಾಥ ಭಾಗ್ವತ್ ಅವರಿಗೆ ಪಕ್ಷ ಬಿ ಫಾರಂ ನೀಡಿತ್ತೆನ್ನಲಾಗಿದೆ.ಸಂಜೆ ಆರು ಗಂಟೆಯವರೆಗೂ ಚುನಾವಣಾಧಿಕಾರಿ ಹಾಗೂ ಚುನಾವಣಾ ವೀಕ್ಷಕ ಡಾ.ಸುಂದರಂ ಪರಿಶೀಲನೆ ನಡೆಸಿ ವಿಶ್ವನಾಥ ಭಾಗ್ವತ್ ಅವರನ್ನು ಬಿಎಸ್ಸಾರ್ ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಘೋಷಣೆ ಮಾಡಿದರು. ವೆಂಕಟ್ರಮಣ ಭಾಗ್ವತ್ ಅವರ ನಾಮಪತ್ರ ಪಕ್ಷೇತರರಾಗಿ ಸ್ವೀಕೃತವಾಯಿತು.

ಪ್ರತಿಕ್ರಿಯಿಸಿ (+)