ಸೋಮವಾರ, ಮೇ 10, 2021
21 °C

ಬಿ ವರದಿಗೆ ಆಕ್ಷೇಪಣೆ: ಮೇ 22ಕ್ಕೆ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗೃಹ ಸಚಿವ ಆರ್.ಅಶೋಕ ವಿರುದ್ಧದ ಖಾಸಗಿ ದೂರಿನ ತನಿಖೆಯ ಬಳಿಕ ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ `ಬಿ~ ವರದಿಯನ್ನು ಸ್ವೀಕರಿಸಬೇಕೆ, ಬೇಡವೇ ಎಂಬ ತೀರ್ಮಾನವನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯ ಮೇ 22ರಂದು ಪ್ರಕಟಿಸಲಿದೆ.ಗೃಹ ಸಚಿವರ ವಿರುದ್ಧದ ಆರೋಪದಲ್ಲಿ ಹುರುಳಿಲ್ಲ ಎಂದು ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ `ಬಿ~ ವರದಿಯನ್ನು ಪ್ರಶ್ನಿಸಿ ದೂರುದಾರ ಜಯಕುಮಾರ್ ಹಿರೇಮಠ ಸಲ್ಲಿಸಿದ್ದ ಆಕ್ಷೇಪಣೆ ಕುರಿತು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಗುರುವಾರ ವಿಚಾರಣೆ ನಡೆಸಿದರು. ದೂರುದಾರರ ಪರ ವಕೀಲರ ವಾದ ಪೂರ್ಣಗೊಂಡ ಬಳಿಕ, ಮೇ 22ಕ್ಕೆ ಆದೇಶ ಪ್ರಕಟಿಸುವುದಾಗಿ ತಿಳಿಸಿ ವಿಚಾರಣೆ ಮುಂದೂಡಿದರು.ಆಕ್ಷೇಪಣೆ ಸಲ್ಲಿಕೆ: ಭದ್ರಾ ಮೇಲ್ದಂಡೆ ಎರಡನೇ ಯೋಜನೆಯ ಗುತ್ತಿಗೆ ನೀಡುವಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವ್ಯವಹಾರ ನಡೆಸಿಲ್ಲ ಎಂದು ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ `ಬಿ~ ವರದಿಯನ್ನು ವಿರೋಧಿಸಿ ದೂರುದಾರರೂ ಆಗಿರುವ ವಿಧಾನ ಪರಿಷತ್ ಸದಸ್ಯ ವೈ.ಎಸ್.ವಿ.ದತ್ತ ಗುರುವಾರ ಆಕ್ಷೇಪಣೆ ಸಲ್ಲಿಸಿದ್ದಾರೆ.ಯಡಿಯೂರಪ್ಪ ಅವರು ಅವ್ಯವಹಾರ ನಡೆಸಿದ್ದಾರೆ ಎಂಬುದಕ್ಕೆ ತಾವು ಸಲ್ಲಿಸಿರುವ ದೂರಿನಲ್ಲೇ ದಾಖಲೆಗಳನ್ನು ಒದಗಿಸಲಾಗಿತ್ತು. ಆದರೆ, ಲೋಕಾಯುಕ್ತ ಪೊಲೀಸರು ಅದನ್ನು ಗಣನೆಗೆ ತೆಗೆದುಕೊಂಡಿಲ್ಲ. ತನಿಖೆ ಸಂದರ್ಭದಲ್ಲೂ ತಮ್ಮಿಂದ ಯಾವುದೇ ಪ್ರತಿಕ್ರಿಯೆ ಪಡೆದಿಲ್ಲ. ಆದ್ದರಿಂದ `ಬಿ~ ವರದಿಯನ್ನು ಅಂಗೀಕರಿಸಬಾರದು ಎಂದು ದತ್ತ ಮನವಿ ಮಾಡಿದ್ದಾರೆ.ಆಕ್ಷೇಪಣೆಯಲ್ಲಿ ಉಲ್ಲೇಖಿಸಿರುವ ಅಂಶಗಳ ಕುರಿತು ದತ್ತ ಪರ ವಕೀಲರು ಕೆಲಕಾಲ ವಾದ ಮಂಡಿಸಿದರು. ಬಳಿಕ ಮೇ 2ಕ್ಕೆ ವಿಚಾರಣೆ ಮುಂದೂಡಿ ನ್ಯಾಯಾಧೀಶರು ಆದೇಶ ಹೊರಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.