ಮಂಗಳವಾರ, ನವೆಂಬರ್ 19, 2019
22 °C
ರಾಜ್ಯ ಯೂತ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್

ಬೀಗಲ್ಸ್, ಮಂಡ್ಯದ ಡಿವೈಎಸ್‌ಎಸ್‌ಗೆ ಪ್ರಶಸ್ತಿ

Published:
Updated:

ಬೆಂಗಳೂರು: ಬೀಗಲ್ಸ್ ಕ್ಲಬ್ ಮತ್ತು ಮಂಡ್ಯದ ಡಿವೈಎಸ್‌ಎಸ್ ತಂಡಗಳು ರಾಜ್ಯ ಬ್ಯಾಸ್ಕೆಟ್‌ಬಾಲ್ ಸಂಸ್ಥೆ ಆಶ್ರಯದ ಯೂತ್ (16 ವರ್ಷ ವಯಸ್ಸಿನೊಳಗಿನವರು) ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡವು.ಕಂಠೀರವ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಬಾಲಕರ ವಿಭಾಗದ ಸೆಮಿಫೈನಲ್ ಲೀಗ್‌ನ ಕೊನೆಯ ಪಂದ್ಯದಲ್ಲಿ ಬೀಗಲ್ಸ್ 42-32 ರಲ್ಲಿ ಧಾರವಾಡದ ಎಸ್‌ಎಐ ತಂಡವನ್ನು ಮಣಿಸಿತು. ಈರೇಶ್ (18 ಪಾಯಿಂಟ್) ಮತ್ತು ಚೇತನ್ (10) ವಿಜಯಿ ತಂಡದ ಪರ ಉತ್ತಮ ಪ್ರದರ್ಶನ ನೀಡಿದರು.ದಿನದ ಮತ್ತೊಂದು ಪಂದ್ಯದಲ್ಲಿ ಯಂಗ್ ಓರಿಯನ್ಸ್ 43- 40 ರಲ್ಲಿ ಅಪ್ಪಯ್ಯ ಬ್ಯಾಸ್ಕೆಟ್‌ಬಾಲ್ ಕ್ಲಬ್ ತಂಡವನ್ನು ಮಣಿಸಿತು. ವಿರಾಮದ ವೇಳೆಗೆ ವಿಜಯಿ ತಂಡ 23-21 ರಲ್ಲಿ ಮುನ್ನಡೆ ಪಡೆದಿತ್ತು. ಎಸ್‌ಎಐ ಧಾರವಾಡ `ರನ್ನರ್ ಅಪ್' ಎನಿಸಿಕೊಂಡರೆ, ಯಂಗ್ ಓರಿಯನ್ಸ್ ಮೂರನೇ ಸ್ಥಾನ ಪಡೆಯಿತು.ಡಿವೈಎಸ್‌ಎಸ್ ಚಾಂಪಿಯನ್: ಮಂಡ್ಯದ ಡಿವೈಎಸ್‌ಎಸ್ ತಂಡ ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ ಆಯಿತು. ಕೊನೆಯ ಸೆಮಿಫೈನಲ್ ಲೀಗ್ ಪಂದ್ಯದಲ್ಲಿ ಮಂಡ್ಯದ ತಂಡ 50-48 ರಲ್ಲಿ ವಿದ್ಯಾನಗರ ಕ್ರೀಡಾಶಾಲೆ ವಿರುದ್ಧ ಜಯ ಸಾಧಿಸಿತು.ಪ್ರಬಲ ಹೋರಾಟ ಕಂಡುಬಂದ ಪಂದ್ಯದ ವಿರಾಮದ ವೇಳೆಗೆ ಡಿವೈಎಸ್‌ಎಸ್ 30-20ರಲ್ಲಿ ಮುನ್ನಡೆ ಪಡೆದಿತ್ತು. ಬಾಂಧವ್ಯ (20) ಮತ್ತು ಸುಪ್ರೀತಾ (11) ಗಮನಾರ್ಹ ಪ್ರದರ್ಶನ ತೋರಿದರು.ದಿನದ ಮತ್ತೊಂದು ಪಂದ್ಯದಲ್ಲಿ ಲೋಪಮುದ್ರ ಗಳಿಸಿದ 19 ಪಾಯಿಂಟ್‌ಗಳ ನೆರವಿನಿಂದ ಮೌಂಟ್ಸ್ ಕ್ಲಬ್ 33-24 ರಲ್ಲಿ ವಿಮಾನಪುರ ತಂಡವನ್ನು ಮಣಿಸಿತು. ಮೌಂಟ್ಸ್ ಕ್ಲಬ್ ಮತ್ತು ವಿದ್ಯಾನಗರ ಕ್ರೀಡಾ ಶಾಲೆ ತಂಡಗಳು ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಪಡೆದುಕೊಂಡವು.

ಪ್ರತಿಕ್ರಿಯಿಸಿ (+)