ಸೋಮವಾರ, ಮಾರ್ಚ್ 1, 2021
25 °C

ಬೀಚಿ ಸಮಾಜದ ಚಿಂತಕ: ಸಿದ್ದಲಿಂಗಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀಚಿ ಸಮಾಜದ ಚಿಂತಕ: ಸಿದ್ದಲಿಂಗಯ್ಯ

ಬೆಂಗಳೂರು: ‘ಬೀಚಿ ಸಮಾಜದ ಚಿಂತ­ಕರು. ಡಿವಿಜಿ ಅವರು ಸಂಸ್ಕೃತಿ ಚಿಂತಕರು. ಇವರಿಬ್ಬರು ಕನ್ನಡದ ವಿಶಿಷ್ಟ ಪ್ರತಿಭೆ­ಗಳು’ ಎಂದು ಕವಿ ಸಿದ್ದಲಿಂಗಯ್ಯ ಬಣ್ಣಿಸಿದರು.ಸೃಷ್ಟಿ ವೆಂಚರ್‍ಸ್‌ ಹಾಗೂ ಸ್ನೇಹ ಬುಕ್‌ ಹೌಸ್‌ ಆಶ್ರಯದಲ್ಲಿ ನಗರದಲ್ಲಿ ಗುರುವಾರ ನಡೆದ ‘ಬೀಚಿ... ತೋಚಿದ್ದು ಗೀಚಿದ್ದು’ (ಸಂಪಾದಕರು–ಡಾ.­ಸ್ವಾಮಿ-­ರಾವ್‌ ಕುಲಕರ್ಣಿ) ಹಾಗೂ ‘ಕಗ್ಗ ಬಾಳ್ವೆ ಸಲುವ ತತ್ವ ಮಥಿತ’ (ಸಂಪಾದಕರು–ಅಂಜನಾದ್ರಿ) ಕೃತಿಗಳ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.‘ಮಂಕುತಿಮ್ಮನ ಕಗ್ಗ ಓದುಗರನ್ನು ಆವರಿಸಿಕೊಳ್ಳುತ್ತದೆ. ಶಾಸನಸಭೆಯಲ್ಲಿ ಸಹ ಆಡಳಿತ ಹಾಗೂ ವಿರೋಧ ಪಕ್ಷದ  ಸದಸ್ಯರು ಕಗ್ಗವನ್ನು ಉಲ್ಲೇಖಿಸಿ ಮಾತ­ನಾಡಿದ್ದು ಅಚ್ಚರಿ ಮೂಡಿಸಿದೆ’ ಎಂದರು.ಲೇಖಕ ಡಾ.ಅರಳುಮಲ್ಲಿಗೆ ಪಾರ್ಥ­ಸಾರಥಿ ಕೃತಿ ಬಿಡುಗಡೆ ಮಾಡಿ, ‘ಬೀಚಿ ಅವರು  ಹುಟ್ಟುತ್ತಲೇ ತಾಯಿಯನ್ನು ಕಳೆದುಕೊಂಡರು. ಪುಟ್ಟ ಮಗುವನ್ನು ಮನೆಯ ಹೊರಗೆ ಇಡಲಾಯಿತು. ಕೆಲವರು ಈ ಮಗು ಒಂದೆರಡು ದಿನಗಳಲ್ಲಿ ಸಾಯಲಿದೆ ಎಂದರು. ಬೀಚಿ ಅವರು ನೋವು ಉಣ್ಣುತ್ತಲೇ ಬೆಳೆ­ದರು. ಅವರ ಬರಹಗಳಲ್ಲಿ ಅನು­ಭವಿಸಿದ ನೋವಿನ ಚಿತ್ರಣ ಕಾಣುತ್ತೇವೆ’ ಎಂದು ಅವರು ಹೇಳಿದರು.ಲೇಖಕ ಎಚ್‌.ಎಸ್‌. ಲಕ್ಷ್ಮಿ­ನಾರಾ­ಯಣ ಭಟ್ಟ, ‘ಮಂಕುತಿಮ್ಮನ ಕಗ್ಗದ ಆಲೋಚನಾ ಕ್ರಮ ಒಂದೇ ಬಗೆಯದು. ಅದನ್ನು ಹೆಚ್ಚು ಸಲ ಓದಿದಾಗ  ಅದರ ಆಳ, ವಿಸ್ತಾರ ಗೊತ್ತಾಗುತ್ತದೆ’ ಎಂದು ಅವರು ತಿಳಿಸಿದರು. ಲೇಖಕ ಡಾ.ಸ್ವಾಮಿರಾವ್‌ ಕುಲ­ಕರ್ಣಿ, ‘ಬೀಚಿ ಅವರಿಗೆ ಅಧಿಕಾರ, ಹಣ ಹಾಗೂ ಕೀರ್ತಿಯ ಆಸೆ ಇರಲಿಲ್ಲ. ಹೀಗಾಗಿ ಅವರು ರಾಜಕಾರಣಿಗಳನ್ನು ಟೀಕಿಸಿದರು. ರಾಜಕೀಯ ಶುದ್ಧೀಕರಣ­ಕ್ಕಾಗಿ ಅವರು ಟೀಕೆ ಮಾಡಿದರು’ ಎಂದು ಹೇಳಿದರು.ಸ್ನೇಹ ಬುಕ್‌ ಹೌಸ್‌ ಮಾಲೀಕ ಪರಶಿವಪ್ಪ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.