ಶುಕ್ರವಾರ, ಏಪ್ರಿಲ್ 23, 2021
22 °C

ಬೀಚ್ ವಾಲಿಬಾಲ್: ಜರ್ಮನಿಗೆ ಬಂಗಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಐಎಎನ್‌ಎಸ್): ಜರ್ಮನಿ ತಂಡದವರು ಒಲಿಂಪಿಕ್ಸ್ ಬೀಚ್ ವಾಲಿಬಾಲ್ ಟೂರ್ನಿಯಲ್ಲಿ ಬಂಗಾರದ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಾದಿಯಲ್ಲಿ ಈ ತಂಡದವರು ಬಲಿಷ್ಠ ಬ್ರೆಜಿಲ್ ತಂಡಕ್ಕೆ ಆಘಾತ ನೀಡಿದರು.ಫೈನಲ್ ಪಂದ್ಯದಲ್ಲಿ ಜರ್ಮನಿ 23-21, 21-16 ಹಾಗೂ 16-14ರಲ್ಲಿ ಬ್ರೆಜಿಲ್ ತಂಡವನ್ನು ಸೋಲಿಸಿತು. ಜರ್ಮನಿಯ ಜೊನಾಸ್ ರೆಕರ್‌ಮನ್ ಹಾಗೂ ಜೂಲಿಯಸ್ ಬ್ರಿಂಕ್ ಉತ್ತಮ ಪ್ರದರ್ಶನ ತೋರಿದರು. ಆದರೆ ವಿಶ್ವ ಅಗ್ರ ರ‌್ಯಾಂಕ್‌ನ ಜೋಡಿಯಾದ ಅಲಿಸಾನ್ ಸೆರುಟಿ ಹಾಗೂ ಎಮಾನುಯೆಲ್ ರೆಗೊ ಅವರ ಪ್ರಯತ್ನ ಸಾಕಾಗಲಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.