ಶುಕ್ರವಾರ, ಏಪ್ರಿಲ್ 16, 2021
20 °C

ಬೀಜದ ಕಂಪೆನಿಗಳಿಂದ ಮೋಸಹೋಗದಿರಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾನಗಲ್: ತಾಲ್ಲೂಕಿನ ಬೆಳಗಾಲಪೇಟೆ ಗ್ರಾಮದ ಪ್ರಗತಿಪರ ಕೃಷಿಕ ನಾಗಪ್ಪ ಜಾವಣ್ಣನವರ ಅವರ ಹೊಲದಲ್ಲಿ ಪಯೋನಿಯರ್ ಹೈಬ್ರೀಡ್ ಮೆಕ್ಕೆ ಜೋಳ ಪಿ 3501 ಕ್ಷೇತ್ರೋತ್ಸವವನ್ನು ಇತ್ತೀಚಿಗೆ ಆಯೋಜಿಸಲಾಗಿತ್ತು.



ಅತಿಥಿಯಾಗಿ ಪಾಲ್ಗೊಂಡಿದ್ದ ಪ್ರಗತಿ ಪರ ರೈತ ಚನ್ನಪ್ಪ ಕೋರಿಶೆಟ್ಟರ ಮಾತ ನಾಡಿ, ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ದೊರೆಯುವ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಬಳಕೆಯಿಂದ ರೈತರು ಮೋಸ ಹೋಗುತ್ತಿದ್ದು, ರಸಗೊಬ್ಬರದ ಆಯ್ಕೆಯಲ್ಲಿ ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ.

 

ಪಯೋನಿಯರ್ ಕಂಪೆನಿ ಮಾರುಕಟ್ಟೆಗೆ ಉತ್ತಮ ತಳಿಯ ಬಿತ್ತನೆ ಬೀಜಗಳನ್ನು ಬಿಡುಗಡೆಗೊಳಿಸಿದೆ. ಈ ಕಂಪೆನಿಯ ಬೀಜಗಳನ್ನು ಉಪಯೋಗಿಸಿ ಕೊಂಡು ರೈತರು ಹೆಚ್ಚು ಇಳುವರಿ ಪಡೆದು ಆರ್ಥಿಕ ಸ್ವಾವಲಂಬನೆ ಸಾಧಿಸು ವಂತೆ ಕರೆ ನೀಡಿದರು.



ಪಯೋನಿಯರ್ ಕಂಪೆನಿಯ ಮಾರುಕಟ್ಟೆ ವಿಭಾಗದ ಅಧಿಕಾರಿಗಳಾದ ಪ್ರವೀಣ ರೆಡ್ಡಿ, ಅಶ್ವಿನಕುಮಾರ, ಜಗ ದೀಶ, ಜಿ.ಆರ್.ದಿನೇಶ ಮತ್ತು ನಾಗ ರಾಜ್ ಬೀಜದ ಬಳಕೆ, ತಳಿಯ ಪ್ರಯೋಜನದ ಕುರಿತು ವಿವರಣೆ ನೀಡಿದರು.



ಇದೇ ಸಂದರ್ಭದಲ್ಲಿ ರೈತರೊಂದಿಗೆ ಸಂವಾದ ನಡೆಸಿ ಕೃಷಿ ವ್ಯವಸ್ಥೆಯ ಹಲವಾರು ಸಂದೇಹಗಳಿಗೆ ಉತ್ತರ ನೀಡಲಾಯಿತು.



ರೈತರಾದ ಶಿವರಾಜ್ ಬಿದಕಣ್ಣನ ವರ, ಮಕ್ಬೂಲ ಮಿಠಾಯಿಗಾರ, ಬಸಣ್ಣ ಭಜಂತ್ರಿ, ಈರಪ್ಪ ಜವದಿ, ಶಂಭು ಹಿರೇಮಠ, ರಮೇಶ ಕೊಟಗೇರಿ, ಮದರಸಾಬ ಕಲಾಪ್ಲೂರ, ಎನ್.ಎಂ.ಸಂಕಣ್ಣನವರ, ಚನ್ನಬಸಪ್ಪ ಕೊಟಗೇರಿ, ವಡಕಪ್ಪ ದೊಡ್ಡಮನಿ ಸೇರಿದಂತೆ ನೂರಾರು ರೈತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.