ಗುರುವಾರ , ಮೇ 13, 2021
38 °C

`ಬೀಜೋದ್ಯಮ ಅಭಿವೃದ್ಧಿಗೆ ಆದ್ಯತೆ ನೀಡಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಲಹಂಕ: `ತಳಿ ಮತ್ತು ಬೀಜ ವಿಜ್ಞಾನಿಗಳು ಹಾಗೂ ಜೈವಿಕ ವಿಜ್ಞಾನಿಗಳು ಜತೆಗೂಡಿ ಸಂಶೋಧನೆಗಳನ್ನು ಕೈಗೊಂಡಾಗ ಉತ್ತಮ ಗುಣಮಟ್ಟದ ಬೀಜಗಳನ್ನು ಉತ್ಪಾದನೆ ಮಾಡಲು ಸಾಧ್ಯ' ಎಂದು ಭಾರತೀಯ ಕೃಷಿ ಅನುಸಂಧಾನ ಪರಿಷತ್‌ಮಹಾನಿರ್ದೇಶಕ ಡಾ.ಎಸ್. ಅಯ್ಯಪ್ಪನ್ ಅಭಿಪ್ರಾಯಪಟ್ಟರು.ಕೃಷಿ ವಿಶ್ವವಿದ್ಯಾಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶನಿವಾರ ನಡೆದ `ಬೀಜ ಸಂಶೋಧನೆಯಲ್ಲಿ ಆವಿಷ್ಕಾರಗಳು ಹಾಗೂ ಅಭಿವೃದ್ಧಿ' ಕುರಿತ 13ನೇ ರಾಷ್ಟ್ರೀಯ ಬೀಜಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.`ಬೀಜೋದ್ಯಮದ ಅಭಿವೃದ್ಧಿಗೆ ಪೂರಕವಾದ ವಿಜ್ಞಾನ ಮತ್ತು ತಂತ್ರಜ್ಞಾನದ ಕಡೆಗೆ ಹೆಚ್ಚಿನ ಆದ್ಯತೆ ನೀಡಬೇಕು' ಎಂದು ಸಲಹೆ ನೀಡಿದರು.`ಕೆಲವು ರಾಜ್ಯಗಳು ಹಳೆಯ ಬಿತ್ತನೆ ಬೀಜಗಳನ್ನೆ ಉಪಯೋಗಿಸುತ್ತಿರುವುದರಿಂದ ಉತ್ಪಾದನೆ ಕಡಿಮೆ ಆಗುತ್ತಿದೆ. ಅದರ ಬದಲು ಗುಣಮಟ್ಟದ ಹೊಸ ಬೀಜಗಳನ್ನು ಉಪಯೋಗಿಸುವುದರಿಂದ ಉತ್ಪಾದನೆ ಹೆಚ್ಚಾಗುತ್ತದೆ. ರೈತರು ಬಿತ್ತನೆ ಬೀಜಗಳನ್ನು ವಿನಿಮಯ ಮಾಡಿಕೊಳ್ಳಬೇಕು' ಎಂದು ಕಿವಿಮಾತು ಹೇಳಿದರು.ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ನಾರಾಯಣಗೌಡ ಮಾತನಾಡಿ, `ಬೀಜ ಸಂಶೋಧನೆ ಚಟುವಟಿಕೆಗಾಗಿ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ಗೆ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ 25 ಎಕರೆ ಜಾಗವನ್ನು ನೀಡಲಾಗಿದೆ. ಇದರಿಂದ ಗುಣಮಟ್ಟದ ಬೀಜಗಳನ್ನು ಉತ್ಪಾದನೆ ಮಾಡಲು ಸಾಧ್ಯವಾಗುತ್ತದೆ' ಎಂದರು.`ಗುಣಮಟ್ಟದ ಬೀಜಗಳನ್ನು ರೈತರಿಗೆ ಸಮಯಕ್ಕೆ ಸರಿಯಾಗಿ ಕಡಿಮೆ ಖರ್ಚಿನಲ್ಲಿ ಸರಬರಾಜು ಮಾಡಬೇಕು. ಇದರಿಂದ ಪ್ರಸ್ತುತ 257 ದಶಲಕ್ಷ ಟನ್ ಆಹಾರ ಉತ್ಪಾದನೆಯನ್ನು 300 ದಶಲಕ್ಷ ಟನ್‌ಗೆ ಹೆಚ್ಚಿಸಬಹುದು' ಎಂದು ತಿಳಿಸಿದರು.ಕೃಷಿ ವಿ.ವಿ ವಿಶ್ರಾಂತ ಕುಲಪತಿ ಡಾ.ಎಂ.ಮಹದೇವಪ್ಪ, ಕೃಷಿಮಿಷನ್‌ನ ಅಧ್ಯಕ್ಷ ಡಾ.ಎಸ್. ಎ.ಪಾಟೀಲ್, ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಎಚ್.ಎಸ್.ಗುಪ್ತ, ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ ಸಹಾಯಕ ಮಹಾನಿರ್ದೇಶಕ (ಶಿಕ್ಷಣ) ಡಾ.ಕೆ.ಆನಂದಕೃಷ್ಣ, ಕರ್ನಾಟಕ ರಾಜ್ಯಬೀಜ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಕೆ.ಆನಂದಕೃಷ್ಣ, ಕೃಷಿ ವಿ.ವಿ ಸಂಶೋಧನಾ ನಿರ್ದೇಶಕ ಎಂ.ಎ.ಶಂಕರ್ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.