ಶುಕ್ರವಾರ, ನವೆಂಬರ್ 15, 2019
20 °C

ಬೀಜ, ಗೊಬ್ಬರದ ಮಾಹಿತಿ ನೀಡಲು ಸೂಚನೆ

Published:
Updated:

ಸಿದ್ದಾಪುರ: ಬೀಜ, ಗೊಬ್ಬರದ ದಾಸ್ತಾನು ಮತ್ತು ವಿತರಣೆ ಕುರಿತ ಮಾಹಿತಿಯ ವರದಿಯನ್ನು ವಾರಕ್ಕೊಮ್ಮೆ ಸಲ್ಲಿಸಬೇಕು ಎಂದು ತಹಸೀಲ್ದಾರ ಗಣಪತಿ ಕಟ್ಟಿನಕೆರೆ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.ಮಳೆಗಾಲದ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ತಮ್ಮ ಕಚೇರಿಯಲ್ಲಿ ಶುಕ್ರವಾರ ಕರೆದ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಗೊಬ್ಬರ ಮತ್ತು ಬೀಜದ ವಿತರಣೆಯಲ್ಲಿ ತಾಲ್ಲೂಕಿನ ರೈತರಿಗೆ ಆದ್ಯತೆ ನೀಡಬೇಕು. ಸ್ಥಳೀಯ ರೈತರಿಗೆ ಅಗತ್ಯ ವಿದ್ದಾಗ ಹೊರಗಿನವರಿಗೆ ಬೀಜ ವಿತರಣೆ ಮಾಡಿದರೆ ಆ ಬೀಜ ಮತ್ತು ಗೊಬ್ಬರವನ್ನು ವಶಕ್ಕೆ ತೆಗೆದುಕೊಳ್ಳಲಾಗುವುದು ಎಂದು ಅವರ ಎಚ್ಚರಿಕೆ ನೀಡಿದರು.ಭಾರಿ ಮಳೆಯ  ಸಂದರ್ಭದಲ್ಲಿ ಅಗತ್ಯ ವಿರುವ ತಾಲ್ಲೂಕಿನ ಎಲ್ಲ ಅಧಿಕಾರಿ ಗಳ ವಿವರ ಸೇರಿ ದಂತೆ, ನೆರೆ ಪ್ರಕೋಪದ ಸಂದರ್ಭಕ್ಕೆ ಅವಶ್ಯಕ ವಾಗಿರುವ ಮಾಹಿತಿ ಯನ್ನೊಳಗೊಂಡ ಕೈಪಿಡಿ ಯನ್ನು ಈಗಾಗಲೇ ತಯಾರಿಸ ಲಾಗಿದೆ. ಪ್ರಕೃತಿ ವಿಕೋಪ ಉಂಟಾದ ಸಂದರ್ಭದಲ್ಲಿ ಸಾರ್ವ ಜನಿಕರು ತಹಸೀಲ್ದಾರ ಕಚೇರಿಯ ಸಹಾಯ ವಾಣಿ (08389- 230127)ಯನ್ನು ದಿನದ 24 ಗಂಟೆಯೂ ಸಂಪರ್ಕಿಸಬಹುದು ಎಂದರು.ತಾಲ್ಲೂಕಿನ ನೆಜ್ಜೂರು, ಶಿರಳಗಿ, ಅರೆಂದೂರು, ಕಾನಸೂರು ಮತ್ತು ಕಾಂವ ಚೂರಿನ ಕೆಲವು ಭಾಗಗಳನ್ನು ನೆರೆ ಸಂಭವಿಸುವ ಪ್ರದೇಶಗಳು ಎಂದು ಗುರುತಿಸಲಾಗಿದೆ ಎಂದರು.ಆರೋಗ್ಯ-ಮುಂಜಾಗ್ರತೆ

ಮಳೆಗಾಲದಲ್ಲಿ ತರಕಾರಿ, ಆಹಾರ ಪದಾರ್ಥ ಗಳು, ಮಲಮೂತ್ರ ಅಥವಾ ಸತ್ತ ಪ್ರಾಣಿಗಳು ನೀರಿನಲ್ಲಿ ಸೇರಿ ದಾಗ ನೀರು ಕಲುಷಿತ ಗೊಳ್ಳುತ್ತದೆ. ಇಂತಹ ಸಂದರ್ಭದಲ್ಲಿ ಕೆಲವೊಂದು ಕಾಯಿಲೆಗಳು ಉಂಟಾಗ ಬಹುದು.ಡೆಂಗೆ, ಚಿಕೂನ್ ಗುನ್ಯ, ಇಲಿ ಜ್ವರದಂತಹ ಕಾಯಿಲೆಗಳು ಕೂಡ ಕಾಣಿಸಿಕೊಳ್ಳಬಹುದು. ಮಕ್ಕಳನ್ನು ಕಲುಷಿತ ನೀರಿನಲ್ಲಿ ಆಡಲು ಬಿಡಬಾರದು.ಮನೆಯಲ್ಲಿ ಮತ್ತು ಮನೆಯ ಸುತ್ತ ಮುತ್ತಲೂ ನೀರು ನಿಲ್ಲದಂತೆ ನೋಡಿ ಕೊಳ್ಳ ಬೇಕು ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ನಂಜುಂಡಯ್ಯ ಸಲಹೆ ನೀಡಿದರು.ಆರೋಗ್ಯ ಇಲಾಖೆ ಲಾರ್ವಾ (ಸೊಳ್ಳೆ) ಸಮೀಕ್ಷೆ ನಡೆಸಿ ಸೊಳ್ಳೆ ನಾಶಕ್ಕೆ ಕ್ರಮ ಕೈಗೊಂಡಿದೆ ಎಂದರು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ವಿ.ಎಸ್.ಹೆಗಡೆ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)