ಶುಕ್ರವಾರ, ಮೇ 7, 2021
26 °C

ಬೀಜ ಪಡೆಯಲು ರೈತರ ಹರಸಾಹಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾದಾಮಿ: ನಗರದ ರೈತ ಸಂಪರ್ಕ ಕೇಂದ್ರದಲ್ಲಿ ಬೀಜ ಪಡೆಯಲು ಬೆಳಗಿನಿಂದ ಸಂಜೆಯವರೆಗೂ ರೈತರು ಸರದಿಯಲ್ಲಿ ನಿಂತು ಹರಸಾಹಸ ಮಾಡಿ ಬೀಜವನ್ನು ಪಡೆಯುವ ದೃಶ್ಯ ಸಾಮಾನ್ಯವಾಗಿ ಕಂಡು ಬರುತ್ತದೆ.ತಾಲ್ಲೂಕಿನಲ್ಲಿ ಈ ಬಾರಿ ಮುಂಗಾರು ರೋಹಿಣಿ ಮಳೆಯು ವ್ಯಾಪಕವಾಗಿ ಸುರಿದ ಕಾರಣ ಎಲ್ಲ ರೈತರು ಒಮ್ಮೆಲೇ ಬೀಜವನ್ನು ಪಡೆಯಲು ಬಂದದ್ದರಿಂದ ನೂಕು ನುಗ್ಗಲು ಉಂಟಾಗಲು ಕಾರಣವಾಗಿದೆ.ರೈತರಿಗೆ ಪೂರೈಸಲು ಅಗತ್ಯ ಬೀಜ ಮತ್ತು ಗೊಬ್ಬರದ ಸಂಗ್ರಹವಿದೆ. ಕೃಷಿ ಇಲಾಖೆಯಿಂದ ಬೀಜ ಗೊಬ್ಬರ ವಿತರಣೆ ಕಾರ್ಯ ಭರದಿಂದ ನಡೆದಿದೆ ಎಂದು ಕೃಷಿ ಇಲಾಖೆಯ ಮೂಲದಿಂದ ತಿಳಿದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.