ಶುಕ್ರವಾರ, ಏಪ್ರಿಲ್ 16, 2021
22 °C

ಬೀಡಿ ಕಾರ್ಮಿಕರಿಗೆ ಶೀಘ್ರ ಮನೆ ಸಿಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ‘ಬಿಡನಾಳದಲ್ಲಿ 200 ಮನೆಗಳು ಬೀಡಿ ಕಾರ್ಮಿಕರಿಗೆ ಶೀಘ್ರದಲ್ಲೇ ಸಿದ್ಧವಾಗಲಿವೆ. ಆದರೆ ಕೆಲವರು ರಾಜಕೀಯ ದುರುದ್ದೇಶದಿಂದ ಇಲ್ಲಸಲ್ಲದ ಪತ್ರಿಕಾ ಹೇಳಿಕೆ ನೀಡುತ್ತಿದ್ದಾರೆ. ಹೀಗೆ ಹೇಳಿಕೆ ನೀಡುವುದನ್ನು ನಿಲ್ಲಿಸಿ ಆಗುವ ಒಳ್ಳೆಯ ಕಾರ್ಯದಲ್ಲಿ ಸಹಕರಿಸಬೇಕು’ ಎಂದು ಹುಬ್ಬಳ್ಳಿ ತಾಲ್ಲೂಕಿನ ಬೀಡಿ ಕಾರ್ಮಿಕರ ವಿವಿಧೋದ್ದೇಶಗಳ ಸಂಘದ ಕಾರ್ಯದರ್ಶಿ ಶಿರಾಜ್ ಅಹ್ಮದ್ ಕುಡಚಿವಾಲೆ ಪ್ರಕಟಣೆಯಲ್ಲಿ ಕೋರಿದ್ದಾರೆ.‘2006ರಲ್ಲಿ ಕರ್ನಾಟಕ ಸಹಕಾರಿ ಸಂಘಗಳ ಕಾಯ್ದೆಯಡಿ ಹುಬ್ಬಳ್ಳಿ ತಾಲ್ಲೂಕು ಬೀಡಿ ಕಾರ್ಮಿಕರ ವಿವಿಧೋದ್ದೇಶಗಳ ಸಹಕಾರ ಸಂಘ ಅಸ್ತಿತ್ವಕ್ಕೆ ಬಂತು. ಹುಬ್ಬಳ್ಳಿ ತಾಲ್ಲೂಕಿನಲ್ಲಿರುವ ಬೀಡಿ ಕಾರ್ಮಿಕರ ಸಹಕಾರಕ್ಕೆ ಆರಂಭಗೊಂಡ ಸಂಘವಿದು. 2004-05ರಲ್ಲಿ ಜಬ್ಬಾರ್‌ಖಾನ್ ಹೊನ್ನಳ್ಳಿಯವರು ಸಚಿವರಾಗಿದ್ದಾಗ ಬಿಡನಾಳ ಗ್ರಾಮದಲ್ಲಿ 18 ಎಕರೆ ಭೂಮಿಯನ್ನು ಆಶ್ರಯ ಯೋಜನೆಗೆಂದು ಖರೀದಿಸಿದರು.ಆ ಸಮಯದಲ್ಲಿ ಅವರು ಹುಬ್ಬಳ್ಳಿ ಶಹರ ಆಶ್ರಯ ಸಮಿತಿ ಅಧ್ಯಕ್ಷರಾಗಿದ್ದರು. ಜೊತೆಗೆ ಬೀಡಿ ಕಾರ್ಮಿಕರ ಬಗ್ಗೆ ಮುತುವರ್ಜಿ ವಹಿಸಿ ಅವರ ಸಲುವಾಗಿ ನಿವೇಶನಕ್ಕಾಗಿ ಜಾಗೆ ಕಾಯ್ದಿರಿಸಿದರು. ನಂತರ ಬೀಡಿ ಕಾರ್ಮಿಕರ ವಿವಿಧೋದ್ದೇಶಗಳ ಸಂಘಕ್ಕೆ 200 ಬೀಡಿ ಕಾರ್ಮಿಕರು ಸದಸ್ಯರಾದರು. ಆಗಿನ ಪಾಲಿಕೆ ಆಯುಕ್ತರಾಗಿದ್ದ ಮಣಿವಣ್ಣನ್ ಅವರಿಗೆ ಜಬ್ಬಾರಖಾನ್ ಹೊನ್ನಳ್ಳಿ ವಿವರಿಸಿ, ಯೋಜನೆಯನ್ನು ರೂಪಿಸಲಾಯಿತು’ ಎಂದು ಅವರು ಹೇಳಿದ್ದಾರೆ.ಸಂಘದ ಸದಸ್ಯತ್ವ ಪಡೆದ ಬೀಡಿ ಕಾರ್ಮಿಕರ ಭವಿಷ್ಯನಿಧಿ ಹಾಗೂ ಇತರ ದಾಖಲೆಗಳನ್ನು ಪರಿಶೀಲಿಸಿದ ನಂತರ ಕೇಂದ್ರ ಸರ್ಕಾರಕ್ಕೆ ಪಟ್ಟಿ ಕಳಿಸಲಾಯಿತು. ಸಂಬಂಧಪಟ್ಟ ಅಧಿಕಾರಿಗಳು ಕೇಂದ್ರ ಸರ್ಕಾರದ ಸಬ್ಸಿಡಿ ಮೊತ್ತ ರೂ. 40 ಸಾವಿರ ಪಡೆಯಲು ಯತ್ನಿಸಲಾಯಿತು. ರಾಜೀವ ಗಾಂಧಿ ಗೃಹ ನಿರ್ಮಾಣದ ಅನುದಾನಕ್ಕಾಗಿ ಕೋರಲಾಯಿತು. ಈಗ ಎಲ್ಲದರಿಂದ ಸಾಲದ ಸೌಲಭ್ಯ ಸಿಗುವಂತಾಗಿದೆ ಎಂದು ತಿಳಿಸಿದ್ದಾರೆ.‘ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಮಾರ್ಗದರ್ಶನದಲ್ಲಿ ಜಿಲ್ಲಾಧಿಕಾರಿ ದರ್ಪಣ್ ಜೈನ್ ಅವರು ಬೀಡಿ ಕಾರ್ಮಿಕರ ಬಗ್ಗೆ ಕಾಳಜಿ ವಹಿಸಿದ್ದಾರೆ. ಆದಷ್ಟು ಬೇಗ ಬೀಡಿ ಕಾರ್ಮಿಕರಿಗೆ ಮನೆಗಳು ಸಿಗುವಂತಾಗಲಿ’ ಎಂದು ಅವರು ಆಗ್ರಹಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.