ಬುಧವಾರ, ಮೇ 12, 2021
26 °C

ಬೀಡಿ ಮೇಲೆ ತೆರಿಗೆ ವಿಧಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಬೀಡಿ ಮೇಲೆ ವಿಧಿಸಿದ್ದ ಶೇ 5 ರಷ್ಟು ತೆರಿಗೆಯನ್ನು ವಾಪಸು ಪಡೆಯದೆ ಸರ್ಕಾರ ಮುಂದುವರಿಸಬೇಕು~ ಎಂದು ಪ್ರಜ್ಞಾ ಸಾಮಾಜಿಕ ಸಾಂಸ್ಕೃತಿಕ ಸೊಸೈಟಿಯ ಸಂಘಟನಾ ಕಾರ್ಯದರ್ಶಿ ಮಾಲತಿ ಸರೋಜ್ ಒತ್ತಾಯಿಸಿದರು.ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಬೀಡಿ ಮೇಲೆ ವಿಧಿಸಿರುವ ತೆರಿಗೆಯನ್ನು ವಾಪಸು ಪಡೆಯುವುದರಿಂದ ಬೀಡಿ ಉದ್ಯಮದಲ್ಲಿ ತೊಡಗಿರುವ ಬಡ ಕಾರ್ಮಿಕರಿಗೆ ಏನೂ ತೊಂದರೆಯೂ ಆಗುವುದಿಲ್ಲ ಹಾಗೂ ಲಾಭವೂ ಆಗುವುದಿಲ್ಲ. ಇದರ ಲಾಭ ಪಡೆಯುವವರು ಮಾಲೀಕರು~ ಎಂದರು. `ಬೀಡಿ ಉದ್ಯಮದಲ್ಲಿ ತೊಡಗಿರುವ ಬಹುತೇಕ ಕಾರ್ಮಿಕರಿಗೆ ಅದೇ ಜೀವನಾಧಾರವಾದರೂ, ಬಡ ಜನರ ಪಾಲಿಗೆ ವಿಷಕಾರಿಯಾಗಿದೆ. ಕಡಿಮೆ ಬೆಲೆಯಲ್ಲಿ ಬೀಡಿ ಸಿಗುವಂತಾದರೆ ಬಡ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಆದ್ದರಿಂದ ಬೀಡಿ ಮೇಲೆ ತೆರಿಗೆಯನ್ನು ವಿಧಿಸಬೇಕು ಎಂದು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಮನವಿ ಪತ್ರವನ್ನು ಸಲ್ಲಿಸಲಾಗುವುದು~ ಎಂದು ಹೇಳಿದರು.

ಗೋಷ್ಠಿಯಲ್ಲಿ ವೈದ್ಯ ಡಾ.ರೋಹಿತ್ ಗಾಯಕ್‌ವಾಡ್ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.