ಬುಧವಾರ, ನವೆಂಬರ್ 20, 2019
21 °C

ಬೀದರ್: ಅಂತಿಮ ಕಣದಲ್ಲಿ 94 ಸ್ಪರ್ಧಾಳು

Published:
Updated:

ಬೀದರ್: ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಉಮೇದುವಾರಿಕೆ ವಾಪಸು ಪಡೆಯುವ ಗಡುವು ಶನಿವಾರ ಅಂತ್ಯಗೊಂಡಿದ್ದು, ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಿಂದ ಒಟ್ಟು 94 ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ.ಇಬ್ಬರು ಮಾಜಿ ಸಚಿವರು, ಐವರು ಹಾಲಿ ಶಾಸಕರು, ನಾಲ್ಕು ಮಂದಿ ಮಾಜಿ ಶಾಸಕರು ಅಂತಿಮ ಕಣದಲ್ಲಿ ಉಳಿದಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಸೇರಿದ್ದಾರೆ. ಇದರೊಂದಿಗೆ ವಿಧಾನಸಭಾ ಚುನಾವಣೆಯ ಸ್ಪರ್ಧಾ ಕಣದ ಅಖಾಡ ಸಜ್ಜಾಗಿದ್ದು, ಪ್ರಚಾರದ ಹೋರಾಟ ಭಾನುವಾರದಿಂದ ಚುರುಕುಪಡೆಯುವ ನಿರೀಕ್ಷೆಯಿದೆ.ಬೀದರ್ ಕ್ಷೇತ್ರದಲ್ಲಿ 18, ಬೀದರ್ ದಕ್ಷಿಣ 21, ಬಸವಕಲ್ಯಾಣ 17, ಭಾಲ್ಕಿ 12, ಹುಮನಾಬಾದ್ 12 ಮತ್ತು ಔರಾದ್ ಮೀಸಲು 14 ಮಂದಿ ಅಂತಿಮ ಸ್ಪರ್ಧೆಯಲ್ಲಿ ಉಳಿದಿದ್ದಾರೆ.ಕಣದಲ್ಲಿರುವ ಮಾಜಿ ಸಚಿವರಲ್ಲಿ ಗುರುಪಾದಪ್ಪಾ ನಾಗಮಾರಪಳ್ಳಿ, ಬಂಡೆಪ್ಪಾ ಕಾಶೆಂಪುರ (ಹಾಲಿ ಶಾಸಕ) ಸೇರಿದ್ದರೆ, ಹಾಲಿ ಶಾಸಕರಾದ ರಹೀಂ ಖಾನ್, ಈಶ್ವರ ಖಂಡ್ರೆ, ರಾಜಶೇಖರ ಪಾಟೀಲ್, ಪ್ರಭು ಚವ್ಹಾಣ್ ಅವರು ಮರು ಆಯ್ಕೆ ಬಯಸಿದ್ದಆರೆ.ಇವರೊಂದಿಗೆ ಮಾಜಿ ಶಾಸಕರಾದ ಪ್ರಕಾಶ್ ಖಂಡ್ರೆ, ರಮೇಶ್‌ಕುಮಾರ್ ಪಾಟೀಲ್, ಮಲ್ಲಿಕಾರ್ಜುನ ಖೂಬಾ, ಎಂ.ಜಿ. ಮುಳೆ ಅವರು ಮತ್ತೆ ಶಾಸನ ಸಭೆ ಪ್ರವೇಶಿಸಲು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.ಈ ಚುನಾವಣೆಯಲ್ಲಿ ನೈಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕ ಮಕ್ಕಳ ಪಕ್ಷದ ಸ್ಥಾಪಕ ಅಶೋಕ್ ಖೇಣಿ ಅವರೂ ಬೀದರ್ ದಕ್ಷಿಣ ಕ್ಷೇತ್ರದಿಂದ ಕಣದಲ್ಲಿದ್ದು, ಅವರ ನಾಮಪತ್ರ ಕುರಿತು ವ್ಯಕ್ತವಾಗಿದ್ದ ತಕರಾರು, ವಾದ-ಪ್ರತಿವಾದದ ಹಿನ್ನೆಲೆಯಲ್ಲಿ ಚುನಾವಣಾ ಹೋರಾಟವೂ ತೀವ್ರಗೊಳ್ಳುವ ಸೂಚನೆಯನ್ನು ನೀಡಿದೆ.ಇವರ ಜೊತೆಗೆ, ಜಿಲ್ಲಾ ಪಂಚಾಯಿತಿ ಸದಸ್ಯ ಶೈಲೇಂದ್ರ ಕುಮಾರ್, ಮಾಜಿ ಸದಸ್ಯರಾದ ನಸಿಮೋದ್ದೀನ್ ಪಟೇಲ್, ಮೀನಾಕ್ಷಿ ಸಂಗ್ರಾಮ್, ಅಮೃತ್ ಚಿಮಕೋಡೆ, ಬಿ.ನಾರಾಯಣರಾವ್, ಡಿ.ಕೆ.ಸಿದ್ರಾಮ, ಜಗನ್ನಾಥ ಪಾಟೀಲ್, ಪದ್ಮಾಕರ ಪಾಟೀಲ್ ಅವರೂ ಸ್ಪರ್ಧಾಕಣದಲ್ಲಿದ್ದು ಶಾಸನಸಭೆ ಪ್ರವೇಶಿಸುವ ಉತ್ಸಾಹದಲ್ಲಿದ್ದಾರೆ.ಕ್ಷೇತ್ರಾವಾರು ಕಣದಲ್ಲಿ ಉಳಿದಿರುವ ಅಭ್ಯರ್ಥಿಗಳ ಹೆಸರು, ಪಕ್ಷದ ವಿವರ  ಹೀಗಿದೆ.ಬೀದರ್ ಕ್ಷೇತ್ರ

ರಹೀಂ ಖಾನ್ -ಕಾಂಗ್ರೆಸ್, ಗುರುಪಾದಪ್ಪ ನಾಗಮಾರಪಳ್ಳಿ -ಕರ್ನಾಟಕ ಜನತಾ ಪಕ್ಷ, ರಮೇಶ್‌ಕುಮಾರ್ ಪಾಂಡೆ -ಬಿಜೆಪಿ, ಅನಿಲ್ ಕುಮಾರ -ಬಿಎಸ್‌ಆರ್ ಕಾಂಗ್ರೆಸ್, ಅಮರ್ ಎರೋಳ್‌ಕರ್ -ಜೆಡಿಎಸ್, ಖಯಾಮುದ್ದೀನ್ ತಂದೆ ಜಮೀರುದ್ದೀನ್ -ನ್ಯಾಷನಲ್ ಡೆವಲಪ್‌ಮೆಂಟ್ ಪಾರ್ಟಿ, ಅಬ್ದುಲ್ ಫಯಾಜ್ -ಎನ್‌ಸಿಪಿ,  ಪಂಡರಿ - ಫಿರಮಿಡ್ ಪಾರ್ಟಿ ಆಫ್ ಇಂಡಿಯಾ, ಚಂದ್ರಶೇಖರ್ ತಂದೆ ಮಡೆಪ್ಪ.  ಷಾ ಸೈಪೂಲ್ ಇಸ್ಲಾಂ,  ಪೆನಿನಾ, ಪ್ರಭು, ಕೊಂಡಿಬಾರಾವ್ ಪಾಂಡ್ರೆ, ಶೇಖ್ ಹಾಜಿ ಮನಿಯಾರ್ ತಂದೆ ಎಂ. ಸುಲ್ತಾನ್, ಈಶ್ವರ್ ಕನೇರಿ ತಂದೆ ಬಾಳ್ಯಪ್ಪ - ಪಕ್ಷೇತರ, ಸೈಯದ್ ಹಾಜಿ ಪಾಶ ತಂದೆ ಸೈಯದ್ ಸಲೀಂ ಮಿಯಾ - ಪಕ್ಷೇತರ, ಈಶ್ವರ್ ತಂದೆ ಗಂಗಾರಾಮ್ - ಪಕ್ಷೇತರ, ಕೊಂಡಿಬಾರಾವ್ ಪಾಂಡ್ರೆ ತಂದೆ ಗೋಪಾಲ್ ರಾವ್ ಪಾಂಡ್ರೆ, ಅಬ್ದುಲ್ ಜಮೀಲ್ ಖಾನ್ ತಂದೆ ಅಬ್ದುಲ್ ಜಲೀಲ್ ಖಾನ್ (ಎಲ್ಲರೂ ಪಕ್ಷೇತರ).ಬಸವಕಲ್ಯಾಣ ಕ್ಷೇತ್ರ

ಮಲ್ಲಮ್ಮ ಬಸವರಾಜ ಅಟ್ಟೂರ  -ಕರ್ನಾಟಕ ಜನತಾ ಪಕ್ಷ, ಮೂಳೆ ಮಾರುತಿ ರಾವ್ - ಬಿಎಸ್‌ಆರ್ ಕಾಂಗ್ರೆಸ್, ಬಿ. ನಾರಾಯಣರಾವ್ - ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಮಲ್ಲಿಕಾರ್ಜುನ್ ಎಸ್. ಖೂಬಾ -ಜೆಡಿಎಸ್, ಅಬ್ದುಲ್ ರಜಾಕ್ - ಬಹುಜನ ಸಮಾಜ ಪಾರ್ಟಿ, ಸಂಜಯ ಪವಾರ - ಭಾರತೀಯ ಜನತಾ ಪಕ್ಷ, ಸರದಾರ ಖಾನ್ ತಂದೆ ಯಾಸಿನ್ ಖಾನ್  ವೆಲ್‌ಫೆರ್ ಪಾರ್ಟಿ ಆಫ್ ಇಂಡಿಯಾ, ಸೈಯದ್ ಗೌಸ್ ತಂದೆ ಸೈಯದ್ ಓಸ್ಮಾನ್ - ಹಿಂದುಸ್ತಾನ್ ಜನತಾ ಪಾರ್ಟಿ,  ಸಂಜಯ- ಭಾರತೀಯ ಜನತಾ ಪಕ್ಷ, ಮಿಲಿಂದ -ಆರ್‌ಪಿಐ, ಸರದಾರ್ ಖಾನ್ - ವೆಲ್‌ಫೆರ್ ಪಾರ್ಟಿ ಆಫ್ ಇಂಡಿಯಾ, ಸೈಯದ್ ಅನ್ವರ್ ತಂದೆ ಸೈಯದ್ ಪೀರ್ ಪಾಶಾ, ಮಾದೇವಿ, ಶಹಾಜಿರಾವ್, ಅರುಣ್ ಕುಮಾರ್, ಜ್ಞಾನೇಶ್ವರ್, ಮಲ್ಲಮ್ಮ, ಜಗನ್ನಾಥ್ ಪಾಟೀಲ್,  ಮಲ್ಲಿಕಾರ್ಜುನ ಬಿರಾದರ್ (ಎಲ್ಲರೂ  ಪಕ್ಷೇತರರು).ಹುಮನಾಬಾದ್ ಕ್ಷೇತ್ರ

ರಾಜಶೇಖರ್ ತಂದೆ ಬಸವರಾಜ್ ಪಾಟೀಲ್ -ಕಾಂಗ್ರೆಸ್,  ಪದ್ಮಾಕರ ತಂದೆ ಶಂಕರ್‌ರಾವ್-ಬಿಜೆಪಿ,  ಎಂ. ನಸೀಮುದ್ದೀನ್ ಪಟೇಲ್ -ಜೆಡಿಎಸ್, ಮೀರ್ ಅಶರಿಫ್ ಅಲಿ ತಂದೆ ಮೀರ್ ಶಯ್ಯದ್ ಅಲಿ- ಕರ್ನಾಟಕ ಜನತಾ ಪಕ್ಷ, ಬ್ಯಾಂಕ್ ರೆಡ್ಡಿ ತಂದೆ ಪ್ರಭು ರೆಡ್ಡಿ - ಬಿಎಸ್‌ಆರ್ ಕಾಂಗ್ರೆಸ್, ಅಂಕುಶ್ ತಂದೆ ಲಿಂಗಪ್ಪ - ಬಿಎಸ್‌ಪಿ, ಅಂಕುಶ್ ತಂದೆ ಲಿಂಗಪ್ಪ - ಬಿಎಸ್‌ಪಿ, ಮೀರ್ ಅಶ್ರಫ್ ಅಲಿ -ಕೆಜೆಪಿ, ಇಸ್ಮಾಯಿಲ್ ತಂದೆ ಮೆಹಬೂಬ್ ಸಾಬ್ - ನ್ಯಾಷನಲ್ ಪಾಪುಲರ್ ಪಾರ್ಟಿ, ಲಕ್ಷ್ಮಣ ತಂದೆ ಗುರಪ್ಪ - ಆರ್‌ಪಿಐ, ರವಿ ತಂದೆ ಕಾಳಪ್ಪ, ಪರಮೇಶ್ವರ ತಂದೆ ರಾಮಚಂದ್ರ,  ನರಸಪ್ಪ ತಂದೆ ಲಚ್ಚಪ್ಪ, ಅಶೋಕ್ ಸಗರ ತಂದೆ ಚಂದ್ರಕಾಂತ್ ಸಗರ  (ಎಲ್ಲರೂ ಪಕ್ಷೇತರರು).ಔರಾದ್ ಮೀಸಲು ಕ್ಷೇತ್ರ

  ಪ್ರಭು ಚವ್ಹಾಣ್ -ಬಿಜೆಪಿ, ದೇವಿದಾಸ ತಂದೆ ಆನಂದ - ಬಹುಜನ ಸಮಾಜ ಪಕ್ಷ, ವಿಜಯ ಕುಮಾರ್ -ಕಾಂಗ್ರೆಸ್,  ಧನಾಜಿ ತಂದೆ ಭೀಮ - ಕೆಜೆಪಿ, ಜಿ.ಎಂ.ಯಾತನೂರು - ಜೆಡಿಎಸ್, ರೂಪ್ ಚಂದ್ ತಂದೆ ಮಾನ್‌ಸಿಂಗ್ - ಎನ್‌ಸಿಪಿ, ಶಿವಕುಮಾರ್ ತಂದೆ ಸಿದ್ರಾಮೇಶ್ವರ್ - ಬಿಎಸ್‌ಆರ್ ಕಾಂಗ್ರೆಸ್, ರಾಜ್ ಕುಮಾರ್ ತಂದೆ ಝರೆಪ್ಪ - ಕರ್ನಾಟಕ ಮಕ್ಕಳ ಪಕ್ಷ,  ಶಾಮಣ್ಣ ಭಾವಗಿ,  ಡಾ. ಶಂಕರರಾವ್, ರತನ್ ಸಿಂಗ್, ಶಂಕರರಾವ್, ಜಯರಾಜ್ ಚತುರೆ ತಂದೆ ಶಿವಲಿಂಗಪ್ಪ, ಕಸ್ತೂರಬಾಯಿ ಗಂಡ ಗುಣವಂತ ರಾವ್,  ಸುಲೋಚನಾ ಗಂಡ ಶಂಕರ್ (ಎಲ್ಲರೂ ಪಕ್ಷೇತರರು).ಭಾಲ್ಕಿ ಕ್ಷೇತ್ರ

  ಪ್ರಕಾಶ್ ಖಂಡ್ರೆ- ಭಾರತೀಯ ಜನತಾ ಪಕ್ಷ, ಈಶ್ವರ್ ಖಂಡ್ರೆ - ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಡಿ.ಕೆ. ಸಿದ್ರಾಮ   ಕರ್ನಾಟಕ ಜನತಾ ಪಕ್ಷ, ಜಗನ್ನಾಥ್ - ಬಿಎಸ್‌ಆರ್ ಕಾಂಗ್ರೆಸ್, ಜನಾರ್ದನ್ - ಜೆಡಿಎಸ್,  ಇಸ್ಮಾಯಿಲ್ ಶಾ-ಬಿಎಸ್‌ಪಿ, ನೀಲಕಂಠ -ಐಒಡಿ, ಇಸ್ಮಾಲ್ ಶಾ - ಬಿಎಸ್‌ಪಿ,  ಬಾಬು ಪಾಷಾ, ಭಾಲ್ಕೇಶ್ವರ, ಪ್ರಕಾಶ್, ಅಶೋಕ್, ದಯಾನಂದ, (ಎಲ್ಲರೂ ಪಕ್ಷೇತರರು).   ಬೀದರ ದಕ್ಷಿಣ

ಮೀನಾಕ್ಷಿ ಸಂಗ್ರಾಮ್- ಕಾಂಗ್ರೆಸ್, ಬಸವರಾಜ ಪಾಟೀಲ್ -ಬಿಜೆಪಿ, ಶೈಲೇಂದ್ರ ಕುಮಾರ್-ಕೆಜೆಪಿ, ಬಂಡೆಪ್ಪ ತಂದೆ ಮಾಣಿಕಪ್ಪ -ಜೆಡಿಎಸ್, ಅಶೋಖ್ ಖೇಣಿ -ಕರ್ನಾಟಕ ಮಕ್ಕಳ ಪಕ್ಷ, ಜಮೀರುದ್ದೀನ್ ತಂದೆ ಅಮೀರುದ್ದೀನ್ ಮೌಲ್ವಿ- ನ್ಯಾಷನಲ್ ಡೆವಲಪ್ ಮೆಂಟ್ ಪಕ್ಷ, ಬಾಬುರಾವ್ ತಂದೆ ನಾಗಶೆಟ್ಟಿ- ಸಿಪಿಐ, ಅಬ್ದುಲ್ ಮನ್ನನ್ ತಂದೆ ಅಬ್ದುಲ್ ಅಜೀಜ್ - ಬಿಎಎಸ್‌ಪಿ, ಶಂಕರ್ ತಂದೆ ಮಾರುತಿ -ಆರ್‌ಪಿಐ, ಹಾಸಿಂ ತಂದೆ ಅಹಮದ್ ಸಾಬ್ -ಬಿಪಿಪಿ, ಭಾಸ್ಕರ್ ಬಾಬು ತಂದೆ ಮರೆಪ್ಪ - ಅಂಬೇಡ್ಕರ್ ನ್ಯಾಷನಲ್ ಕಾಂಗ್ರೆಸ್,  ಪ್ರವೀಣ್ ಕುಮಾರ್ ತಂದೆ ರೂಪ್ ಕುಮಾರ್ ದಾಸ್ - ಬಿಎಸ್‌ಆರ್ ಕಾಂಗ್ರೆಸ್, ಅಲಿ ಅಹಮದ್ ಖಾನ್ ತಂದೆ ಮಕ್ಬುಲ್ ಖಾನ್ - ಅಖಿಲ ಭಾರತೀಯ ಮುಸ್ಲಿಂ ಲೀಗ್ ಸೆಕ್ಯುಲರ್, ಡಾ. ಅಬ್ದುಲ್ ಕರೀಂ ತಂದೆ ಅಬ್ದುಲ್ ರಶೀದ್ - ಲೋಕಸತ್ತಾ ಪಕ್ಷ, ಪ್ರಭು ತಂದೆ ರಾಮಚಂದ್ರಪ್ಪ, ನರಸಪ್ಪ ಲಚ್ಚಪ್ಪ,  ವಸಂತ ತಂದೆ ಸಂಗಪ್ಪ, ಬಶೀರ್ ಮಿಯ್ಯೊ ತಂದೆ ಫತ್ರು ಸಾಬ್, ಅಮತ್ ರಾವ್ ತಂದೆ ಝರೆಪ್ಪ, ಅಮತ್ ರಾವ್ ತಂದೆ ಝರೇಪ್ಪ, 20 .ಶರಾಫೋದ್ದೀನ್ ತಂದೆ ಫಕೀರ್ ಅಹಮದ್ ಸಾಬ್, ಅಬ್ರಹಾಂ ಟಿ.ಜೆ. ತಂದೆ ಜೋಸೆಫ್ ಟಿ.ಎ. (ಎಲ್ಲರೂ ಪಕ್ಷೇತರರು).

ಪ್ರತಿಕ್ರಿಯಿಸಿ (+)