ಬೀದರ್ ಉತ್ಸವ: ಪಾರಂಪರಿಕೆ ನಡಿಗೆ

7

ಬೀದರ್ ಉತ್ಸವ: ಪಾರಂಪರಿಕೆ ನಡಿಗೆ

Published:
Updated:

ಬೀದರ್: ‘ಬೀದರ್ ಉತ್ಸವ’ದ ಅಂಗವಾಗಿ ನಗರದಲ್ಲಿ ಶನಿವಾರ ಪಾರಂಪರಿಕ ನಡಿಗೆ ನಡೆಯಿತು.ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ಚಾಲನೆ ನೀಡಿದರು. ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಡಾ. ಬಸವರಾಜ ಪಾಟೀಲ್ ಅಷ್ಟೂರ ಅವರು ಬೀದರ್ ಸ್ಮಾರಕಗಳ ಚಿತ್ರ ಸಹೀತ ಮಾಹಿತಿ ಒಳಗೊಂಡ ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಿದರು.ಬೀದರ್‌ನ ಸ್ಮಾರಕಗಳ ಚಿತ್ರ ಒಳಗೊಂಡ ಟಿಶರ್ಟ್ ಹಾಗೂ ಕ್ಯಾಪ್‌ಗಳನ್ನು ಪರಂಪರೆ ಇಲಾಖೆಯ ಆಯುಕ್ತರಾದ ನೀಲಾ ಮಂಜುನಾಥ ವಿತರಿಸಿದರು.

ಪ್ರೊ. ಎನ್.ಟಿ. ಗಂಗಮ್ಮ ಹಾಗೂ ಪ್ರೊ. ಬಿ.ಆರ್. ಕೊಂಡಾ ಅವರು ಜಿಲ್ಲೆಯ ಐತಿಹಾಸಿಕ ಸ್ಮಾರಕಗಳ ಬಗ್ಗೆ ಮಾಹಿತಿ ನೀಡಿದರು.ಪ್ರಾಚಾರ್ಯ ಪ್ರೊ. ಬಿ.ಎಸ್. ಸಜ್ಜನ್, ಉಪ ಪ್ರಾಚಾರ್ಯ ಮುದುಕಾ ಬಸವರಾಜ, ನಗರಸಭೆ ಆಯುಕ್ತ ಎಸ್.ಪಿ. ಮುಧೋಳ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಾಬುವಾಲಿ, ಪ್ರೊ. ದೇವೇಂದ್ರ ಕಮಲ್, ಪ್ರೊ. ವಿ.ಎಂ. ಚನಶೆಟ್ಟಿ, ಪ್ರೊ. ಗಣಪತಿ ಗಾಯಕವಾಡ, ಡಾ. ಪಿ. ವಿಠಲರೆಡ್ಡಿ ಮೊದಲಾದವರು ಪಾಲ್ಗೊಂಡಿದ್ದರು.ಕರ್ನಾಟಕ ಪ್ರಾಚ್ಯ ವಸ್ತು ಸಂಗ್ರಹಾಲಯ ಹಾಗೂ ಪರಂಪರೆ ಇಲಾಖೆ ಹಾಗೂ ಬಿ.ವಿ.ಬಿ. ಕಾಲೇಜಿನ ಪರಂಪರೆ ಕೂಟದಿಂದ ಪಾರಂಪರಿಕ ನಡಿಗೆ ಆಯೋಜಿಸಲಾಗಿತ್ತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry