ಬೀದರ್ ಕೋಟೆಗೆ ಬ್ರಿಟಿಷ್‌ ಅಧಿಕಾರಿ ಇಯಾನ್‌ ಭೇಟಿ

7

ಬೀದರ್ ಕೋಟೆಗೆ ಬ್ರಿಟಿಷ್‌ ಅಧಿಕಾರಿ ಇಯಾನ್‌ ಭೇಟಿ

Published:
Updated:

ಬೀದರ್‌: ಬ್ರಿಟಿಷ್‌ ವಿದೇಶಾಂಗ ವ್ಯವಹಾರ ಖಾತೆ ಅಧಿಕಾರಿ ಇಯಾನ್‌ ಫೆಲ್ಟನ್ ಭಾನುವಾರ ನಗರದ ಐತಿಹಾಸಿಕ ಕೋಟೆಗೆ ಭೇಟಿ ನೀಡಿದರು.ನಗರದ ರಂಗೀನ್‌ ಮಹಲ್‌, ತರ್ಕಶ್‌ ಮಹಲ್‌, ಉದ್ಯಾನವನ ಮತ್ತಿತರ ಸ್ಥಳಗಳನ್ನು ವೀಕ್ಷಿಸಿದರು. ಪ್ರೊ. ಬಿ.ಆರ್‌. ಕೊಂಡಾ ಅವರಿಗೆ ಕೋಟೆಯ ಇತಿಹಾಸವನ್ನು ಪರಿಚಯಿಸಿದರು.ಇದಕ್ಕೂ ಮುನ್ನ ಫೆಲ್ಟನ್‌ ಜಿಲ್ಲೆಯ ಹಿರಿಯ ಅಧಿಕಾರಿಗಳೊಂದಿಗೆ ಅನೌಪಚಾರಿಕ ಸಭೆ ನಡೆಸಿದರು.

ಒಂದು ವಾರದ ಕಾಲ ಉತ್ತರ ಕರ್ನಾಟಕ ಪ್ರವಾಸ ಕೈಗೊಂಡಿದ್ದೇವೆ. ಬೀದರ್, ಗುಲ್ಬರ್ಗ, ವಿಜಾಪುರ ನಗರಗಳಿಗೆ ಭೇಟಿ ನೀಡಿ ಅಲ್ಲಿನ ವಾಣಿಜ್ಯ ಸಂಸ್ಥೆ ಹಾಗೂ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರನ್ನು ಭೇಟಿಯಾಗಲಿದ್ದೇವೆ ಎಂದು ತಿಳಿಸಿದರು.ಹೈದರಾಬಾದ್‌ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಶಿಕ್ಷಕರ ತರಬೇತಿ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜಿಸಲಾಗಿದೆ ಎಂದು ತಿಳಿಸಿದರು.ಜಿಲ್ಲಾಧಿಕಾರಿ ಡಾ. ಪಿ.ಸಿ. ಜಾಫರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಉಜ್ವಲಕುಮಾರ್ ಘೋಷ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಕೆ. ತ್ಯಾಗರಾಜನ್, ಉಪ ವಿಭಾಗಾಧಿಕಾರಿ ಕನಕವಲ್ಲಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸುನಿಲ್‌ ಪನ್ವಾರ್ ಉಪಸ್ಥಿತರಿದ್ದರು.ಫೆಲ್ಟನ್‌ ಅವರೊಂದಿಗೆ ಮಂಜುನಾಥ, ದಿಲೀಪ್‌, ಮುರುಗನ್ ಮತ್ತಿತರ ಅಧಿಕಾರಿಗಳು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry