ಬೀದರ್- ಬೆಂಗಳೂರು ರೈಲು ಆರಂಭ

7

ಬೀದರ್- ಬೆಂಗಳೂರು ರೈಲು ಆರಂಭ

Published:
Updated:
ಬೀದರ್- ಬೆಂಗಳೂರು ರೈಲು ಆರಂಭ

ಬೀದರ್: ಬೆಂಗಳೂರಿಗೆ ನೇರ ಸಂಪರ್ಕ ಒದಗಿಸುವ ರೈಲು ಸೇವೆ ಬೇಕು ಎಂಬ ಗಡಿ ಜಿಲ್ಲೆಯ ಬಹುದಿನಗಳ ಕನಸು ಭಾನುವಾರ ನನಸಾಯಿತು. ವಾರದಲ್ಲಿ ಮೂರು ದಿನ ಸಂಚರಿಸುವ ಬೀದರ್- ಬೆಂಗಳೂರು ಎಕ್ಸ್‌ಪ್ರೆಸ್ ರೈಲಿಗೆ ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಚಾಲನೆ ನೀಡಿದರು.`ಪ್ರಸ್ತುತ ನಾಂದೇಡ್- ಬೆಂಗಳೂರು ರೈಲು ಬೀದರ್ ಮೂಲಕ ಹಾದು ಹೋಗುತ್ತಿದ್ದು, ಪ್ರಯಾಣ 18 ತಾಸು ಆಗುತ್ತಿತ್ತು. ಇದರ ಸಮಯ ಬದಲಿಸುವ ಬೇಡಿಕೆ ಇತ್ತು. ಅದರ ಬದಲಾಗಿ ಹೊಸ ರೈಲು ಸೇವೆ ಒದಗಿಸಲಾಗಿದೆ' ಎಂದರು.ಸಚಿವರು ಗುಂಡಿ ಒತ್ತುವ ಮೂಲಕ ಹಸಿರು ದೀಪ ಬೆಳಗಿಸುತ್ತಿದ್ದಂತೆ ಪುಷ್ಪಾಲಂಕೃತಗೊಂಡಿದ್ದ ರೈಲಿನ ಎಂಜಿನ್‌ನ ಶಬ್ದದೊಂದಿಗೆ ಸಮಾರಂಭದಲ್ಲಿ ಸೇರಿದ್ದ ಅಸಂಖ್ಯ ಜನರ ಹರ್ಷೋದ್ಗಾರವೂ ಮೊಳಗಿತು.`ಹುಬ್ಬಳ್ಳಿ-ಗುಲ್ಬರ್ಗ ಪ್ರಯಾಣ ಅವಧಿ ಕಡಿತಗೊಳಿಸಲು ರೈಲುಗಳ ಸಮಯ ಮರು ಹೊಂದಾಣಿಕೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಸಂಸದ ಧರ್ಮಸಿಂಗ್, ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ, ದಕ್ಷಿಣ ಮಧ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಎ.ಕೆ.ಮಿತ್ತಲ್ ಹಾಗೂ ಬೀದರ, ಗುಲ್ಬರ್ಗ ಜಿಲ್ಲೆಯ ಶಾಸಕರು ಇದ್ದರು.ಮುಖ್ಯಾಂಶಗಳು* ಅಂತರ 737 ಕಿ.ಮೀ, ಅವಧಿ 13.15 ಗಂಟೆ

 *ಬೀದರ್‌ನಿಂದ ನಿರ್ಗಮನ ಸಂಜೆ 6.25, ಆಗಮನ ಬೆಳಿಗ್ಗೆ 9.30 (ಸೋಮವಾರ, ಬುಧವಾರ ಮತ್ತು ಶುಕ್ರವಾರ)* ಯಶವಂತಪುರ ನಿರ್ಗಮನ ರಾತ್ರಿ 7.15, ಆಗಮನ ಬೆಳಿಗ್ಗೆ 7.40 (ಭಾನುವಾರ, ಮಂಗಳವಾರ ಮತ್ತು ಗುರುವಾರ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry