ಬೀದರ್ –ಸಿಕಂದರಾಬಾದ್ ಮಧ್ಯೆ ಪುಷ್‌ಫುಲ್‌ ರೈಲು

7

ಬೀದರ್ –ಸಿಕಂದರಾಬಾದ್ ಮಧ್ಯೆ ಪುಷ್‌ಫುಲ್‌ ರೈಲು

Published:
Updated:

ಬೀದರ್: ಬೀದರ್ ಮತ್ತು ಸಿಕಂದರಾಬಾದ್‌ ನಡುವೆ ವಿಶೇಷ ಪುಷ್‌ಫುಲ್‌ ರೈಲು ಸಂಚಾರ ಆರಂಭವಾಗಲಿದೆ ಎಂದು ದಕ್ಷಿಣ ಕೇಂದ್ರೀಯ ರೈಲ್ವೆ ಪ್ರಕಟಣೆ ತಿಳಿಸಿದೆ.07014 ಸಂಖ್ಯೆಯ ರೈಲು ಜನವರಿ 4, 8, 11, 15, 18, 22, 25, 29 ಮತ್ತು ಫೆಬ್ರುವರಿ 1ರಂದು (ಬುಧ­ವಾರ, ಶನಿವಾರ) ಬೀದರ್‌­ನಿಂದ ರಾತ್ರಿ 9.50 ಗಂಟೆಗೆ ನಿರ್ಗಮಿಸಲಿದ್ದು, ಸಿಕಂದರಾಬಾದ್ ಅನ್ನು ಬೆಳಗಿನ ಜಾವ 2.15 ಗಂಟೆಗೆ ತಲುಪಲಿದೆ.ಹಿಂದಿರುಗುವ ಮಾರ್ಗದಲ್ಲಿ 07013 ಸಂಖ್ಯೆಯ ರೈಲು ಜನವರಿ 6, 10, 13, 17, 20, 24, 27 ಮತ್ತು 31ರಂದು (ಸೋಮವಾರ, ಶುಕ್ರವಾರ) ಸಿಕಂದರಾಬಾದ್‌ನಿಂದ ರಾತ್ರಿ 12.45 ಗಂಟೆಗೆ ತೆರಳಲಿದ್ದು, ಬೀದರ್ ಅನ್ನು ಬೆಳಗಿನ ಜಾವ 4.55 ಗಂಟೆಗೆ ತಲುಪಲಿದೆ ಎಂದು ಹೇಳಿಕೆ ತಿಳಿಸಿದೆ.ಈ ಪುಷ್‌ಫುಲ್‌ ರೈಲಿಗೆ ಮೆಟಲ್‌ ಕುಂಟಾ, ಜಹೀರಾಬಾದ್‌, ಕೋಹಿರ್‌ ಡೆಕ್ಕನ್‌, ಮರಪಲ್ಲಿ, ಸದಾಶಿವಪೇಟ್‌, ವಿಖರಾಬಾದ್‌, ಲಿಂಗಂಪಳ್ಳಿ, ಬೇಗುಂಪೇಟೆ ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ ಎಂದು ರೈಲ್ವೆ ಇಲಾಖೆಯ ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry