ಬೀದಿನಾಯಿಗಳು ಕಾಡಿಗೆ: ವನ್ಯ ಪ್ರಾಣಿಗಳಿಗೆ ಸೋಂಕು ಸಾಧ್ಯತೆ

7

ಬೀದಿನಾಯಿಗಳು ಕಾಡಿಗೆ: ವನ್ಯ ಪ್ರಾಣಿಗಳಿಗೆ ಸೋಂಕು ಸಾಧ್ಯತೆ

Published:
Updated:

ಬೆಂಗಳೂರು: ಬೀದಿನಾಯಿಗಳನ್ನು ಹಿಡಿದು ನಾಡಿನಿಂದ ಕಾಡಿಗೆ ಬಿಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದು, ಇದರಿಂದ ಕಾಡು ಪ್ರಾಣಿಗಳಿಗೆ ಹಲವು ರೋಗಗಳು ಹರಡುವ ಸಾಧ್ಯತೆ ಇದೆ ಎಂದು ಕೆಲ ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ.ಒಂದು ವರ್ಷದಿಂದ ಅಕ್ರಮವಾಗಿ ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಯ ಕೆಲ ಭಾಗಗಳು, ತುಮ­ಕೂರು,   ಹಾಗೂ ಕೆಜಿಎಫ್‌ನಲ್ಲಿ ಬೀದಿ ನಾಯಿಗಳನ್ನು ಹಿಡಿದು ಹತ್ತಿರದ ಅರಣ್ಯ ಪ್ರದೇಶಕ್ಕೆ ಬಿಡಲಾಗುತ್ತಿದೆ ಎಂದು ಸರ್ವೋದಯ ಸೇವಾಬಾವಿ ಸಂಸ್ಥೆಯ ಟ್ರಸ್ಟಿ ವಿನಯ್‌ ಮೋರೆ ಆಪಾದಿಸಿದ್ದಾರೆ.ಮಂಡ್ಯದ ನಗರ ಪ್ರದೇಶ, ಪಾಂಡವಪುರ, ಮದ್ದೂ­ರಿನಲ್ಲಿ ಹಿಡಿದ ಬೀದಿನಾಯಿಗಳನ್ನು ಮುತ್ತತ್ತಿ ಅರಣ್ಯ ಪ್ರದೇಶಕ್ಕೆ,  ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ಸೇರಿ­ದಂತೆ ಕೆಲ ತಾಲ್ಲೂಕುಗಳಲ್ಲಿ ಹಿಡಿದ ಬೀದಿ ನಾಯಿ­ಗಳನ್ನು ಬಂಡೀಪುರ ಅರಣ್ಯ ಪ್ರದೇಶಕ್ಕೆ ಬಿಡುತ್ತಿದ್ದರೆ, ಕೆಜಿಎಫ್‌ನಲ್ಲಿ ಕೃಷ್ಣಗಿರಿ ಅರಣ್ಯಕ್ಕೆ ಹಾಗೂ ತುಮಕೂ­ರಿ­ನಲ್ಲಿ ದೇವರಾಯನ ದುರ್ಗ ಹಾಗೂ ತಿಮ್ಮನಹಳ್ಳಿ ಅರಣ್ಯ ಪ್ರದೇಶಕ್ಕೆ ನಾಯಿಗಳನ್ನು ಸ್ಥಳಾಂತರ ಗೊಳಿಸ­ಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.‘ಈ ಬಗ್ಗೆ ಹಲವು ಬಾರಿ ಮಾಹಿತಿ ಬಂದಾಗ ಆಯಾ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಈ ಸತ್ಯ ಬೆಳಕಿಗೆ ಬಂದಿದೆ. ಈ ಬಗ್ಗೆ ಅಲ್ಲಿನ ಸ್ಥಳೀಯರಿಗೆ

ಹಾಗೂ ನಗರಸಭೆಗಳ ಸದಸ್ಯರಿಗೆ ಎಚ್ಚರಿಕೆ ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ’.‘ಈ ಪ್ರದೇಶಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾ­ಗಿ­ರುವ ಸಂಬಂಧ ಸ್ಥಳೀಯರಿಂದ ದೂರು ಬಂದ ಹಿನ್ನೆಲೆಯಲ್ಲಿ ಜಿಲ್ಲೆಗಳಲ್ಲಿರುವ ಅಲ್ಲಿನ ನಗರಸಭೆಗಳ ಸದಸ್ಯರು, ಅರಣ್ಯ ಇಲಾಖೆಯ ಗಮನಕ್ಕೆ ಬಾರದಂತೆ ಅಕ್ರಮ­ವಾಗಿ ಈ ಕೃತ್ಯ ಎಸಗುತ್ತಿದ್ದಾರೆ. ಆದರೆ ಇದು ಕಾನೂನುಬಾಹಿರ’.‘ಅರಣ್ಯಗಳಲ್ಲಿ ಈಗಾಗಲೇ ನೀರು ಹಾಗೂ ಆಹಾ­ರದ ಅಭಾವದಿಂದ ಕಾಡು ಪ್ರಾಣಿಗಳು ಜನವಸತಿ ಪ್ರದೇ­ಶ­ಗಳತ್ತ ಬರುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಸಾಕು ಪ್ರಾಣಿಗಳಾದ ಬೀದಿ ನಾಯಿಗಳನ್ನು ಅರಣ್ಯಕ್ಕೆ ಬಿಟ್ಟರೆ, ಅವು ಚಿರತೆ­ಯಂತಹ ಮಾಂಸಹಾರಿ ಪ್ರಾಣಿಗಳಿಗೆ ಸುಲಭವಾಗಿ ಆಹಾರ­ವಾಗುತ್ತವೆ. ಇದರ ರುಚಿ ಹತ್ತಿ  ಚಿರತೆಗಳು ಸುಲಭವಾಗಿ ಸಿಗುವ ಬೇಟೆಯನ್ನು ಅರಸಿ ನಾಡಿನತ್ತ ಬರುವ ಸಾಧ್ಯತೆ ಹೆಚ್ಚಾಗಿದೆ ಎಂಬುದು ಅವರ ಅಭಿಪ್ರಾಯ.‘ಮಂಡ್ಯ ನಗರಸಭೆಯಲ್ಲಿ ಚುನಾಯಿತ ಪ್ರತಿನಿಧಿ­ಗಳು ಬೀದಿನಾಯಿಗಳನ್ನು ಅರಣ್ಯ ಪ್ರದೇಶಕ್ಕೆ ಸ್ಥಳಾಂತ­ರಿಸಲು ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದು, ಅದರಂತೆ ಈಗಾಗಲೇ ನೂರಾರು ಬೀದಿ ನಾಯಿಗಳನ್ನು ಹಿಡಿದು ಮುತ್ತತ್ತಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ’.ಆರೋಗ್ಯವಂತ ಬೀದಿನಾಯಿಗಳನ್ನು ಕೊಲ್ಲದಂತೆ ಹಾಗೂ ಸ್ಥಳಾಂತರಿಸದಂತೆ ಸುಪ್ರೀಂಕೋರ್ಟ್‌ ಆದೇಶ ನೀಡಿದ್ದರೂ, ಕೆಲ ಜಿಲ್ಲೆಗಳಲ್ಲಿನ ನಗರಸಭಾ ಸದಸ್ಯರು ನಿಯ­ಮಗಳನ್ನು ಉಲ್ಲಂಘಿಸಿ ಈ ಕೃತ್ಯಕ್ಕೆ ಕೈ ಹಾಕುತ್ತಿ­ದ್ದಾರೆ. ಈ ಸಂಬಂಧ ಮಂಡ್ಯ ನಗರಸಭೆಯ ಸದಸ್ಯರ ವಿರುದ್ಧ ಈಗಾಗಲೇ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಲಾಗಿದೆ ಎನ್ನುತ್ತಾರೆ.ಬೀದಿನಾಯಿಗಳ ಸಂಖ್ಯೆ ನಿಯಂತ್ರಣಕ್ಕೆ ಶಸ್ತ್ರಚಿಕಿತ್ಸೆ: ಇನ್ನು ಬೀದರ್‌ನಲ್ಲಿ ನಿತ್ಯ ಬೀದಿ ನಾಯಿಗಳನ್ನು ಬಹಳ ಕ್ರೂರವಾಗಿ ಹತ್ಯೆ ಮಾಡಲಾಗುತ್ತಿದೆ. ಹಾಸನದಲ್ಲೂ ಈ ಪ್ರಕ್ರಿಯೆ ಪ್ರಾರಂಭವಾಗಲಿದೆ. ಈ ರೀತಿ ಬೀದಿನಾಯಿ­­ಗಳನ್ನು ಹತ್ಯೆ ಮಾಡುವ ಬದಲು ಸಂತಾನ ಶಕ್ತಿ ನಿಯಂತ್ರಿಸಲು ನಗರಸಭೆ ಟೆಂಡರ್‌ ಕರೆದು ನಾಯಿ­ಗಳಿಗೆ ಶಸ್ತ್ರ ಚಿಕಿತ್ಸೆ ಮಾಡಿಸ­ಬಹುದು. ನಂತರ ವರ್ಷ­ಕ್ಕೊಮ್ಮೆ ರೇಬಿಸ್‌ ನಿರೋಧಕ ಲಸಿಕೆ ನೀಡುವ ಕಾರ್ಯ­ಕ್ರಮಗಳನ್ನು ಹಮ್ಮಿಕೊಳ್ಳ­ಬಹುದು. ಇದರಿಂದ ಬೀದಿ­ನಾಯಿಗಳ ಸಂಖ್ಯೆ ಹಾಗೂ ರೇಬಿಸ್‌ ಪ್ರಕ­ರಣ­ಗಳನ್ನು ಕಡಿಮೆ ಮಾಡಬಹುದು ಎಂದು ಪರಿಸರವಾದಿ ನವೀನ ಕಾಮತ್‌ ಅಭಿಪ್ರಾಯ­ಪಟ್ಟರು.ನಗರಸಭಾ ಅಧ್ಯಕ್ಷರಿಗೆ ನೋಟಿಸ್‌

ಮುತ್ತತ್ತಿ ಅರಣ್ಯ ಪ್ರದೇಶದಲ್ಲಿರುವ ಕಾವೇರಿ ವನ್ಯ­ಜೀವಿ ಧಾಮದಲ್ಲಿ ತಿಂಗಳ ಹಿಂದೆ ಬೀದಿ ನಾಯಿಗಳು ಜಿಂಕೆಗಳ ಮೇಲೆ ಗುಂಪುಗುಂಪಾಗಿ ದಾಳಿ ನಡೆಸಿದ ಘಟನೆ ನಡೆದಿತ್ತು. ಆಗಿನಿಂದ ಬಿಡಾಡಿ ನಾಯಿಗಳು ಅರಣ್ಯ ಪ್ರದೇಶವನ್ನು ಪ್ರವೇಶಿಸದಂತೆ ಕ್ರಮ ತೆಗೆದು­ಕೊಳ್ಳಲಾಗಿದೆ. ಈ ಸಂಬಂಧ ಅರಣ್ಯ ಸಿಬ್ಬಂದಿಗೂ ಎಚ್ಚರಿಕೆ ನೀಡಲಾಗಿದೆ. ಡಿಸೆಂಬರ್‌­ನಲ್ಲೂ ಮಂಡ್ಯ­ದಿಂದ ಬೀದಿನಾಯಿಗಳನ್ನುತಂದು ಕಾವೇರಿ ವನ್ಯ­ಜೀವಿ ಧಾಮ­ದಲ್ಲಿ ಬಿಡಲು ಪ್ರಯತ್ನಿಸಲಾಗಿತ್ತು. ಅದನ್ನು ಕಂಡ ನಮ್ಮ ಸಿಬ್ಬಂದಿ ತಡೆದಿದ್ದರು. ಈ ಬಗ್ಗೆ ಮಂಡ್ಯ ನಗರ­ಸಭಾ ಅಧ್ಯಕ್ಷರಿಗೆ ನೋಟಿಸ್‌ ಕಳು­ಹಿಸ­ಲಾಗಿದೆ. ಬೀದಿ­ನಾಯಿ­­ಗಳನ್ನು ಅರಣ್ಯಗಳಿಗೆ ತಂದು ಬಿಡುವುದರಿಂದ ಸಣ್ಣ ವನ್ಯಜೀವಿಗಳಿಗೆ ಹಾನಿ ಹಾಗೂ ಕೆಲವೊಂದು ರೋಗ­ಗಳು ವನ್ಯಜೀವಿಗಳಿಗೆ ಹರಡು­ತ್ತದೆ. ಅಲ್ಲದೆ ಚಿರತೆ ಹಾಗೂ ಇತರೆ ಪ್ರಾಣಿಗಳು ಈ ನಾಯಿಗಳನ್ನು ಹಿಂಬಾಲಿಸಿಸುವ ಸಾಧ್ಯತೆ ಇರು­ತ್ತದೆ.

–ಕೆ.ವಿ. ವಸಂತರೆಡ್ಡಿ, ಉಪ ಅರಣ್ಯ  ಸಂರಕ್ಷಣಾಧಿಕಾರಿ, ಕಾವೇರಿ ವನ್ಯಜೀವಿ ಧಾಮಸತ್ಯಕ್ಕೆ ದೂರವಾದ ಮಾತು


ಸಾಕು ಪ್ರಾಣಿಯಾಗಿರುವ ಬೀದಿ ನಾಯಿಗಳನ್ನು ಕಾಡಿಗೆ ಬಿಡುವುದು ಅಮಾನವೀಯ. ನಾಯಿ­ಗಳನ್ನು ಅರಣ್ಯಕ್ಕೆ ಬಿಡುವುದರಿಂದ ವನ್ಯಜೀವಿಗಳು ಜನವಸತಿ ಪ್ರದೇಶಗಳಿಗೆ ಬಂದು ದಾಳಿ ನಡೆಸು­ವುದು ಸತ್ಯಕ್ಕೆ ದೂರವಾದ ಮಾತು. ಆದರೆ ಕಾಡಿ­ನಲ್ಲಿ ಜೀವಿಸುವುದನ್ನೇ ಅರಿಯದ ಜೀವಿಗಳನ್ನು ಈ ರೀತಿ ಕಾಡಿಗೆ ಬಿಡುವುದರಿಂದ ಬಹಳ ದಿನ ಅವು ಜೀವಿಸುವುದಿಲ್ಲ. ಹೀಗೆ ಸತ್ತ ನಾಯಿಗಳಿಂದ ವನ್ಯ ಜೀವಿಗಳಿಗೆ ರೋಗ ಹರಡುತ್ತದೆ. ಹುಲಿಗಳು ಬೇಟೆ­ಯಾಡಲು ದೈಹಿಕವಾಗಿ ನಿಶ್ಯಕ್ತವಾದಾಗ ಮಾತ್ರ ಸುಲಭವಾಗಿ ಸಿಗುವ ಆಹಾರವನ್ನು ಹುಡುಕುತ್ತದೆ. ಈ ಸಮಯದಲ್ಲಿ ಅದು ಜನವಸತಿ ಪ್ರದೇಶಗಳತ್ತ ಬರುತ್ತದೆ. ಆದರೆ ಕಾಡಿನ ಅಂಚು ಪ್ರದೇಶಗಳಲ್ಲಿ ಜೀವಿಸುವ ಚಿರತೆಗಳು ಬೇರೆ ಆಹಾರ ಸಿಗದಾಗ ಪರ್ಯಾಯವಾಗಿ ನಾಯಿಗಳನ್ನು ಬೇಟೆಯಾಡು­ತ್ತವೆ.

–ಕೃಪಾಕರ, ವನ್ಯಜೀವಿ ನಡವಳಿಕೆ ತಜ್ಞಪ್ರಾಣಿಗಳಿಗೆ ಹರಡುವ ರೋಗಗಳು


ಬೀದಿನಾಯಿಗಳನ್ನು ಕಾಡಿಗೆ ಬಿಡು­ವು­ದರಿಂದ ‘ಕೆನಲ್‌ ಕಾಫ್’, ‘ಕೆನೈನ್‌ ಡಿಸ್ಟೆಂಪರ್‌’, ‘ಪಾರ್ವೋ ವೈರಲ್‌ ಎಂಟ­ರೈಟೀಸ್‌’, ‘ಪಾರ್ವೋ ವೈರಲ್‌ ಗ್ಯಾಸ್ಟ್ರೋ ಎಂಟರೈಟೀಸ್‌’ ಹಾಗೂ ‘ಪ್ಯಾರಾ ಇನ್‌ಫ್ಲುಯೆನ್ಜಾ’ ರೋಗಗಳು ಗಾಳಿ ಮೂಲಕ ಹರಡ­ಬಹುದು.

‘ಲ್ಯಾಪ್ಟೊ  ಸ್ಪೈರೋ­ಸಿಸ್‌’ (ಮೂತ್ರ ಸೇವನೆಯಿಂದ ಹರಡು­ತ್ತದೆ), ಜತೆಗೆ ರೇಬಿಸ್‌ ಸೋಂಕಿತ ನಾಯಿ­ಗಳಿಂದ ರೇಬಿಸ್‌ ಸಹ ಬರ­ಬಹುದು. ರೋಗ ನಿರೋಧಕ ಶಕ್ತಿ ಇಲ್ಲದ ವನ್ಯಜೀವಿ­ಗಳು ವೈರಲ್‌ ಸೋಂಕಿ­ನಿಂದ ಕೆಲವೇ ದಿನಗಳಲ್ಲಿ ಸಾವನ್ನಪ್ಪಬಹುದು. 

–ಡಾ.ಎನ್‌.ಬಿ. ಶಿವಪ್ರಕಾಶ್‌, ಪಶುವೈದ್ಯರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry