ಬೀದಿಬದಿ ಹೋಟೆಲ್ ಮೇಲೆ ಪ.ಪಂ ದಾಳಿ

7

ಬೀದಿಬದಿ ಹೋಟೆಲ್ ಮೇಲೆ ಪ.ಪಂ ದಾಳಿ

Published:
Updated:

ಕುಶಾಲನಗರ: ಪಟ್ಟಣದಲ್ಲಿ ಶುಚಿತ್ವ ಇಲ್ಲದ ಹೋಟೆಲ್‌ಗಳು ಮತ್ತು ಬೀದಿ ಬದಿಯ ಹೋಟೆಲ್‌ಗಳ ಮೇಲೆ ಪಟ್ಟಣ ಪಂಚಾಯ್ತಿ ವತಿಯಿಂದ ಶುಕ್ರವಾರ ದಾಳಿ ನಡೆಸಲಾಯಿತು.ಪಟ್ಟಣ ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಮುಖ್ಯಾಧಿಕಾರಿ ಕಲ್ಲೇಶಯ್ಯ ನೇತೃತ್ವದಲ್ಲಿ ಆರೋಗ್ಯಾಧಿಕಾರಿ ಎಂ.ಪಿ.ಮಹೇಶ್‌ಕುಮಾರ್, ಸಿಬ್ಬಂದಿ ವಿವಿಧ ಹೋಟೆಲ್‌ಗಳಿಗೆ ತೆರಳಿ ಅಶುಚಿತ್ವದಿಂದ ಕೂಡಿದ್ದ ಆಹಾರ ಪದಾರ್ಥಗಳನ್ನು ವಶಪಡಿಸಿಕೊಂಡರು.ದಾಳಿ ಸಂದರ್ಭ ಹೋಟೆಲ್‌ಗಳಲ್ಲಿ ಅಶುಚಿತ್ವಕ್ಕೆ ಕಾರಣವಾದ ಕೆಲ ವಸ್ತುಗಳು ಸೇರಿದಂತೆ ಹಾಳಾಗುವ ಸ್ಥಿತಿಯಲ್ಲಿದ್ದ ಮಾಂಸ, ಮೀನು, ತರಕಾರಿಗಳನ್ನು ಮತ್ತಿತರ ಪರಿಕರಗಳನ್ನು ವಶಪಡಿಸಿಕೊಳ್ಳಲಾಯಿತು.ಇದೇ ವೇಳೆ ಅಶುಚಿತ್ವಕ್ಕೆ ಕಾರಣವಾದ ಹೋಟೆಲ್‌ಗಳಿಗೆ ಪಂಚಾಯ್ತಿ ವತಿಯಿಂದ ನೋಟಿಸ್ ಜಾರಿ ಮಾಡಲಾಗಿದೆ. ಬೀದಿ ಬಳಿ ನೈರ್ಮಲ್ಯ ರಹಿತ  ಹೋಟೆಲ್ ನಡೆಸಬಾರದು ಎಂದು ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ ಎಂದು ವಿಕ್ಟರ್ ಸೋನ್ಸ್ ತಿಳಿಸಿದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry