ಬೀದಿ ನಾಯಿ ಹಾವಳಿ; ಮಹಿಳೆಗೆ ಗಾಯ

7

ಬೀದಿ ನಾಯಿ ಹಾವಳಿ; ಮಹಿಳೆಗೆ ಗಾಯ

Published:
Updated:

ಬೆಂಗಳೂರು:  ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಜ್ಞಾನಜ್ಯೋತಿ ನಗರದಲ್ಲಿ ನಾಯಿಯೊಂದು ಮಹಿಳೆಯೊಬ್ಬರನ್ನು ಕಚ್ಚಿ ಗಂಭೀರವಾಗಿ ಗಾಯಗೊಳಿಸಿದೆ.

ಜ್ಞಾನಜ್ಯೋತಿ ನಗರದ ಅವಿನಾಶ್ ಅವರ ಪತ್ನಿ ಜ್ಯೋತಿ ತೀವ್ರ ಗಾಯಗೊಂಡಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ತುಳಸಿ ಪೂಜೆಗಾಗಿ ಅವರು ನ.25ರಂದು ಮಲ್ಲತ್ತಹಳ್ಳಿಯಲ್ಲಿರುವ ತಮ್ಮ ತಾಯಿಯ ಮನೆಗೆ ಹೋಗುತ್ತಿದ್ದರು. ಈ ವೇಳೆ ನಾಯಿಯೊಂದು ಏಕಾಏಕಿ ಅವರ ಮೇಲೆ ದಾಳಿ ನಡೆಸಿದೆ.

`ಘಟನೆಯಲ್ಲಿ ಜ್ಯೋತಿಯ ಅರ್ಧ ಮೂಗು ತುಂಡಾಗಿದೆ. ಬಲಗಣ್ಣಿಗೆ ಗಂಭೀರ ಗಾಯವಾಗಿದ್ದು, ಕೈ ಕಾಲುಗಳಿಗೂ ಸಣ್ಣ ಪುಟ್ಟ ಗಾಯಗಳಾಗಿವೆ~ ಎಂದು ಅವರ ಪತಿ ಅವಿನಾಶ್ `ಪ್ರಜಾವಾಣಿ~ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry